ಓಗರ ಆಹಾರಗಳಿಗೆ ಅನಂತನಾಗ್ ರಾಯಭಾರಿ

ಓಗರ ಆಹಾರಗಳಿಗೆ ಅನಂತನಾಗ್ ರಾಯಭಾರಿ

ಈ ಆಧುನಿಕತೆಯಲ್ಲಿ ಎಲ್ಲವೂ ಬದಲಾಗಿದೆ. ಮುಖ್ಯವಾಗಿ ಆಹಾರ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂದು ನಾವು ಸಿದ್ಧ ತಿನಿಸುಗಳು ಮತ್ತು ಅಡುಗೆ ಮಿಕ್ಸ್‍ಗಳಿಗೆ ಹೆಚ್ಚಾಗಿ ಮಾರು ಹೋಗುತ್ತಿದ್ದೇವೆ. ಇದನ್ನು ಅರೇತು ಓಗರ ಕಂಪನಿ ಸಾರ್ವಜನಿಕರ ಆಸೆಯನ್ನು ಈಡೇರಿಸುತ್ತಿದೆ. ಎರಡು ವರ್ಷದ ಹಿಂದೆ ಬಂಗಳೂರಿನಲ್ಲಿ ಓಗರ ಆಧುನಿಕ ತಂತ್ರಜ್ಞಾನದಿಂದ ಸಿದ್ಧ ತಿನಿಸುಗಳು ಮತ್ತು ಮಿಕ್ಸ್‍ಗಳನ್ನು ಹೊರತಂದಿದೆ. ಈ ಪದಾರ್ಥಗಳಿಗೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಇತರ ರಾಜ್ಯಗಳ ಜೊತೆಗೆ ಅಮೆರಿಕ, ಯುರೋಪ್, ಇಂಗ್ಲೆಂಡ್, ಸಿಂಗಪೂರ ಸೇರಿದಂತೆ ತೈಲರಾಷ್ಟ್ರಗಳಲ್ಲೂ ತನ್ನ ವ್ಯಾಪಾರ ಜಾಲವನ್ನು ಹೊಂದಿದೆ. ಈಗ ಈ ಯಶಸ್ವಿ ಓಟಕ್ಕೆ ಬಲ ತುಂಬಿದ್ದಾರೆ ನಟ ಅನಂತನಾಗ್. ಹೌದು ಈ ಓಗರ ಕಂಪನಿಗೆ ಅನಂತನಾಗ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಅನಂತನಾಗ್ ಇದೇ ಮೊದಲಬಾರಿ ಕಂಪನಿಯೊಂದಕ್ಕೆ ರಾಯಭಾರಿಯಾಗಿರುವುದು ವಿಶೇಷ. ಈ ವಿಷಯವನ್ನು ಅನಂತನಾಗ್ ಹುಟ್ಟುಹಬ್ಬದಂದೆ ಕಂಪನಿ ಮಾದ್ಯಮಗಳಿಗೆ ತಿಳಿಸಿರುವುದು ಇನ್ನೊಂದು ವಿಶೇಷ.


ಅಂದಂಗೆ ಈ ಓಗರ ಕಂಪನಿಯನ್ನು ಹುಟ್ಟು ಹಾಕಿದವರು ಉದ್ಯಮಿ ರಘುನಾಥ್ ಹಾಗೂ ಶ್ರೀಮತಿ ವಾಣಿಶ್ರೀ ರಘುನಾಥ್ ಅವರುಗಳು. ಓಗರ ಎಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ. ಓಗರ ಅಪ್ಪಟ ಕರ್ನಾಟಕದ ಪ್ರಧಾನ ಆಹಾರ ಸಂಸ್ಥೆಯಾಗಿದ್ದು, ಸಿದ್ಧ ಅಡುಗೆ ಮಿಶ್ರಣ ಮತ್ತು ದಿಢೀರ್ ತಿನಿಸುಗಳ ಪರಂಪರಾಗತ ಸ್ವಾದ ಒಳಗೊಂಡಿದೆ. ಸದ್ಯ ರಸಂ ಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಪುಡಿ, ರವೆ ಇಡ್ಲಿ, ಬಾದಾಮಿ ಹಾಲು, ಕೇಸರಿ ಬಾತ್ ಮಿಕ್ಸ್, ಶಂಕರಪೊಳಿ, ಅಕ್ಕಿ ಕೋಡುಬಳೆ, ಬೆಣ್ಣೆ ಚಕ್ಕುಲಿ ಸೇರಿದಂತೆ 16 ರೆಸಿಪಿಗಳು ಈ ಸಂಸ್ಥೆಯಿಂದ ತಯಾರಾಗುತ್ತಿವೆ. ಮುಂದಿನ ದಿನಗಳಲ್ಲಿ ಅಕ್ಕಿ ತರಿ ಉಪ್ಪಿಟ್ಟು, ಅನ್ನ ಪೊಂಗಲ್ ಮಿಕ್ಸ್, ಮಜ್ಜಿಗೆ ಹುಳಿ ಮಿಕ್ಸ್, ನಿಂಬು ರಸಂ ಮುಂತಾದ ಇನ್ನಷ್ಟು ಪದಾರ್ಥಗಳನ್ನು ತಯಾರಿಸಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಓಗರದ ಸ್ವಾದಿಷ್ಟ ಸಿದ್ಧ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರ, ಪ್ರತಿ ತಿನಿಸು ಕಾಲಾತೀತ ಸಾಂಪ್ರದಾಯಿಕ ರುಚಿಯನ್ನು ದೀರ್ಘಕಾಲದವರೆಗೆ ಉಳಿಸುತ್ತದೆ.
ಓಗರ ಕಂಪನಿಯ ಮಾಲಿಕ ರಘುನಾಥ್ ಮಾತನಾಡಿ ‘ಗೆಳೆಯರು, ಬಂಧುಗಳ ಸಹಕಾರದಿಂದ ಓಗರ ಶುರುಮಾಡಲಾಯಿತು. 27 ವರ್ಷದಿಂದ ಬಿಜನೇಸ್ ಮಾಡುತ್ತಾ ಬಂದಿದ್ದು, ಮೊದಲು ಕಂಪ್ಯೂಟರ್ ಟ್ರೇನಿಂಗ್ ಸೆಂಟರ್ ಪ್ರಾರಂಭ ಮಾಡಿದೆ. ಇದರಲ್ಲಿ ಸಾಕಷ್ಟು ಅಪಮಾನ, ಗೌರವ ಎಲ್ಲಾ ಬಂದಿದೆ. ಗೆದ್ದ ಖುಷಿ, ಸೋತಾಗ ನನ್ನ ಹಿಂದೆ ಇದ್ದದ್ದು ಮಡದಿ ವಾಣಿಶ್ರೀ. ಅವರಿಂದ ಓಗರ ಹುಟ್ಟಿಕೊಂಡಿತು. ಕಷ್ಟ ಪಟ್ಟು ಕೆಲಸ ಮಾಡಿದರೆ ಯಶಸ್ವಿ ಇದ್ದೆ ಇದೆ ಎನ್ನುವುದಕ್ಕೆ ಓಗರ ಕಾರಣ. ಇಂದು ಕತಾರ್, ಲಂಡನ್, ದುಬೈನಲ್ಲಿ ಬಿಜಿನೆಸ್ ಇದೆ. ನನ್ನ ಕಂಪನಿಯಲ್ಲಿ ಒಳ್ಳೆ ಕೆಲಸಗಾರರು ಇದ್ದು, ಕೆಲಸ ಮಾಡುವವರೆಲ್ಲಾ ಬಾಸ್‍ಗಳೇ. ಓಗರದಿಂದ ಮನೆಯ ರುಚಿ ಸಿಗುತ್ತದೆ. ಕ್ವಾಲಿಟಿ ರಿಸಿಪಿ ಆಗಿರುತ್ತವೆ

. ಇಂದು ನಮಗೆಲ್ಲಾ ಆರೋಗ್ಯ ಮುಖ್ಯ ಆಗಿದ್ದರಿಂದ ಕ್ವಾಲಿಟಿ ಫುಡ್ ಕೊಡುತ್ತೇವೆ. ಅತಿಥಿ ದೇವೂ ಭವ ಎನ್ನುವಂತೆ ಗ್ರಾಹಕರ ಅವಸ್ಯಕತೆ ಪುರೈಸಲಾಗುತ್ತಿದೆ. ಓಗರ ಎಂದರೆ ಜನ ಶಕ್ತಿ ಎನ್ನಬಹುದು. ಸದ್ಯ ಕರ್ನಾಟಕದಲ್ಲಿ 8,000 ಔಟಲೇಟ್‍ಗಳು ಇದ್ದು, ಈ ಒಂದು ವರ್ಷದಲ್ಲಿ 50,000 ಔಟಲೇಟ್ ಮಾಡುವ ಪ್ಲ್ಯಾನ್ ಇದೆ. ಜೊತೆಗೆ ಚನೈ, ಹೈದರಾಬಾದ್ ಸೇರಿದಂತೆ ಹೊರ ರಾಜ್ಯ, ವಿದೇಶದಲ್ಲಿ ಕೂಡಾ ಔಟಲೇಟ್‍ಗಳನ್ನು ಹೆಚ್ಚಾಗಿ ಪ್ರಾರಂಭ ಮಾಡಲಾಗುತ್ತಿದೆ. ಓಗರ ತಿನಿಸುಗಳನ್ನು ಆನಲೈನ್ ಮೂಲಕ ಕೂಡ ಪಡೆಯಬಹುದಾಗಿದೆ. ಇಂದು ಬಿಜಿನೆಸ್ ಚನ್ನಾಗಿ ನಡೆಯುತ್ತಿದ್ದು, ಕರ್ನಾಟಕದ ಆನಲೈನ್ ಸರ್ವೆಯಲ್ಲಿ ನಂಬರ್ 1 ಸ್ಥಾನ ನಮ್ಮ ಕಂಪನಿಗೆ ಬಂದಿದೆ. ಮುಂದಿನ ದಿನಗಳಲ್ಲಿ 50 ಪ್ಲಸ್ ಪ್ರಾಡಕ್ಟ್ಸ್ ಮಾಡುವ ಯೋಜನೆಯ ಜೊತೆಗೆ ಓಗರ ರೆಸ್ಟೋರೆಂಟ್ ಕೂಡ ಮಾಡುವ ಪ್ಲ್ಯಾನ್ ಇದೆ. ಈ ರೆಸ್ಟೋರೆಂಟ್ ಪ್ರಥಮವಾಗಿ ಬಂಗಳೂರಿನಲ್ಲಿ ಪ್ರರಂಬಿಸಿ ನಂತರ ದೇಶ ವಿದೇಶದಲ್ಲಿ ತೆರೆಯುವ ಪ್ಲ್ಯಾನ್ ಕೂಡ ಇದೆ’ ಎನ್ನುವರು ರಘುನಾಥ್. ಇದೇ ಸಂದರ್ಭದಲ್ಲಿ ಮಡದಿ ವಾಣಿಶ್ರೀ, ಶ್ರೀ ಗುರುವಾರರಾಘವೇಂದ್ರ ಸರ್ಕಾರಿ ಬ್ಯಾಂಕ್‍ನ ಸತ್ಯನಾರಾಯಣ, ಸಿಇಒ ಸಂತೋಷ, ಚಿಪ್ ಅಡ್ವೈಸರ್ ಮಯಾ ಇವರೊಂದಿಗೆ ರಘುನಾಥ್ ಫ್ಯಾಮಿಲಿ ಹಾಗೂ ಗೆಳೆಯರು ಉಪಸ್ತಿತರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.