ಪಪ್ಪಾಯಿ ಹಣ್ಣಿನ ಬೆಲೆ ಕುಸಿತ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ರೈತರು ಕೊರೋನಾ ವೈರಸ್ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿನ ಬೆಳೆಗೆ ಬೆಲೆ ದೊರೆಯದೆ ಕಂಗಾಲಾಗಿದ್ದಾರೆ.


ತೋಟಗಾರಿಕೆ ಇಲಾಖೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅಗತ್ಯ ಪ್ರೋತ್ಸಾಹ ಹಾಗೂ ಸಹಾಯಧನ ನೀಡುತ್ತಿರುವುದರಿಂದ ರೈತರು ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.
ವಿವಿಧ ಹಣ್ಣಿನ ತೋಟಕ್ಕೆ ಬೇಟಿ ನೀಡಿ ಪರಿಶೀಲಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗಲೂರು ಮಲ್ಲನಗೌಡ ಮಾತನಾಡಿ ಈ ವರ್ಷ ಹಣ್ಣಿನ ಬೆಳೆಗಳ ಇಳುವರಿ ಹೆಚ್ಚಾಗಿದ್ದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಹಣ್ಣು ಹಾಗು ತರಕಾರಿಗಳನ್ನು ಶೇಖರಿಸಿ ಇಡಲು ಬರುವುದಿಲ್ಲ. ಕಟಾವು ಮಾಡಿದ ಹಣ್ಣುಗಳು ದಿನ ಕಳೆದಂತೆ ಕೊಳೆತು ಹೋಗುವುದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ಇರುವುದಿಲ್ಲ.

ಈ ಬಾರಿ ಪಪ್ಪಾಯಿ ಹಣ್ಣು ಒಂದು ಎಕರೆಗೆ 2ಟನ್‍ವರೆಗೂ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲಿ ಹೋಲ್‍ಸೇಲ್ ಧರ ಒಂದು ಕೆ.ಜಿ.ಗೆ ರೂ.22 ರಿಂದ 7ಗೆ ಕುಸಿದಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ.
ಅಂಜೂರ ಕೇವಲ ಒಂದೇ ದಿನ ಮಾತ್ರ ಬಾಳಿಕೆ ಬರುವ ಹಣ್ಣಾಗಿದ್ದು, ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿದೆ. ಆದ್ದರಿಂದ ರೈತರು ಕಟಾವಿಗೆ ಮುಂಚೆ ಮಾರುಕಟ್ಟೆ ಕಂಡುಕೊಂಡು ಕಟಾವು ಮಾಡುವುದರಿಂದ ಹೆಚ್ಚಿನ ನಷ್ಟವಾಗುವುದನ್ನು ತಡೆಯಬಹುದು.

ಆನ್‍ಲೈನ್ ಮೂಲಕ ಹೆಚ್ಚಿನ ಬೇಡಿಕೆ ಇರುವ ಸ್ಥಳಗಳನ್ನು ಗುರುತಿಸಿಕೊಂಡು ಆ ಪ್ರದೇಶಗಳಿಗೆ ಕೊಂಡ್ಯೋಯ್ದು ಮಾರಾಟ ಮಾಡಿದಲ್ಲಿ ಹೆಚ್ಚಿನ ಬೆಲೆ ಪಡೆಯಬಹುದು ಎಂದು ತಿಳಿಸಿದರು.

ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ವಿಶ್ವನಾಥ ಮಾತನಾಡಿ ಹಣ್ಣು ಬೆಳೆಗಾರರು ಹಣ್ಣುಗಳನ್ನು ಆದಷ್ಟು ಕಾಯಿ ಇರುವಾಗಲೆ ಕಟಾವು ಮಾಡಿದಲ್ಲಿ ಕೆಲವು ದಿನಗಳ ಕಾಲ ಹಾಳಾಗದಂತೆ ತಡೆಯಬಹುದಾಗಿದೆ. ಹಣ್ಣುಗಳನ್ನು ಗುಣಮಟ್ಟಕ್ಕೆ ತಕ್ಕಂತೆ ವರ್ಗೀಕರಿಸಿ ಹೆಚ್ಚಿನ ಗುಣಮಟ್ಟದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ದೊರೆಯುವುದಲ್ಲದೆ ಹೆಚ್ಚಿನ ಬೆಲೆ ಕೂಡ ದೊರೆಯುತ್ತದೆ ಎಂದು ತಿಳಿಸಿದರು.

ಸಿರಿಗೇರಿ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗಲೂರು ಮಲ್ಲನಗೌಡ ರವರ ಜಮೀನಿನಲ್ಲಿ ಅಂಜೂರ ಬೆಳೆ ನಡುವೆ ಅಂತರ್ ಬೆಳೆಯಾಗಿ ತೈವಾನ್ ಪಪ್ಪಾಯಿ ತಳಿಯ ಪಪ್ಪಾಯಿ ಬೆಳೆದಿದ್ದು, ಪಪ್ಪಾಯಿಯಲ್ಲಿ ಉತ್ತಮ ಇಳುವರಿ ಬಂದಿದೆ. ಜೊತೆಗೆ ಅಂಜೂರ ಗಿಡಗಳು ಕೂಡ ಉತ್ತಮವಾಗಿ ಕಾಯಿಬಿಟ್ಟಿವೆ. ತೋಟಗಾರಿಕಾ ಅಧಿಕಾರಿ ಮಲ್ಲಿಕಾರ್ಜುನ, ಗಿರೀಶ್, ಬೇಟಿನೀಡಿ ಪರಿಶೀಲಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter