ಐಪಿಎಲ್ ರದ್ದಾಗುವ ಸಾಧ್ಯತೆ ಮಧ್ಯೆ, ಅಭ್ಯಾಸ ಮುಂದುವರಿಸಿದ ಸ್ಟೋಕ್ಸ್

Share on facebook
Share on twitter
Share on linkedin
Share on whatsapp
Share on email

ಲಂಡನ್: ಕೋವಿಡ್-19 ನಿಂದಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರದ್ದಾಗುವ ಆತಂಕದಲ್ಲಿದೆ. ಆದರೆ ಇಂಗ್ಲೆಂಡ್ ನ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮಾತ್ರ ಐಪಿಎಲ್ 13ನೇ ಆವೃತ್ತಿಗಾಗಿ ತಮ್ಮ ತಾಲೀಮು ಮುಂದುವರಿಸಿದ್ದಾರೆ.

ಪೂರ್ವ ನಿಗದಿಯಂತೆ ಮುಂಬಯಿನಲ್ಲಿ ಮಾರ್ಚ್ 29ರಿಂದ ಲೀಗ್ ಆರಂಭವಾಗಬೇಕಿತ್ತು. ಆದರೆ ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಏಪ್ರಿಲ್ 15ಕ್ಕೆ ಲೀಗನ್ನು ಮುಂದೂಡಲಾಗಿದೆ.

ಕೊರೊನಾ ವೈರಸ್ ಗೆ ಜಾಗತಿಕವಾಗಿ 19 ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ಮೃತಪಟ್ಟಿದ್ದು, ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಸೋಂಕಿನ ಪೀಡಿತರಾಗಿದ್ದಾರೆ.

ಪ್ರಸ್ತುತ ಈ ಸಮಯದಲ್ಲಿ ನನ್ನ ಸ್ಪರ್ಧಾತ್ಮಕ ಕ್ರಿಕೆಟ್ ಐಪಿಎಲ್ ನಲ್ಲಿ ಪಾಲ್ಗೊಳ್ಳುವುದಾಗಿದೆ ಎಂದು ಸ್ಟೋಕ್ಸ್ ಹೇಳಿದ್ದಾರೆ. 2018ರ ಆಟಗಾರರ ಹರಾಜಿನಲ್ಲಿ ಸ್ಟೋಕ್ಸ್ ಅವರಿಗೆ 12.5 ಕೋಟಿ ರೂಪಾಯಿ ನೀಡಿ ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದೆ.

ಐಪಿಎಲ್ ನಲ್ಲಿ ಇನ್ನೂ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ಏಪ್ರಿಲ್ 20ರ ನಂತರ ಆಡುವ ಬಗ್ಗೆ ಯೋಚಿಸುತ್ತಿದ್ದೇನೆ, ಎಂದು ಸೋಕ್ಸ್ ಹೇಳಿದ್ದಾರೆ.
ಕನಿಷ್ಠ ಮೇ ಅಂತ್ಯದವರೆಗೂ ಕೌಂಟಿ ಋತುವಿನ ಕ್ರಿಕೆಟ್ ಟೂರ್ನಿಗಳನ್ನು ಆರಂಭಿಸಬಾರದು ಎಂದು ಕಳೆದ ವಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಜತೆಗೆ ಜಾಗತಿಕ ಪಿಡುಗಿನ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನ ಶ್ರೀಲಂಕಾ ಪ್ರವಾಸವನ್ನು ಸಹ ಇಸಿಬಿ ಮುಂದೂಡಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಈಗಾಗಲೇ 600ಕ್ಕೂ ಹೆಚ್ಚಾಗಿದ್ದು, 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ 14ರ ವರೆಗೆ ದೇಶದಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್ ಮುಂದೂಡುವ ಅಥವಾ ರದ್ದಾಗುವ ನಿರೀಕ್ಷೆ ಇದೆ. ಆದಾಗ್ಯೂ ಒಂದು ವೇಳೆ ಐಪಿಎಲ್ ನಡೆದರೆ ಅದಕ್ಕೆ ಸಜ್ಜಾಗಿರಲು ನಿತ್ಯ ಶ್ರಮಿಸುತ್ತಿರುವುದಾಗಿ ಸ್ಟೋಕ್ಸ್ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter