ವಿಮ್ಸ್ ವೈದ್ಯರಿಂದ ಅಪರೂಪದ ಶಸ್ತ್ರ ಚಿಕಿತ್ಸೆ

ಬೆಳಗಾಯಿತು ವಾರ್ತೆ

ಬಳ್ಳಾರಿ: ವಿಜಯನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಅಪರೂಪ ಹಾಗೂ ಕ್ಲಿಷ್ಟಕರವಾದ ಶಸ್ತ್ರ

ಚಿಕಿತ್ಸೆಯೊಂದನ್ನು ಮಾಡಿದ್ದಾರೆ. ವಿಮ್ಸ್ ಆಸ್ಪತ್ತ್ರೆಯ ಡಾ|| ಶ್ರೀನಿವಾಸ್ ಮತ್ತು ತಂಡದಿಂದ ಮೊಣಕೈ ಕೀಲು ಮರು

ಜೋಡಣೆ (Elbow Replacement Arthroplasty) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು

ವಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ|| ಅರುಣ್ ಕುಮಾರ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಉತ್ತರ ಕರ್ನಾಟಕದಲ್ಲಿಯೇ,

ಅದರಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಶಸ್ತ್ರ ಚಿಕಿತ್ಸೆ ಮಾಡಿರುವುದು ವಿಶೇಷ.

ರಸ್ತೆ ಅಪಘಾತದಲ್ಲಿ ಬಲಗೈನ ಮೊಣಕೈ ಹಾಗೂ ಎಡಗೈನ ಮುಂಗೈಗಳನ್ನು ಕಳೆದುಕೊಂಡಿದ್ದ, ಮೊಳಕಾಲ್ಮೂರು ನಿವಾಸಿ

ಮಮತಾಜ್ ಎಂಬ 53 ವಯಸ್ಸಿನ ಮಹಿಳೆಗೆ ಮೊಣಕೈ ಕೀಲು ಜೋಡಣೆ ಹಾಗೂ ಎಡಗೈನ ಮುಂಗೈಗೆ ಟೆನ್ಸ್ (ಖಿeಟಿs)

ಸಲಕರಣೆ ಬಳಸಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರ ಚಿಕಿತ್ಸೆಗೆ ರೋಗಿ ಉತ್ತಮವಾಗಿ

ಸ್ಪಂದಿಸುತ್ತಿದ್ದು, ಗುಣಮುಖರಾ ಗುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸೆ ನೀಡಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಡಾ||

ಶ್ರೀನಿವಾಸ್ ಈ ಸಂದರ್ಭದಲ್ಲಿ ತಿಳಿಸಿದರು.ಖಾಸಗಿ ಆಸ್ಪತ್ತ್ರೆಯಲ್ಲಿ ಸುಮಾರು 2.5 ಲಕ್ಷದಷ್ಟು ವೆಚ್ಚ ಭರಿಸಬೇಕಾಗಿದ್ದ ಈ

ಅಪರೂಪ ಹಾಗೂ ಕ್ಲಿಷ್ಟಕರವಾದ ಈ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗಿದೆ. ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ರೋಗಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಉಚಿತವಾಗಿ

ಶಸ್ತ್ರಚಿಕಿತ್ಸೆ ಮಾಡಿರುವುದು ಗಮನಾರ್ಹವಾದ ಸಂಗತಿ.

ಆಯುಷ್ಮಾನ್ ಭಾರತ್:ಬಡವರ ಆಶಾಕಿರಣ

ರಾಜ್ಯದಲ್ಲಿ ಜಾರಿಯಲ್ಲಿರು ವ ಆಯುಷ್ಮಾನ್ ಭಾರ ತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಈ ರೀತಿಯ

ಶಸ್ತ್ರ ಚಿಕಿತ್ಸೆ ಮಾಡಿರುವುದು ವಿಮ್ಸ್‍ನ ಹೆಗ್ಗಳಿಕೆಯೇ ಸರಿ. ಬಡರೋಗಿಗಳಿಗೆ ಈ ಯೋಜನೆ ಯು ಹೇಗೆ ಸಹಾಯ

ಕವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಅತ್ಯಂತ ಉತ್ತಮ ಉದಾಹರಣೆಯಾಗಿದೆ. ಮೂಳೆಗಳು ಜೋಡಿಸಲು ಆಸಾಧ್ಯವಾದ

ರೀತಿಯಲ್ಲಿ ಅಪಘಾತದಲ್ಲಿ ಹಾನಿಗೊಳಗಾಗಿದ್ದ ಕಾರಣ ಮೊಣಕೈ ಕೀಲು ಮರು ಜೋಡಣೆಗೆ ವಿಮ್ಸ್ ವೈದ್ಯರು

ಮುಂದಾಗಿದ್ದರು. ಈ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಕೃತಕ ಕೀಲು ಹಾಗೂ ಟೆನ್ಸ್ ನಂತಹ ಸಲಕರಣೆಗಳ ಬೆಲೆಯೇ 45 ರಿಂದ

50 ಸಾವಿರದಷ್ಟಿದೆ. ಮೊಳಕಾಲ್ಮೂರಿನ ಈ ಬಡ ಮಹಿಳೆ ಶಸ್ತ್ರ ಚಿಕಿತ್ಸೆಗಾಗಿ 2 ರಿಂದ 3 ಲಕ್ಷ ವ್ಯಯಿಸುವುದು ಕಷ್ಟ

ಸಾಧ್ಯವಾಗಿತ್ತು. ಆದ್ದರಿಂದ ವಿಮ್ಸ್‍ನ ವೈದ್ಯರು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ

ನೊಂದಣಿ ಮಾಡಿಕೊಂಡು ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಈ ಯೋಜನೆ ಹಾಗೂ ವೈದ್ಯರ ಉತ್ತಮ

ಚಿಕಿತ್ಸೆಯಿಂದ ಆಕೆ ತನ್ನ ಕೈಗಳಿಗೆ ಮರುಜೀವ ಪಡೆದುಕೊಂಡಿದ್ದಾರೆ ಎನ್ನಬಹುದು.

ಬಳ್ಳಾರಿ ವಿಮ್ಸ್ ವೈದ್ಯರು ಮಾಡಿರುವ ಈ ಮೊಣಕೈ ಕೀಲು ಮರುಜೋಡಣೆಯ ಶಸ್ತ್ರ ಚಿಕಿತ್ಸೆ ಅತ್ಯಂತ ಅಪರೂಪ ಹಾಗೂ

ಕ್ಲೀಷ್ಟಕರವಾದದ್ದು. ಏಕೆಂದರೆ ಭಾರತದಲ್ಲಿಯೇ ಈ ಶಸ್ತ್ರ ಚಿಕಿತ್ಸೆ ಮಾಡುವ ಪರಿಣಿತ ವೈದ್ಯರ ಸಂಖ್ಯೆ ಕಡಿಮೆ ಇದೆ. ಇನ್ನೂ

ವೈದ್ಯ ಹಾಗೂ ಉತ್ತಮ ಸೌಲಭ್ಯ ಪಡೆಯುವಷ್ಟು ಆರ್ಥಿಕ ಶಕ್ತಿ ಸಾಮಾನ್ಯರಿಗೆ ಇರುವುದಿಲ್ಲ. ಬಡವರಿಗೆ ಉತ್ತಮ ಚಿಕಿತ್ಸೆ

ದೊರೆಯುವುದೇ ದುರ್ಲಭ ಎನ್ನಿಸುವಂತಹ ಪರಿಸ್ಥಿತಿಯಲ್ಲಿ ಈ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ನಿಜವಾಗಿಯೇ

ಬಡವರ ಪಾಲಿನ ನೈಜ ಆಶಾಕಿರಣ ವಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಅಭಯ ನೀಡುವ ಈ ಯೋಜನೆಯ

ಸದುಪಯೋಗ ಬಡರೋಗಿಗಳು ಪಡೆದುಕೊಳ್ಳಬೇಕು ಎಂದು ವಿಮ್ಸ್ ವೈದ್ಯರು ಹೇಳುತ್ತಾರೆ.

ಹಲವಾರು ಕುಂದುಕೊರತೆ ಹಾಗೂ ಅವ್ಯವಸ್ಥೆಗಳ ಆರೋಪಗಳನ್ನು ವಿಮ್ಸ್ ಹೊತ್ತುಕೊಂಡಿದೆ. ಆದರೂ ಜನಸಾಮಾನ್ಯರಿಗೆ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಅವರಿಗೆ ನೆನಪಾಗುವುದು ಇದೇ ವಿಮ್ಸ್. ಬದ್ಧತೆವುಳ್ಳ ವೈದ್ಯರು ಹಾಗೂ

ಜನೋಪಯೋಗಿ ಯೋಜನೆಗಳಿದ್ದಾಗ ಸರ್ಕಾರಿ ಆಸ್ಪತ್ರೆಗಳು ಕೂಡಾ ಹಲವು ಮಿತಿಗಳ ನಡುವೆ ಅತ್ಯುತ್ತಮ ಕಾರ್ಯ

ಮಾಡಬಹುದು ಎಂಬುದನ್ನು ಈ ಶಸ್ತ್ರಚಿಕಿತ್ಸೆ ಮೂಲಕ ವಿಮ್ಸ್ ವೈದ್ಯರು ಸಾಬೀತುಪಡಿಸಿದ್ದಾರೆ.

ವೈದ್ಯರ ತಂಡ : ಡಾ. ಗುರುದತ್ ಜೆ.ವಿ.,ಡಾ. ಶ್ರೀನಿವಾಸ್ .ಎನ್. ಡಾ. ದೇವೇಂದ್ರಪ್ಪ ಹೆಚ್.,ಡಾ. ಸಯ್ಯದ್ ಸಾದತ್

ಹುಸೇನ್,ಡಾ. ಶಡರಾಕ್,ಡಾ. ಶ್ರೀನಿವಾಸಲು, ಡಾ. ಕಿರಣ್

ಡಾ. ಬಾಲಸುಬ್ರಮಣ್ಯಂ ಹಾಗೂ ಇತರರು.

Leave a Reply

Your email address will not be published. Required fields are marked *