ಆರ್‍ಟಿಐ: 10 ಸಾವಿರ ದಂಡ

ಆರ್‍ಟಿಐ: 10 ಸಾವಿರ ದಂಡ

ಬೆಳಗಾಯಿತು ವಾರ್ತೆ

ರಾಯಚೂರು : ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿ ನೀಡದೆ ಇರುವುದರಿಂದ ಮಾನ್ವಿ ತಹಸೀಲ್ದಾರ್ ಅಮರೇಶ ಬಿರಾದರ್ ಅವರಿಗೆ 10 ಸಾವಿರ ದಂಡ ವಿಧಿಸಿ ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಎನ್.ಪಿ.ರಮೇಶ ಅವರು ಆದೇಶಿಸಿದ್ದಾರೆ.

ಮಾನ್ವಿ ತಾಲೂಕಿನ ಸರ್ವೆ ನಂ.250/ಆ ಇದ್ದು ಅದರ ಎಎಲ್‍ನಂ: 24/87-88 ದಿ:8-3-1989ರ ಎನ್‍ಎ ಆದೇಶದ ಕಡತದ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ನೀಡುವಂತೆ ರಾಯಚೂರಿನ ವೀರಗುಂಡಯ್ಯಸ್ವಾಮಿ ವಕೀಲರು ಮಾಹಿತಿ ಹಕ್ಕಿನಡಿ ಕೋರಿದ್ದರು. ಮಾಹಿತಿ ನೀಡದೆ ಇರುವುದರಿಂದ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ನಿಗಧಿತ ಅವಧಿಯೊಳಗೆ ಮಾಹಿತಿ ನೀಡದ ತಹಸೀಲ್ದಾರ್ ಅಮರೇಶ ಬಿರಾದಾರ ಅವರಿಗೆ 10 ಸಾವಿರ ದಂಡ ವಿಧಿಸಿ ಸಂಬಳದಲ್ಲಿ ತಲಾ 5 ಸಾವಿರ ಕಡಿತ ಮಾಡಿ ಜಮಾ ಮಾಡಿದ ರಶೀದಿಯೊಂದಿಗೆ ಆಯೋಗಕ್ಕೆ ಸಲ್ಲಿಸುವಂತೆ ಮೇಲ್ಮನವಿ ಪ್ರಾಧಿಕಾರ ಹಾಗೂ ರಾಯಚೂರು ಉಪ ವಿಭಾಗ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ನಿರ್ದೇಶನ ನೀಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.