ಮುಂದಿನ ವರ್ಷ ಒಲಿಂಪಿಕ್ಸ್ ನಡೆದರೂ ಟೋಕಿಯೊ 2020 ಆಗಿ ಉಳಿಯಲಿದೆ

Share on facebook
Share on twitter
Share on linkedin
Share on whatsapp
Share on email

ಟೋಕಿಯೊ: ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು 2021 ರವರೆಗೆ ಮುಂದೂಡಲಾಗಿದೆ, ಆದರೆ ಕ್ರೀಡಾಕೂಟವನ್ನು ಮರುಹೆಸರಿಸಲಾಗುವುದಿಲ್ಲ ಮತ್ತು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಟೋಕಿಯೋ 2020 ಆಗಿ ಉಳಿಯಲಿದೆ ಎಂದು ತಿಳಿಸಿದೆ.
ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬೇಕ್ ಅವರು ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದೂಡುವುದಾಗಿ ಜಂಟಿ ಹೇಳಿಕೆಯಲ್ಲಿ ಮಂಗಳವಾರ ಘೋಷಿಸಿದ್ದರು.

ಒಲಿಂಪಿಕ್ಸ್ ಜ್ಯೋತಿ ಜಪಾನ್‍ನಲ್ಲಿ ಉಳಿಯಲಿದೆ ಮತ್ತು ಕ್ರೀಡಾಕೂಟಕ್ಕೆ ಟೋಕಿಯೊ 2020 ಎಂದು ಹೆಸರಿಸಲಾಗುವುದು ಎಂದು ಉಭಯ ನಾಯಕರು ಒಪ್ಪಿಕೊಂಡರು. ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಐಒಸಿ ಅಧ್ಯಕ್ಷ ಮತ್ತು ಜಪಾನ್ ಪ್ರಧಾನ ಮಂತ್ರಿ ಟೋಕಿಯೊ ಒಲಿಂಪಿಕ್ಸ್‍ನ ದಿನಾಂಕವನ್ನು ವಿಸ್ತರಿಸಬೇಕು, ಆದರೆ ಅದನ್ನು 2021 ರ ಬೇಸಿಗೆಯಲ್ಲಿ ನಡೆಸಬೇಕು ಎಂದು ತೀರ್ಮಾನಿಸಿದ್ದರು.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತಿಗೆ ಭರವಸೆಯ ಕಿರಣವಾಗಲಿದೆ ಮತ್ತು ಒಲಿಂಪಿಕ್ ಜ್ಯೋತಿ ಭರವಸೆಯಯನ್ನು ನೀಡುವಂತೆ ಮಾಡುತ್ತದೆ ಎಂದು ಉಭಯ ನಾಯಕರು ಒಪ್ಪಿಕೊಂಡರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter