ವಿಶ್ವಾಸಮತ ಜಯಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

Share on facebook
Share on twitter
Share on linkedin
Share on whatsapp
Share on email

ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದುಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸಮತ ಯಾಚನೆಯ ವೇಳೆ ಕಾಂಗ್ರಸ್ ನ ಶಾಸಕರು ಹಾಜರಾಗಲಿಲ್ಲ. ಬಿಎಸ್ಪಿ, ಎಸ್ ಪಿ ಮತ್ತು ಪಕ್ಷೇತರ ಶಾಸಕರು ವಿಶ್ವಾಸಮತ ನಿರ್ಣಯದ ಪರ ಮತ ಚಲಾಯಿಸಿದರು. ಇದರಿಂದಾಗಿ ಶಿವರಾಜ್ ಸಿಂಗ್ ಚೌಹಾಣ್ ಸುಲಭವಾಗಿ ವಿಶ್ವಾಸಮತ ಜಯಿಸಿದರು.
61 ವರ್ಷದ ಚೌಹಾಣ್ ಸೋಮವಾರ ರಾತ್ರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದರು
ಚೌಹಾಣ್ ತಮ್ಮ ಬಹುಮತವನ್ನು ಸಾಬೀತುಪಡಿಸಲು ಮಂಗಳವಾರ ನಿರ್ಧರಿಸಿದ್ದರು.

ಇದಕ್ಕಾಗಿ ರಾಜ್ಯ ವಿಧಾನಸಭೆಯ ನಾಲ್ಕು ದಿನಗಳ ವಿಶೇಷ ಅಧಿವೇಶನವು ಮಂಗಳವಾರದಿಂದ ಪ್ರಾರಂಭವಾಗಿತ್ತು. ಇಂದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ಮುಗಿದ ಬಳಿಕ ವಿಧಾನಸಭೆಯ ಅಧಿವೇಶನವನ್ನು ಮಾ.27ರ ತನಕ ಮುಂದೂಡಲಾಯಿತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter