ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ

ಧಾರವಾಡ : ಕಳೆದ ಹದಿನೈದು-ಇಪ್ಪತ್ತು ವರ್ಗಳ ನಂತರ ಪ್ರಥಮವಾಗಿ ಧಾರವಾಡ ಶಹರದಲ್ಲಿ ಫಲಪು್ಪ ಪ್ರದರ್ಶನವನ್ನು ಆಯೋಜಿಸಿರುವುದು ಸಂತಸದ ವಿಷಯ ಎಂದು ಹಾಪಕಾಮ್ಸ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಹೇಳಿದರು.

ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಫಲಪು್ಪ ಪ್ರದರ್ಶನವನ್ನು ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಲದ ಫಲಪು್ಪ ಪ್ರದರ್ಶನದಲ್ಲಿ, ಶಿವರಾತ್ರಿಯ ಅಂಗವಾಗಿ ಈಶ್ವರ ಲಿಂಗಕ್ಕೆ ಪು್ಪಗಳಿಂದ ಅಲಂಕರಿಸಿರುವುದು ಮತ್ತು ಸಂಗೀತ ವಾಧ್ಯಗಳನ್ನು ಸಹ ವಿವಿಧ ಪು್ಪಗಳಿಂದ ಅಲಂಕರಿಸಿರುವುದು ವಿಶೇಷವಾಗಿದೆ. ಹಾಗೂ ರೈತರಿಗೆ ತೋಟಗಾರಿಕೆ ಬೆಳೆ ಬೆಳೆಯಲು ಪಾಲಿ ಮನೆ, ಹಸಿರುಮನೆ, ಒಣ ಮೆಣಸಿನಕಾಯಿ ಒಣಗಿಸುವ ವಿನೂತನ ಮಾದರಿ ಇತ್ಯಾದಿಗಳು ರೈತರಿಗೆ ಹಾಗೂ ನಗರ ವಾಸಿಗಳಿಗೆ ವಿನೂತನ ತಾಂತ್ರಿಕತೆಗಳ ಲಾಭವನ್ನು ಪಡೆಯಲು ತಿಳಿಸಿದರು.

ನಿವೃತ ತೋಟಗಾರಿಕೆ ಅಧಿಕಾರಿ ಊಆಒಅ ಎ.ಜಿ. ದೇಶಪಾಂಡೆ, ಪ್ರಗತಿಪರ ರೈತರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ, ಪರಿಸರವಾದಿ ಶಂಕರ ಕುಂಬಿ ತೋಟಗಾರಿಕೆ ಉಪನಿರ್ದೇಶಕರು ರಾಮಚಂದ್ರ ಮಡಿವಾಳ ಸೇರಿದಂತೆ ಇತರರು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಿದ ಫಲಪು್ಪ ಪ್ರದರ್ಶನವು ಲ್ಯಾಂಡ್‌ ಸ್ಕೆಪ್‌ ಮಾದರಿಯಲ್ಲಿ ವಿವಿಧ ಜಾತಿ ಪು್ಪಗಳನ್ನು ಮತ್ತು ಹೂಗಳಿಂದ ಅಲಂಕರಿಸಿದ ವಿವಿಧ ಮಾದರಿಗಳು ವಿಶೇವಾಗಿ ಆಕರ್ಷಿಣಿಯವಾಗಿವೆ. ಪ್ರದರ್ಶನದಲ್ಲಿ ಎಲ್ಲ ಮಾದರಿಯ ವಿನೂತನ ಮಾದರಿಗಳನ್ನು ವೀಕ್ಷಿಸಿದ ನಗರವಾಸಿಗಳು ಹಾಗೂ ರೈತರು ತಮ್ಮ ಮನೆಯ ಅಂಗಳ ಹಾಗೂ ತೋಟಗಳಲ್ಲಿ ಹೆಚ್ಚಿನ ವಿನೂತನ ಮಾದರಿಗಳನ್ನು ಅಳವಡಿಸಿಕೊಂಡು, ಒಳಾಂಗಣ ತೋಟದಲ್ಲಿ ಹೆಚ್ಚು ಹೆಚ್ಚು ಪು್ಪಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಯಬೇಕು. – ಎ.ಜಿ. ದೇಶಪಾಂಡೆ, ಹೆಚ್‌ಡಿಎಮ್‌ಸಿ ನಿವೃತ ತೋಟಗಾರಿಕೆ ಅಧಿಕಾರಿ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter