ಯಾವುದೇ ಕಾರಣಕ್ಕೂ ಬಿ.ಜೆ.ಪಿ. ಪಕ್ಷವನ್ನು ತೊರೆಯುವುದಿಲ್ಲ: ಶಾಸಕ ಎಂ.ಎಸ್.ಸೋಮಲಿಂಗಪ್ಪ

ಬೆಳಗಾಯಿತು ವಾರ್ತೆ

ಸಿರುಗುಪ್ಪ: ತಾಲೂಕಿನಲ್ಲಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಸಲುವಾಗಿ ನಮ್ಮನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರುತ್ತಾರೆ ಎನ್ನುವ ವದಂತಿಯನ್ನು ಕೆಲವರು ದೃಶ್ಯಮಾಧ್ಯಮಗಳ ಮೂಲಕ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಬಿ.ಜೆ.ಪಿ. ಪಕ್ಷವನ್ನು ತೊರೆಯುವುದಿಲ್ಲ. ಕಾರ್ಯಕರ್ತರು ಊಹ ಪೂಹಗಳಿಗೆ ಗಮನ ನಿಡದಿರಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು

ನಗರದ ಬಿ.ಜೆ.ಪಿ. ಪಕ್ಷದ ಕಛೇರಿಯಲ್ಲಿ 2019 ಸಂಘಟನ ಪರ್ವ ಸದಸ್ಯತ ಅಭಿಯಾನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ 226 ಬೂತ್‍ಗಳಲ್ಲಿ ಬೂತ್‍ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಿದಲ್ಲಿ ದೇಶವನ್ನು ಸದೃಢವಾಗಿ ರೂಪಿಸಲು ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಲು ನರೇಂದ್ರಮೋದಿಯಂತಹ ನಾಯಕರನ್ನು ಪ್ರಧಾನಿಯಾಗಿಸಲು ಸಾಧ್ಯವಾಗುತ್ತದೆ.

ದೇಶದಲ್ಲಿ ಇಂದಿಗೂ ಅನಕ್ಷರತೆ, ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು, ಪ್ರಧಾನಿಯವರು ವಿಶ್ವದಲ್ಲಿಯೇ ಭಾರತವನ್ನು ನಂ.1 ಆಗಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷವು ಅಧಿಕಾರದಲ್ಲಿ ಇಲ್ಲದಿದ್ದರೂ ಶಾಸಕರ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ತಾಲೂಕನ್ನು ಅಭಿವೃದ್ಧಿ ಗೊಳಿಸಲಾಗುತ್ತದೆ.
ಸಾರ್ವಜನಿಕರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಯೋಜನೆಗಳ ಫಲ ದೊರಕಿಸಲು ಶ್ರಮಿಸುತ್ತಿದ್ಧೇನೆ. 2014ರಲ್ಲಿ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡ ಸದಸ್ಯತ್ವ ಅಭಿಯಾನದಲ್ಲಿ ಪಕ್ಷಕ್ಕೆ 10ಕೋಟಿ ಸದಸ್ಯರನ್ನು ನೊಂದಾಯಿಸುವ ಮೂಲಕ ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರನ್ನು ಒಳಗೊಂಡ ಪಕ್ಷ ಎನ್ನುವ ಹೆಗ್ಗಳಿಕೆ ಹೊಂದಿದ್ದೇವೆ.

ಪ್ರಧಾನಿಯವರು ವಾರ್ಷಿಕ ರೂ.6ಸಾವಿರ ಸಹಾಯಧನ ನೀಡುವ ರೈತರ ಕಾರ್ಯಕ್ರಮ, ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ನೀಡುವ ಉಜ್ವಲ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಿಂದ ತಾಲೂಕಿನ ಜನರು ಕೂಡ ಲಾಭ ಪಡೆದಿದ್ದಾರೆ, ಆದ್ದರಿಂದ ಜು.06ರಂದು ಮೋದಿಯವರು ಸದಸ್ಯತ್ವ ಅಭಿಯಾನಕ್ಕೆ ರಾಷ್ಟ್ರ ಮಟ್ಟದಲ್ಲಿ ಚಾಲನೆ ನೀಡಲಿದ್ದು, ಕಳೆದ ಬಾರಿ ತಾಲೂಕಿನಲ್ಲಿ 50ಸಾವಿರ ಸದಸ್ಯರನ್ನು ನೊಂದಾಯಿಸಲಾಗಿತ್ತು. ಈ ಬಾರಿ ಒಂದು ಲಕ್ಷ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸದಸ್ಯತ್ವ ಅಭಿಯಾನದ ಜಿಲ್ಲಾ ಸಂಚಾಲಕ ಓಬಳೇಶ ಮಾತನಾಡಿ ಜು.06ರಂದು ಸದಸ್ಯತ್ವ ನೊಂದಣಿ ಪ್ರಾರಂಭಗೊಳ್ಳಲಿದ್ದು, ಆ.11ರಂದು ಕೊನೆಗೊಳ್ಳಲಿದ್ದು, ಬಿ.ಜೆ.ಪಿ. ಕಾರ್ಯಕರ್ತರು ಶಕ್ತಿಕೇಂದ್ರದ ಬೂತ್ ಮಟ್ಟದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಮೊಬೈಲ್ ಮೂಲಕ 8980808080 ಮಿಸ್‍ಕಾಲ ನೀಡುವ ಮೂಲಕ ಸದಸ್ಯತ್ವ ಹೊಂದಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪ. ಪಕ್ಷದ ಸದಸ್ಯರನ್ನಾಗಿ ನೊಂದಾಯಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ತಾ.ಅಧ್ಯಕ್ಷ ಕೊಂಚಿಗೇರಿ ನಾಗರಾಜಗೌಡ, ತಾ.ಸದಸ್ಯತ್ವ ಅಭಿಯಾನದ ಸಂಚಾಲಕ ಎಂ.ಕೋಟೇಶ್ವರರೆಡ್ಡಿ, ಸಹ ಸಂಚಾಲಕ ಎಂ.ಎಸ್.ಸಿದ್ದಪ್ಪ, ತಾ.ಪಂ.ಅಧ್ಯಕ್ಷೆ ದೇವಮ್ಮ ಹೆಚ್.ಕೆ.ಪಕ್ಕೀರಪ್ಪ, ಹಿರಿಯಮುಖಂಡ ಮಾರೆಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *