ಕೊರೋನಾ ವೈರಸ್ ಹಿನ್ನೆಲೆ ದುಬಾರಿಯಾದ ತರಕಾರಿ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಸಿರುಗುಪ್ಪ
: ನಗರದಲ್ಲಿ ನಿರಂತರವಾಗಿ ಮಾ.31ರ ವರೆಗೂ ಕೊರೋನಾ ವೈರಸ್ ತಡೆ ಹಿನ್ನಲೆಯಲ್ಲಿ ಮಾರುಕಟ್ಟೆ ಸೇರಿದಂತೆ ಅಂಗಡಿಗಳನ್ನು ಮುಚ್ಚಲಾಗುತ್ತದೆ ಎನ್ನುವ ವದಂತಿ ಹಿನ್ನಲೆಯಲ್ಲಿ ಯುಗಾದಿ ಹಬ್ಬಕ್ಕೆ ಅಗತ್ಯವಿರುವ ತರಕಾರಿ ಸೇರಿದಂತೆ ದಿನಸಿ ಖರೀದಿಗೆ ಜನ ಮಾರುಕಟ್ಟೆಗೆ ಲಗ್ಗೆ ಇಟ್ಟರು. ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ನಿಲ್ಲಿಸಿರುವುದರಿಂದ ಜನರು ನಿತ್ಯ ಅವಸರ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ತೊಡಗಿರುವುದು ಸೋಮವಾರ ಕಂಡುಬಂತು.
ಭಾನುವಾರ ಜನತಾ ಕಫ್ರ್ಯೂ ಹಿನ್ನಲೆಯಲ್ಲಿ ಬಸ್ ಸಂಚಾರ ಹಾಗೂ ವಾಹನ ಸಂಚಾರ ಇಲ್ಲದೇ ಇದ್ದುದ್ದರಿಂದ

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು ಕಂಡುಬಂತು. ರೂ.10ಗೆ ಒಂದು ಕೆ.ಜಿ.ಯಂತೆ ಮಾರಾಟವಾಗುತ್ತಿದ್ದ ಟೊಮಾಟೋ ಬೆಲೆ ರೂ.20, ರೂ.20ಕ್ಕೆ ಕೆ.ಜಿಯಂತೆ ಮಾರಾಟವಾಗುತ್ತಿದ್ದ ಹಸಿಮೆಣಸಿನಕಾಯಿ ಬೆಲೆ ರೂ.80, ರೂ.40 ಇದ್ದ ಈರೇಕಾಯಿ ಬೆಲೆ ರೂ.60ಕ್ಕೆ, ಬೆಂಡೆಕಾಯಿ 20 ರಿಂದ 40ರೂ.ಗೆ. ಬದನೆ 20 ರಿಂದ 40ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಎಲ್ಲರಿಗೂ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಬೆಲೆ ಸ್ಥಿರವಾಗಿ ರೂ.30ಕ್ಕೆ ಕೆ.ಜಿ.ಯಂತೆ ಮಾರಾಟ ವಾಯಿತು.


ಧರ ಏರಿಕೆ ಹಿನ್ನಲೆಯಲ್ಲಿ ಹೊಸ ವರ್ಷ ಯುಗಾದಿ ಬರಮಾಡಿಕೊಳ್ಳಲು ಹೊಸ ಗಡಿಗೆಯಲ್ಲಿ ಬೇವು ತಯಾರಿಸಲು ಖರೀದಿಸಲು ಹೋದ ಗ್ರಾಹಕರಿಗೆ ಸಣ್ಣ ಗಾತ್ರದ ಗಡಿಗೆ ರೂ.60 ರಿಂದ 80 ಬೆಲೆ ಕೇಳಿ ಗ್ರಾಹಕರು ಶಾಕ್ ಆದರು. ಸಾಮಾನ್ಯ ಗಾತ್ರದ ಗಡಿಗೆಗಳು ರೂ.150ರಿಂದ 250ಗಳ ವರೆಗೂ ಮಾರಾಟವಾಯಿತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter