ಬೆಳಗಾಯಿತು ವಾರ್ತೆ
ಹರಪನಹಳ್ಳಿ: ವಿದ್ಯಾರ್ಥಿಗಳೇ ಈ ದೇಶದ ಭವಿಷ್ಯ. ನೀವೆಲ್ಲ ಬುದ್ಧ, ಬಸವ, ಅಂಬೇಡ್ಕರ್ರಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ಶತ ಶತಮಾನಗಳಿಂದ ಮುಚ್ಚಿಟ್ಟ ಈ ದೇಶದ ನಿಜ ಇತಿಹಾಸವನ್ನು ಬಿಚ್ಚಿಡಬೇಕಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ಎನ್.ಜಿ.ಬಸವರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಎಸ್.ಎಸ್.ಎಂ.ಸಿ.ಕೆ ಪದವಿ ಪೂರ್ವ ಕಾಲೇಜಿನ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ದೇಶದಲ್ಲಿ ಕೆಲವು ಬೌದ್ಧಿಕ ದಿವಾಳಿತನ ಹೊಂದಿರುವವರು ಇಂದು ಸತ್ಯದ ಬೆನ್ನು ಬಿದ್ದವರನ್ನು ಹುಚ್ಚರೆಂದು ದೇಶದ್ರೋಹಿಗಳೆಂದು ಬಿಂಬಿಸುವ ಹುನ್ನಾರ ಸದ್ದಿಲ್ಲದೆ ನಡೆದಿದೆ ಎಂದರು.