ಕರೋನಾ ಸೈನಿಕರಾಗಲು ಜಿಲ್ಲೆಯಲ್ಲಿ ಯುವಕರ ಉತ್ಸಾಹ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಹಾವೇರಿ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಾಸ್ ಸಂಸ್ಥೆೆ ಹಾಗೂ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಮಹಾಮಾರಿ ಕರೋನಾ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಣ್ಗಾಾವಲಾಗಿ ಕೆಲಸ ಮಾಡಲು ಹಾವೇರಿ ಕರೋನಾ ಸೈನಿಕರ ತಂಡ ಸಜ್ಜಾಗಿದೆ.

ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ಹಿರೆಕೇರೂರು, ಶಿಗ್ಗಾಾಂವ್, ಸವಣೂರು ಸೇರಿದಂತೆ 37 ಜನರು ಆನ್‌ಲೈನ್ ಮೂಲಕ ಕರೋನಾ ನಿಯಂತ್ರಣ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸ್ವಯಂ ಪ್ರೇರಣೆಯಿಂದ ನೊಂದಾಯಿಸಿಕೊಂಡು ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಂಡು ಬರುವ ವದಂತಿಗಳನ್ನು ಪತ್ತೆೆಹಚ್ಚಿಿ ಅವುಗಳ ನೈಜತೆಯನ್ನು ಪರಾಮರ್ಶೀಸಿ ಮಾಹಿತಿ ನೀಡಲಿದೆ. ಸ್ಥಳೀಯ ವಿದ್ಯಾಾಮಾನಗಳ ಬಗ್ಗೆ ಮಾಹಿತಿ ನೀಡುವುದು ಕರೋನಾ ಸೈನಿಕರ ಕೆಲಸವಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರೊಂದಿಗೆ ಕಾರ್ಯನಿರ್ವಹಿಸುವ ಇವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರೆಡ್ ಕ್ರಾಾಸ್ ಸಂಸ್ಥೆೆಯ ವತಿಯಿಂದ ಗುರುತಿನ ಚೀಟಿ ಹಾಗೂ ಸುರಕ್ಷಿತ ಕಿಟ್‌ಗಳನ್ನು ನೀಡಲಾಗುವುದು.

ಹಾವೇರಿ ವಾರ್ತಾ ಭವನದಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ ಮಾರ್ಗಸೂಚಿ ಹಾಗೂ ಮಾಹಿತಿಯನ್ನು ಕರೋನಾ ಸೈನಿಕರಿಗೆ ನೀಡಲಾಯಿತು. ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಹಾಗೂ ಭಾರತೀಯ ರೆಡ್ ಕ್ರಾಾಸ್ ಸಂಸ್ಥೆೆಯ ನಿಲೇಶ್ ಇತರರು ಉಪಸ್ಥಿತರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter