ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ : ದಾರಿ ಯಾವುದಯ್ಯ ನಮ್ಮ ಮಾಗಾಣಿಗೆ ಎಂದು ಇಲ್ಲಿನ ಕೃಷಿಕರು ಚಿಂತಿಸುವಂತಾಗಿದೆ . ಹೌದು ಪಟ್ಟಣದ ಮತ್ತು ಮರಿಯಮ್ಮನಹಳ್ಳಿ ತಾಂಡದ ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳಲು ಇದ್ದ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ-50 ಕ್ಕೆ ಅಪೋಶನವಾಗಿದೆ .
ಡಣಾಯಕನ ಕೆರೆ ಮಾಗಾಣಿ ಪ್ರದೇಶದಲ್ಲಿ ಸುಮಾರು 1000-1600 ಎಕರೆ ಗದ್ದೆಗಳ ಪ್ರದೇಶ ಹೊಂದಿದ್ದು, ಈ ಗದ್ದೆಗಳಿಗೆ ರೈತರು, ಎತ್ತಿನಬಂಡಿಗಳು ತೆರಳಲು ರಾಷ್ಟ್ರೀಯ ಹೆದ್ದಾರಿ13 ಕ್ಕೆ ಹೊಂದಿಕೊಂಡು ಇದ್ದ ಮಾಗಾಣಿ ರಸ್ತೆ ದಾಟಿಕೊಂಡು ರೈತರು ತಮ್ಮ ಗದ್ದೆಗಳಿಗೆ ತೆರಳುತ್ತಿದ್ದರು.
ಇದು ಸುಮಾರು ವರ್ಷಗಳಿಂದ ರೈತರಿಗೆ, ಡಣಾಯಕನಕೆರೆ ಗ್ರಾಮಕ್ಕೆ ತೆರಳುವವರಿಗೆ ಅನುಕೂಲಕರವಾಗಿತ್ತು .ಆದರೆ ಈಗ ರಾಷ್ಟ್ರೀಯ ಹೆದ್ದಾರಿ ಅಗಲಿಕರಿಸಿದ ಹಿನ್ನೆಲೆಯಲ್ಲಿ ಮಾಗಾಣಿ ರಸ್ತೆಗೆ ತೆರಳಲು ಸಾಧ್ಯವಿಲ್ಲದಂತಾಗಿದೆ.