ಪತ್ತೆಯಾಯ್ತು ವಿಕ್ರಂ ಲ್ಯಾಂಡರ್‌

ಪತ್ತೆಯಾಯ್ತು ವಿಕ್ರಂ ಲ್ಯಾಂಡರ್‌

ಬೆಳಗಾಯಿತು ವಾರ್ತೆ
ಬೆಂಗಳೂರು:ಮಹತ್ತರ ಬೆಳವಣಿಗೆಯೊಂದರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇತ್ತೀಚೆಗೆ ಚಂದ್ರನ ಮೇಲ್ಮೈ ಮೇಲೆ ಇಳಿ ಯುವಾಗ ಸಂಪರ್ಕ ಕಡಿದುಕೊಂಡಿದ್ದ ಚಂದ್ರಯಾನ -2 ಲ್ಯಾಂಡರ್‌ ಪತ್ತೆ ಯಾಗಿದೆ ಎಂದು ಮಾಹಿತಿ ನೀಡಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್‌, ಚಂದ್ರನ ಕಕ್ಷೆ ಯ ಲ್ಲಿ ಸುತ್ತುವರಿಯುತ್ತಿರುವ ಆರ್ಬಿಟರ್, ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು, ಅದರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

‘ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್‌ ಪತ್ತೆಯಾಗಿದೆ. ಆರ್ಬಿಟರ್‌ ಲ್ಯಾಂಡರ್‌ ನ ಥರ್ಮಲ್‌ ಚಿತ್ರವನ್ನು ಕಳುಹಿಸಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ನಾವು ಸಂಪರ್ಕ ಸಾಧಿಸಲು ಯತ್ನಿಸುತ್ತಿ ದ್ದೇವೆ. ಈ ಕುರಿತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗು ವುದು’ ಎಂದು ಶಿವನ್‌ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಆಯತಪ್ಪಿ ಬಿದ್ದಿದೆಯೇ?

ಆದರೆ, ಇದು ಚಂದ್ರನ ಮೇಲೆ ಯೋಜನೆಯಂತೆ ಮೃದು ಸ್ಪರ್ಶ ಮಾಡಿದೆಯೇ, ಇಲ್ಲವೇ ಆಯತಪ್ಪಿ ಬಿದ್ದಿದೆಯೇ ಎಂಬುದು ಪತ್ತೆಯಾಗ ಬೇಕಿದೆ. ಲ್ಯಾಂಡರ್‌ ಮೃದುವಾಗಿ ಚಂದ್ರನ ಮೇಲ್ಮೈ ಅನ್ನು ಸ್ಪರ್ಶಿಸಿದ್ದಲ್ಲಿ, ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಹಾಗೂ ಚೀನಾ ರಾಷ್ಟ್ರಗಳು ಇದರಲ್ಲಿ ಯಶಸ್ವಿಯಾಗಿವೆ. ಆದರೆ, ಲ್ಯಾಂಡರ್‌ ಸುರಕ್ಷಿತವಾಗಿದೆಯೇ, ಅದರ ಇಂಜಿನ್‌ ಗಳಿಗೆ ಹಾನಿಯಾಗಿದೆಯೇ ಎಂಬುದರ ಕುರಿತು ಇನ್ನೂ ಮಾಹಿತಿ ಕಲೆ ಹಾಕಬೇಕಿದೆ. ಇಸ್ರೋ ವಿಜ್ಞಾನಿಗಳು, ಇದು ಚಂದ್ರನ ಮೇಲ್ಮೈ ಮೇಲೆ ಕುಸಿದು ಬಿದ್ದಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ದತ್ತಾಂಶಗಳ ಪರಿಶೀಲನೆ

ಈಗಾಗಲೇ ಇಸ್ರೋದ ವೈಫಲ್ಯ ವಿಶ್ಲೇಷಣಾ ಸಮಿತಿ (ಎಫ್‌ ಎಸಿ) ಲ್ಯಾಂಡರ್‌ ಭೂಮಿಯೊಂದಿಗೆ ಸಂಪರ್ಕ ಕಡಿದುಕೊಳ್ಳುವ ಮುನ್ನ ಕೊನೆಯ ಕ್ಷಣದವರೆಗೆ ಕಳುಹಿಸಿದ ದತ್ತಾಂಶಗಳನ್ನು ಪರಿಶೀಲಿಸುತ್ತಿದೆ. ಆರ್ಬಿಟರ್‌ ನಲ್ಲಿರುವ ಅತಿ ಹೆಚ್ಚಿನ ಸ್ಪಷ್ಟತೆಯ ಕ್ಯಾಮೆರಾ ಮೂಲಕ ಕಳುಹಿಸಿರುವ ಚಿತ್ರಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಶವಾಗಿ ಅರಿಯಲು ನೆರವಾಗುತ್ತವೆ.

ಜುಲೈ 22ರಂದು ಉಡಾವಣೆಗೊಂಡಿದ್ದ ಜಿಎಸ್‌ ಎಲ್‌ ವಿ ಎಂಕ -3 ಉಡಾವಣಾ ವಾಹಕದಲ್ಲಿ ಲ್ಯಾಂಡರ್‌ ಹಾಗೂ ರೋವರ್‌ ಗಳನ್ನು ಹೊತ್ತ 2,379 ಕೆಜಿ ತೂಕದ ಆರ್ಬಿಟರ್, ಸೆ. 3ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿತ್ತು.

ನಂತರ ಅದರಿಂದ 1,471 ಕೆಜಿ ತೂಕದ ಲ್ಯಾಂಡರ್‌ ಹೊರ ಬಂದಿತ್ತು. ಸೆ. 7ರಂದು ಮುಂಜಾನೆ 1.39ಕ್ಕೆ ಈ ಲ್ಯಾಂಡರ್‌ ಚಂದ್ರನ ಮೇಲ್ಮೈಯತ್ತ ಇಳಿಯಲಾರಂಭಿಸಿತ್ತು.

ನಿಗದಿಯಂತೆ ಅದು 15 ನಿಮಿಷಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಕೆಳಗಿಳಿಯಬೇಕಿತ್ತು. ಕೆಲ ಗಂಟೆಗಳ ನಂತರ ಅದರಿಂದ 27 ಕೆಜಿ ತೂಕದ ಪ್ರಜ್ಞಾನ್‌ ರೋವರ್‌ ಹೊರಬಂದು ಅಲ್ಲಿನ ಸ್ಥಿತಿಗತಿ, ನೀರಿನ ಲಭ್ಯತೆಯ ಕುರಿತು ಭೂಮಿಯಲ್ಲಿನ ಕೇಂದ್ರಕ್ಕೆ ಮಾಹಿತಿ ರವಾನಿಸಬೇಕಿತ್ತು.ಆದರೆ, 1.52ರ ಸಮಯದಲ್ಲಿ ಮೇಲ್ಮೈಯಿಂದ ಕೇವಲ 2.1 ಕಿಮೀ ದೂರವಿರುವಾಗಲೇ ಲ್ಯಾಂಡರ್‌ ಭೂಮಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.