ಮಾರ್ಚ್ 31 ಕ್ಕೆ ತಜಕೀಸ್ತಾನ್-ಭಾರತ ನಡುವೆ ಫುಟ್ಬಾಲ್ ಸೌಹಾರ್ಧಯುತ ಪಂದ್ಯ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಭಾರತ ಪುರುಷರ ಫುಟ್ಬಾಲ್ ತಂಡ ಮಾರ್ಚ್ 31 ರಂದು ತಜಕೀಸ್ತಾನ್ ವಿರುದ್ಧ ಸೌಹಾರ್ಧಯುತ ಪಂದ್ಯವಾಡಲಿದೆ. ಪಂದ್ಯದ ಸ್ಥಳವನ್ನು ತಡವಾಗಿ ಸ್ಪಷ್ಟಪಡಿಸಲಾಗುತ್ತದೆ.

ಫಿಫಾ ಶ್ರೇಯಾಂಕದಲ್ಲಿ ತಜಿಕೀಸ್ತಾನ್ 12 1ನೇ ಸ್ಥಾನದಲ್ಲಿದೆ. 2019ರ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಇಗೋರ್ ಸ್ಟಿಮ್ಯಾಕ್ ಸಾರಥ್ಯದ ಭಾರತ ತಂಡ ಇದೇ ತಂಡದ ವಿರುದ್ಧ ಆಡಿ ಸೋತಿತ್ತು. ಅತ್ಯುತ್ತಮ ಪ್ರದರ್ಶನ ತೋರಿದ್ದ ಭಾರತ ಮೊದಲ ಅವಧಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಆದರೆ, ಎರಡನೇ ಅವಧಿಯಲ್ಲಿ ತಜಿಕೀಸ್ತಾನ ನಾಲ್ಕು ಗೋಲುಗಳನ್ನು ಗಳಿಸಿ 4-2 ಅಂತರದಲ್ಲಿ ಭಾರತವನ್ನು ಮಣಿಸಿತ್ತು.

ತಜಿಕೀಸ್ತಾನ್ ಏಷ್ಯಾದಲ್ಲಿ ಗೌರವಾನ್ವಿತ ತಂಡವಾಗಿದೆ ಮತ್ತು ನಾವು ಅವರಿಂದ ಕಠಿಣ ಸವಾಲನ್ನು ಎದುರು ನೋಡುತ್ತಿದ್ದೇವೆ. ಜೂನ್‍ನಲ್ಲಿ ನಮ್ಮ ಅಂತಿಮ ಎರಡು ಅರ್ಹತಾ ಪಂದ್ಯಗಳಿಗಿಂತ ಮುಂಚಿತವಾಗಿ ನಮ್ಮನ್ನು ನಿರ್ಣಯಿಸಲು ಇದು ಒಂದು ಉತ್ತಮ ಅವಕಾಶವಾಗಿದೆ” ಎಂದು ಸ್ಟಿಮಾಕ್ ಹೇಳಿದರು.
“ಇಂಟರ್‍ಕಾಂಟಿನೆಂಟಲ್ ಕಪ್‍ನಲ್ಲಿ ನಮ್ಮ ಕೊನೆಯ ಮುಖಾಮುಖಿಯಿಂದ ನಾವು ನಮ್ಮ ಆಟವನ್ನು ಎಷ್ಟು ಮುನ್ನಡೆಸಿದ್ದೇವೆ ಎಂದು ಕಂಡುಹಿಡಿಯುವುದು ಆಸಕ್ತಿದಾಯಕವಾಗಿದೆ.” ಎಂದು ಸೇರಿಸಿದರು.

ಜಪಾನ್, ಕೆ.ರಿಪಬ್ಲಿಕ್, ಮಯಾನ್ಮರ್ ಹಾಗೂ ಮಂಗೋಲಿಯಾ ತಂಡಗಳೊಂದಿಗೆ ತಜಕೀಸ್ತಾನ್ ತಂಡಗಳೊಂದಿಗೆ ಎಫ್ ಗುಂಪಿನಲ್ಲಿದೆ. ಐದು ಪಂದ್ಯಗಳಿಂದ ಸದ್ಯ ತಜಕೀಸ್ತಾನ್ ಏಳು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

“ತಜಕಿಸ್ತಾನದಲ್ಲಿ ನಾವು ಅನುಭವಿಸಿದ ಬೆಂಬಲವು ಅಸಾಧಾರಣವಾದುದು ಮತ್ತು ಮತ್ತೊಮ್ಮೆ ಅಲ್ಲಿಗೆ ಹಿಂತಿರುಗಲು ನಾವು ಇಷ್ಟಪಡುತ್ತೇವೆ. ಅದನ್ನು ಒಟ್ಟಿಗೆ ಗೆಲ್ಲೋಣ” ಎಂದು ಸ್ಟಿಮಾಕ್ ಹೇಳಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter