ಜೊಕೊವಿಚ್ ಮುಡಿಗೆ ಆಸ್ಟ್ರೇಲಿಯನ್ ಓಪನ್

ಜೊಕೊವಿಚ್ ಮುಡಿಗೆ ಆಸ್ಟ್ರೇಲಿಯನ್ ಓಪನ್

ಮೆಲ್ಬೊರ್ನ್: ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊ ಭರ್ಜರಿ ಪ್ರದರ್ಶನ ನೀಡಿ ಈ ಸಾಧನೆ ಮಾಡಿದರು. ಈ ಮೂಲಕ ಎಂಟನೇ ಬಾರಿಗೆ ನೋವಾಕ್ ಟೂರ್ನಿಯ ಟ್ರೋಫಿ ಎತ್ತಿ ಸಂಭ್ರಮಿಸಿದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜೊಕೊ 6-4, 4-6, 2-6, 6-3, 6-4 ಆಸ್ಟ್ರೀಯಾದ ಡೋಮಿನಿಕ್ ಥಿಮ್ ಅವರನ್ನು ಸುಮಾರು ನಾಲ್ಕು ಗಂಟೆ ನಡೆದ ಪಂದ್ಯದಲ್ಲಿ ಮಣಿಸಿದರು.

ಜೊಕೊವಿಚ್ 17ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಎತ್ತಿ ಸಂಭ್ರಮಿಸಿದರು. ಸ್ಪೇನ್ ನ ರಫೇಲ್ ನಡಾಲ್ (19) ಮತ್ತು ಸ್ವಿಟ್ಜರ್ಲೆಂಡ್‍ನ ರೋಜರ್ ಫೆಡರರ್ (20) ಅವರು ಗರಿಷ್ಠ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸೋಮವಾರ ಬಿಡುಗಡೆಯಾಗಲಿರುವ ಹೊಸ ಶ್ರೇಯಾಂಕದಲ್ಲಿ ಜೊಕೊವಿಚ್ ಮತ್ತೆ ಅಗ್ರಸ್ಥಾನ ಪಡೆಯಲಿದ್ದಾರೆ.

ಪಂದ್ಯದ ಬನಳಿಕ ಮಾತನಾಡಿದ ಜೊಕೊ, “ಖಂಡಿತವಾಗಿಯೂ ಇಲ್ಲಿನ ಮೈದಾನ ವಿಶ್ವದಲ್ಲಿಯೇ ನನಗೆ ನೆಚ್ಚಿನ ಅಂಗಳ. ಎಂಟನೇ ಬಾರಿಗೆ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೋಮಿನಿಕ್ ಥೀಮ್ ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.