ಮಳೆಯಲ್ಲಿ ಹಂಪಿ ವೀಕ್ಷಣೆ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಹಂಪಿ :
ಕಳೆದ ಎರಡು ದಿನಗಳಿದ ಬೆಳ್ಳಂಬೆಳಿಗ್ಗೆ ಸುರಿದ ಜಿಟಿ ಜಿಟಿ ಮಳೆಯಲಿ ಹಂಪಿಗೆ ಭೇಟಿ ನೀಡಿದ ಪ್ರವಾಸಿಗರು, ಮಳೆಯನ್ನು ಲೆಕ್ಕಿಸದೇ ಐತಿಹಾಸಿಕ ಹಂಪಿ ಸ್ಮಾರಕಗಳು ವೀಕ್ಷಿಸಿ ಸಂತಸ ಪಟ್ಟರು. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಸುರಿದ ಜಿಟಿ ಜಿಟಿ ಮಳೆ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಿತ್ತು.
ಲಕ್ಷ್ಮೀನರಸಿಂಹ, ಬಡವಿಲಿಂಗದ ಬಳಿ ಕೊಡೆಗಳನ್ನು ಹಿಡಿದ ಪ್ರವಾಸಿಗಳು ಹಂಪಿ ಸ್ಮಾರಕಗಳಿಗೆ ಮಾರು ಹೋದರು. ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿಸ್ನಾನ ಗೃಹ, ವಿಜಯ ವಿಠಲ ದೇವಸ್ಥಾನದ ಬಳಿ ಪ್ರವಾಸಿಗರು ದಂಡು ಕಂಡು ಬಂದಿತು. ವಿಜಯವಿಠಲ ದೇಗುಲ ವೀಕ್ಷಣೆಗಾಗಿ ಪ್ರವಾಸಿಗರು, ಎಂದಿನಂತೆ ಬ್ಯಾಟರಿ ಚಾಲಿತ ವಾಹನಲ್ಲಿ ತೆರಳಿದರು.ಭಾನುವಾರ ರಜೆಯಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಯ ಕಡೆ ಮುಖ ಮಾಡಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *