ಗೂಳೆ ಹೋಗಿ ಬೆಂಗಳೂರಿನಲ್ಲಿದ್ದ ಗುಂಜಳ್ಳಿ ಕೂಲಿಕಾರ್ಮಿಕರು ಸ್ವಗ್ರಾಮಕ್ಕೆ

Share on facebook
Share on twitter
Share on linkedin
Share on whatsapp
Share on email

ವಾಹನ ವ್ಯವಸ್ಥೆ ಕಲ್ಪಿಸಿದ ಎಂಎಲ್‍ಸಿ ಬೋಸರಾಜು
ರಾಯಚೂರು : ಗೂಳೆ ಹೋಗಿ ಬೆಂಗಳೂರಿನಲ್ಲಿ ಸಿಲುಕಿದ್ದ ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದ ಕೂಲಿಕಾರರನ್ನು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಸ್ವಗ್ರಾಮಗಳಿಗೆ ಕರೆತರುವ ಕಾರ್ಯವನ್ನು ಮಾಡಿದ್ದಾರೆ.

ಗುಂಜಳ್ಳಿ ಗ್ರಾಮದ ಕೂಲಿಕಾರ್ಮಿಕರು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಕೇಬಲ್ ವರ್ಕ್ ಹಾಗೂ ಇನ್ನಿತರ ಉಪಜೀವನದ ನಿಮಿತ್ತ ತೆರಳಿದ್ದರು. ತೆರಳಿದ ಕೆಲವೇ ದಿನಗಳಲ್ಲಿ ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ಸಿಗದೆ ಗುತ್ತೇದಾರರು ಅವರನ್ನು ಕಡೆಗಣಿಸಿ ಬೀದಿಗೆ ತಳ್ಳಿದರು. ಕೂಲಿಕಾರ್ಮಿಕರು ಬೆಂಗಳೂರಿನಲ್ಲಿ ಸಿಲುಕಿರುವ ಮಾಹಿತಿ ಪಡೆದ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಖುದ್ದಾಗಿ ಬಿಬಿಎಂಪಿ ಆಯುಕ್ತರ ಹಾಗೂ ಮೇಯರ್ ರವರನ್ನು ಸಂಪರ್ಕಿಸಿ ಅವರಿಗೆ ಊಟ ಉಪಾಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದರು.


ಸ್ವಂತ ಗ್ರಾಮ ಗುಂಜಳ್ಳಿಗೆ ಬರಲು ರಾಯಚೂರು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಲಿಖಿತ ಅನುಮತಿ ಮೇರೆಗೆ ಅವರುಗಳನ್ನು ಸುರಕ್ಷಿತವಾಗಿ ಅವರವರ ಮನೆಗಳಗೆ ತೆರಳಲು ಸ್ವತಃ ವಾಹನವನ್ನು ಏರ್ಪಡಿಸಿ ಕಳುಹಿಸಿಕೊಟ್ಟಿದ್ದಾರೆ.
(ಪೋಟೊ: 28ಆರ್‍ಸಿಆರ್06)

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter