ಮಧುಪತ್ತಾರ್ ಅನುಮಾನಾಸ್ಪದ ಕೊಲೆ ಪ್ರಕರಣದ ತನಿಖೆಗೆ ಆಗ್ರಹ

ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾಾರ್ಥಿನಿ ಮಧು ಪತ್ತಾಾರ್ ಅನುಮಾನಾ ಸ್ಪದ ಕೊಲೆ ಪ್ರಕರಣವನ್ನ ಖಂಡಿಸಿ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.
ನಗರದ ಕಾಳಮ್ಮ ಬೀದಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟು ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ನಂತರ ಜಿಲ್ಲಾಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಆಶ್ಲೀಲ ಸಿನಿಮಾ ಸಾಹಿತ್ಯಗಳನ್ನು ಬೆಂಕಿಗೆ ಹಾಕಿ ಸುಡಬೇಕು. ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡಬೇಕು. ಇಂತಹ ಹೀನ ಕೃತ್ಯ ವೆಸಗಿದವರನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾಾರ್ಥಿನಿಯರು ಆಕ್ರೋೋಶ ವ್ಯಕ್ತಪಡಿಸಿದರು.
ಕನ್ನಡ ಜನ್ಮ ಭೂಮಿ ರಕ್ಷಣಾ ಪಡೆ, ಎಬಿವಿಪಿ, ಎಐಡಿಎಸ್‌ಒ, ಜಿಲ್ಲಾಾ ವಿಶ್ವಕರ್ಮ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಿದರು. ವಿವಿಧ ಕಾಲೇಜು ವಿದ್ಯಾಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *