ನನ್ನ ಪ್ರಕಾರ ತೆಲುಗು, ತಮಿಳಿಗೆ ಡಬ್ ಹಿಂದಿಗೆ ರಿಮೇಕ್

ನನ್ನ ಪ್ರಕಾರ ತೆಲುಗು, ತಮಿಳಿಗೆ ಡಬ್ ಹಿಂದಿಗೆ ರಿಮೇಕ್


ಸಸ್ಪೆನ್ಸ್, ಥ್ರಿಲ್ಲರ್ ‘ನನ್ನ ಪ್ರಕಾರ’ ಚಿತ್ರವನ್ನು ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್ ಬಾಲಾಜಿ ಹೇಳುವಂತೆ ‘ತಮಿಳು, ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ. ಹಿಂದಿಯಲ್ಲಿ ರಿಮೇಕ್ ಮಾಡಲು ಹೆಸರಾಂತ ಸಂಸ್ಥೆಯೊಂದು ಮುಂದೆ ಬಂದಿದೆ. ಇದು ಕೂರಿತು ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮಾದ್ಯಮದ ಕಡೆಯಿಂದ ಒಳ್ಳೆ ವಿಮರ್ಶೆ, ಪ್ರೇಕ್ಷಕರು ಚಿತ್ರವನ್ನು ನಗಣ್ಯ ಮಾಡದೆ ಇರುವುದರಿಂದ ಎಲ್ಲಾ ಕಡೆಗಳಲ್ಲೂ ಬಹುಶ: ತುಂಬಿದ ಪ್ರದರ್ಶನ ಕಾಣುತ್ತಿದೆ’ ಎನ್ನುವರು. ಏನೋ ಇದೆ ಅಂತ ನೋಡಲು ಹೋದವರಿಗೆ ನಿರಾಸೆ ಉಂಟು ಮಾಡಿಲ್ಲ. 8ನೇ ಬಾರಿ ನೋಡಿದ್ದರೂ, ಬೋರ್ ಆಗಿಲ್ಲ. ಇದಕ್ಕೆ ಇನ್ನಷ್ಟು ಸದ್ದು ಮಾಡಲು ಮಾದ್ಯಮದವರ ಪ್ರೋತ್ಸಾಹ ಬೇಕಾಗಿದೆ ಎಂದು ನಟಿ ಮಯೂರಿ ಕೇಳಿಕೊಂಡರು.


ಗಣೇಶ ಚಿಕ್ಕ ಕೆರೇಲಿ ಬಿದ್ದ, ದೊಡ್ಡ ಕೆರೇಲಿ ಎದ್ದ ಎನ್ನುವ ಹಾಗೆ ನಮ್ಮ ಸಿನಿಮಾವು ಚಿಕ್ಕದರಲ್ಲಿ ಬಿದ್ದು, ದೊಡ್ಡದರಲ್ಲಿ ಎದ್ದು ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ. ಕನ್ನಡಿಗರು ಒಳ್ಳೆ ಚಿತ್ರಕ್ಕೆ ಕೈ ಬಿಡೋಲ್ಲ ಎನ್ನುವುದಕ್ಕೆ ಸಾಕ್ಷಿ ಇದಾಗಿದೆ. ಹಿಂದಿಯಲ್ಲಿ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಯೂ ಕರೆ ಬರುವ ಸಾಧ್ಯತೆ ಇದೆ ಎಂಬುದು ನಿರಂಜನ್ ದೇಶಪಾಂಡೆ ಮಾತಾಗಿತ್ತು. ಶೀರ್ಷಿಕೆ ಎಲ್ಲರೂ ಮಾತನಾಡುವ ಪದ ಎಂದು ತಿಳಿದು ನಿರ್ಮಾಣ ಮಾಡಲಾಗಿದೆ. ನಮ್ಮ ಜನರು ಕಾಪಾಡಿದ್ದಾರೆ. ರಿಮೇಕ್ ಹಕ್ಕುಗಳು ಮಾರಾಟವಾಗಿದ್ದರಿಂದ ಸೇಫ್ ಆಗಿದ್ದೇನೆ. ಮಲೆಯಾಳಂ ಕುರಿತಂತೆ ಚರ್ಚೆ ನಡೆಸಿದ ನಂತರ ಮತ್ತೋಬ್ಬರು ನಮಗೆ ನೀಡಿ ಅಂತ ಬೇಡಿಕೆ ಇಟ್ಟಿದ್ದಾರೆ. ಮರಾಠಿ. ಭೋಜ್‍ಪುರಿ ಕಡೆಗಳಿಂದಲೂ ಕರೆ ಬರುತ್ತಿದೆ.

ವಿತರಕ ದೀಪಕ್ ಗಂಗಾಧರ್ ಮುಖಾಂತರ ಹೆಚ್ಚಿನ 40 ಕೇಂದ್ರಗಳಲ್ಲಿ ಶುಕ್ರವಾರದಿಂದ ತೆರೆಕಾಣಲಿದ್ದು, ಮುಂದಿನವಾರದಿಂದ ಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿ ಬಿಡುಗಡೆ ಮಾಡಲಾಗುವುದು ಅಂತ ವಿವರವನ್ನು ನಿರ್ಮಾಪಕ ಗುರುರಾಜ್ ನೀಡಿದರು. ಅರ್ಜುನ್ ಯೋಗಿ, ಸಂಗೀತ ನಿರ್ದೇಶಕ ಅರ್ಜುನ್ ರಾಮು, ಸಂಕಲನಕಾರ ಸತೀಶ್ ಚಂದ್ರಯ್ಯ, ಛಾಯಾಗ್ರಾಹಕ ಮನೋಹರ್ ಜೋಷಿ ಇದೇ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು. ಚಿತ್ರೀಕರಣದಿಂದ ನೇರವಾಗಿ ಗೋಷ್ಟಿಗೆ ಆಗಮಿಸಿದ ಕಿಶೋರ್‍ಗೆ ಮಾತನಾಡಲು ಅವಕಾಶ ಸಿಗಲಿಲ್ಲ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.