ಸಾಮಾಜಿಕ ಅಂತರ ಕಾಯಲು ಮಾರುಕಟ್ಟೆ ಸ್ಥಳಾಂತರ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಗರದ ದೊಡ್ಡ ಮಾರುಕಟ್ಟೆ ಹಾಗೂ ಸಣ್ಣ ಮಾರುಕಟ್ಟೆಯನ್ನು ನಗರದ ವಿವಿಧೆಡೆಗೆ ಸ್ಥಳಾಂತರಿಸಲಾಗಿದೆ.

ಕೊರೋನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪರಿಹಾರ. ದೊಡ್ಡ ಮಾರುಕಟ್ಟೆ ಹಾಗೂ ಸಣ್ಣ ಮಾರುಕಟ್ಟೆಯು ಅತ್ಯಂತ ಜನ ನೀಭಿಡತೆಯಿಂದ ಕೂಡಿರುವುದರಿಂದ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಈ ಮಾರುಕಟ್ಟೆಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಈ ಹೊಸ ಜಾಗದಲ್ಲಿ ಜನರು ನಿಗದಿತ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಕೊಳ್ಳುವ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ.

ಇನ್ನು ಮುಂದೆ ಬಳ್ಳಾರಿ ನಗರದ ಈ ಕೆಳಗೆ ನೀಡಿರುವ ಸ್ಥಳಗಳಲ್ಲಿ (ಚಿಲ್ಲರೆ) ರೀಟೇಲ್ ತರಕಾರಿ ಮತ್ತು ಹಣ್ಣು ಮಾರಾಟ ಮಾಡಲಾಗುತ್ತದೆ.

1) ಐಟಿಐ ಕಾಲೇಜ್ ಮೈದಾನ,
2) ಈದ್ಗಾ ಮೈದಾನ
3) ಮುನ್ಸಿಪಲ್ ಕಾಲೇಜು ಮೈದಾನ
4) ಎನ್ ಸಿ ಸಿ ಮೈದಾನ
5) ಸೇಂಟ್ ಜಾನ್ಸ್ ಶಾಲಾ ಮೈದಾನ
6) ಕಿತ್ತೂರುರಾಣಿ ಚನ್ನಮ್ಮ ಶಾಲಾ ಮೈದಾನ
7) ಜಿಲ್ಲಾ ಕ್ರೀಡಾಂಗಣ ಮೈದಾನ

ಬಳ್ಳಾರಿ ನಗರದ ನಾಗರೀಕರು ಈ ಸ್ಥಳಗಳಲ್ಲಿ ದೂರದೂರ ನಿಂತುಕೊಂಡು ಸಾಮಾಜಿಕ ಅಂತರದೊಂದಿಗೆ, ಮುಖಕ್ಕೆ ಮಾಸ್ಕ್ ಧರಿಸಿ ತರಕಾರಿ ಕೊಳ್ಳಲು ಹೋಗತಕ್ಕದ್ದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಎಪಿಎಂಸಿಯಲ್ಲಿ ಚಿಲ್ಲರೆ ಮಾರಾಟ ಇಲ್ಲ: ಶುಕ್ರವಾರದಿಂದ ಬಳ್ಳಾರಿಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣು (ಚಿಲ್ಲರೆ) ರೀಟೇಲ್ ವ್ಯಾಪಾರ ಇರುವುದಿಲ್ಲ. ಕೇವಲ ನೊಂದಣಿಯಾದ ಹಾಗೂ ಗುರುತಿನ ಚೀಟಿ ಹೊಂದಿದ ವ್ಯಾಪಾರಸ್ಥರು ಮಾತ್ರ ಎಪಿಎಂಸಿಯಲ್ಲಿ ತರಕಾರಿ ತೆಗೆದುಕೊಂಡು ಹೋಗಬೇಕು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter