ಐಎಸ್‍ಎಲ್: ಗೋವಾಕ್ಕೆ ಜಯ, ಅಗ್ರ ಸ್ಥಾನಕ್ಕೆ ಬಡ್ತಿ

Share on facebook
Share on twitter
Share on linkedin
Share on whatsapp
Share on email

ಗೋವಾ: ಭರವಸೆಯ ಆಟಗಾರ ಹ್ಯುಗೋ ಬೌಮಾಸ್ (19 ಮತ್ತು 50ನೇ ನಿಮಿಷ), ಫೆರಾನ್ ಕೊರೊಮಿನಾಸ್ ( 68 ಮತ್ತು 87ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಗೋವಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ 4-1 ರಿಂದ ಹೈದರಾಬಾದ್ ಎಫ್ ಸಿಯನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.

ಗೋವಾ ಆಡಿದ 16 ಪಂದ್ಯಗಳಲ್ಲಿ 10 ಜಯ, 3 ಡ್ರಾ, 3 ಸೋಲು ಕಂಡಿದ್ದು 33 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.

19ನೇ ನಿಮಿಷದಲ್ಲಿ ಹ್ಯೂಗೋ ಬೌಮಾಸ್ ಗಳಿಸಿದ ಗೋಲಿನ ನೆರವಿನಿಂದ ಗೋವಾ ತಂಡ ಹೈದರಾಬಾದ್ ವಿರುದ್ಧ ನಿರೀಕ್ಷೆಯಂತೆ ಮೇಲುಗೈ ಸಾಧಿಸಿತು. ಹೈದರಾಬಾದ್ ಉತ್ತಮ ರೀತಿಯಲ್ಲೇ ಆ ನಂತರ ಪೈಪೋಟಿ ನೀಡಿದರೂ ಗೋಲು ದಾಖಲಾಗಲಿಲ್ಲ.

ಪ್ರಥಮಾರ್ಧಲ್ಲಿ ಮೇಲುಗೈ ಸಾಧಿಸಿದ್ದ ಗೋವಾ ದ್ವಿತಿಯಾರ್ಧದಲ್ಲೂ ತನ್ನ ಪ್ರಭುತ್ವವನ್ನು ಸಾಧಿಸಿತು. 50ನೇ ನಿಮಿಷದಲ್ಲಿ ಹ್ಯುಗೋ ಬೌಮಾಸ್ ಗಳಿಸಿದ ಗೋಲು ಆತಿಥೇಯ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿತು. ಪರಿಣಾಮ 54ನೇ ನಿಮಿಷದಲ್ಲಿ ಮಾರ್ಸೆಲೋ ಪೆರೆರಾ ಗಳಿಸಿದ ಗೋಲಿನಿಂದ ಹೈದರಾಬಾದ್ ತನ್ನ ಗೋಲಿನ ಖಾತೆ ತೆರೆಯಿತು. ಗೋವಾದ ಗೋಲ್ ಮಿಷಿನ್ ಫೆರಾನ್ ಕೊರೊಮಿನಾಸ್ (68 ಮತ್ತು 87ನೇ ನಿಮಿಷ) ಗಳಿಸಿದ ಗೋಲು ಗೋವಾ ತಂಡಕ್ಕೆ 4-1ರ ಮುನ್ನಡೆ ನೀಡಿತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter