ಸೆನ್ಸೆಕ್ಸ್ 522 ಅಂಕ ಏರಿಕೆ: ದಿನದಂತ್ಯಕ್ಕೆ 33,825.53ರಲ್ಲಿ

Share on facebook
Share on twitter
Share on linkedin
Share on whatsapp
Share on email

ಮುಂಬೈ: ಮಾರುಕಟ್ಟೆಗಳ ಸದೃಢ ವಹಿವಾಟುಗಳ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಮಂಗಳವಾರ 522.01 ಅಂಕ ಏರಿಕೆ ಕಂಡು 33,825.53 ಕ್ಕೆ ತಲುಪಿದೆ.
ಸಿಐಐನ 125 ನೇ ವಾರ್ಷಿಕ ಅಧಿವೇಶನದಲ್ಲಿ ಭಾರತ ಉದ್ಯಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಆರ್ಥಿಕ ಬೆಳವಣಿಗೆಗೆ ಸರಿದಾರಿಗೆ ಮರಳಲಿದೆ ಎಂಬ ಭರವಸೆಯನ್ನು ತಮ್ಮ ಭಾಷಣದ ಮೂಲಕ ನೀಡಿದ ನಂತರ ಮಾರುಕಟ್ಟೆಯಲ್ಲಿ ಆಶಾಭಾವನೆಯನ್ನು ಮತ್ತಷ್ಟು ಹೆಚ್ಚಿಸಿತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 152.95 ಅಂಕಗಳ ಏರಿಕೆ ಕಂಡು 9,979.10 ಕ್ಕೆ ತಲುಪಿದೆ.
ಸೆನ್ಸೆಕ್ಸ್ ದಿನದ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 33,866.63 ಮತ್ತು 33,301.29ರ ಮಟ್ಟದಲ್ಲಿತ್ತು. .
ನಿಫ್ಟಿ ದಿನದ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 9,995.60 ಮತ್ತು 9,824.05ರಲ್ಲಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter