ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ ಏರಿಕೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ:ಸತತ ಮೂರು ತಿಂಗಳ ಕಡಿತದ ನಂತರ ಇಂದಿನಿಂದ (ಸೋಮವಾರ) ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಮೆಟ್ರೋ ನಗರಗಳಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿಯ ಒಂದು ಸಿಲಿಂಡರ್‌ನ ಬೆಲೆಯನ್ನು 37 ರೂ.ವರೆಗೆ ಹೆಚ್ಚಿಸಲಾಗಿದೆ.
ದೇಶದ ಅತಿದೊಡ್ಡ ಇಂಧನ ಪೂರೈಕೆದಾರ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಜೂನ್ ತಿಂಗಳಲ್ಲಿ ಎಲ್‌ಪಿಜಿಯ ಅಂತಾರಾಷ್ಟ್ರೀಯ ಬೆಲೆಯಲ್ಲಿನ ಹೆಚ್ಚಳವನ್ನು ಉಲ್ಲೇಖಿಸಿದೆ. ಇದರ ಪ್ರಕಾರ ದೆಹಲಿಯಲ್ಲಿ ಸಿಲಿಂಡರ್‌ಗೆ 11.50 ರೂ.ಗಳನ್ನು ಹೆಚ್ಚಿಸಲಾಗಿದೆ. ಚೆನ್ನೈನಲ್ಲಿ 37 ರೂ, ಕೋಲ್ಕತ್ತಾದಲ್ಲಿ 31.50 ರೂ. ಮತ್ತು ಮುಂಬೈನಲ್ಲಿ 11.50 ರೂ.ಗಳನ್ನು ಒಂದು ಸಿಲಿಂಡರ್‌ಗೆ ಏರಿಕೆ ಮಾಡಲಾಗಿದ್ದು. ಪರಿಷ್ಕೃತ ದರಗಳು ಇಂದಿನಿಂದಲೇ (ಜೂನ್ 1) ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಬೆಲೆಗಳು ಮತ್ತು ಡಾಲರ್-ರೂಪಾಯಿ ವಿನಿಮಯ ದರವನ್ನು ಗಣನೆಗೆ ತೆಗೆದುಕೊಂಡು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ದರಗಳನ್ನು ಪರಿಷ್ಕರಿಸಲಾಗುತ್ತದೆ.
ಇತ್ತೀಚಿನ ಹೆಚ್ಚಳದ ನಂತರ, ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿಯ ಸಿಲಿಂಡರ್ ಬೆಲೆ 593 ರೂ, ಕೋಲ್ಕತ್ತಾದಲ್ಲಿ 616 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಒಂದು ಸಿಲಿಂಡರ್‌ನ ಬೆಲೆ ಈಗ 590.50 ರೂ., ಚೆನ್ನೈನಲ್ಲಿ ಈಗ 606.50 ರೂ.ಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ತೀವ್ರ ಕುಸಿತದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಕುಸಿದಿತ್ತು ಮತ್ತು ಭಾರತದಲ್ಲಿ ಸತತ ಮೂರು ತಿಂಗಳವರೆಗೆ ಬೆಲೆಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿತ್ತು. ಇದಕ್ಕೆ ಹೋಲಿಸಿದರೆ, ಇತ್ತೀಚಿನ ಹೆಚ್ಚಳವು ಅತ್ಯಲ್ಪವಾಗಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಮೊದಲು, ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು ಸಾಕಷ್ಟು ಹೆಚ್ಚಾಗಿದ್ದವು. ಫೆಬ್ರವರಿಯಲ್ಲಿ ದೆಹಲಿಯಲ್ಲಿ ಪ್ರಮಾಣಿತ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 850 ರೂ. ಆಗಿತ್ತು.
ಜೂನ್ 30 ರವರೆಗೆ ಉಚಿತ ಸಿಲಿಂಡರ್ ಪಡೆಯುವ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವುದಿಲ್ಲ ಎಂದು ಸೂಚಿಸಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter