ಕೊರೊನಾ ಪೀಡಿತರಿಗೆ ಫೆಡರರ್ 1 ಮಿಲಿಯನ್ ಸ್ವಿಸ್ ಫ್ರಾಂಕ್ ಸಹಾಯ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಟೆನಿಸ್ ಸ್ಟಾರ್ ಆಟಗಾರ ರೋಜರ್ ಫೆಡರರ್ ಸ್ವಿಟ್ಜರ್ಲೆಂಡ್‍ನಲ್ಲಿ ಕರೋನಾ ವೈರಸ್ ವಿರುದ್ಧ ಹೋರಾಡಲು 10 ಲಕ್ಷ ಸ್ವಿಸ್ ಫ್ರಾಂಕ್‍ಗಳಿಗೆ (ಸುಮಾರು ರೂ 7.8 ಕೋಟಿ) ಸಹಾಯ ಮಾಡಿದ್ದಾರೆ.

ಫೆಡರರ್ ಮತ್ತು ಅವರ ಪತ್ನಿ ಮಿರ್ಕಾ ಸ್ವಿಟ್ಜರ್ಲೆಂಡ್‍ನ ಕರೋನಾ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು 1 ಮಿಲಿಯನ್ ಸ್ವಿಸ್ ಫ್ರಾಂಕ್‍ಗಳ ಅನುದಾನವನ್ನು ಘೋಷಿಸಿದ್ದಾರೆ. ಸ್ವಿಟ್ಜರ್‍ಲ್ಯಾಂಡ್‍ನಲ್ಲಿ 9900 ಕರೋನಾ ಪ್ರಕರಣಗಳು ದೃಢಪಟ್ಟಿದ್ದು, 122 ಜನರು ಸಾವನ್ನಪ್ಪಿದ್ದಾರೆ.

ಕೊರೊನದ ವಿರುದ್ಧ ಹೋರಾಡುವ ಕ್ಲಿನಿಕ್ ಮತ್ತು ವೈದ್ಯಕೀಯ ಕೇಂದ್ರಗಳಿಗೆ ಸಹಾಯ ಮಾಡಲು ಬಾರ್ಸಿಲೋನಾ ಫಾರ್ವರ್ಡ್ ಲಿಯೋನಲ್ ಮಾಸ್ಸಿ ಮತ್ತು ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯಲ್ಲೊ 1 ಮಿಲಿಯನ್ ಯುರೋಗಳನ್ನು ನೀಡಿದ್ದಾರೆ. ಪೋರ್ಚುಗಲ್ ಮತ್ತು ಜುವೆಂಟಸ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್‍ನ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter