ದಿಯಾ ನಾಯಕನ ಹೊಸ ರಿಜಿಸ್ಟ್ರೇಶನ್

Share on facebook
Share on twitter
Share on linkedin
Share on whatsapp
Share on email

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ‘ದಿಯಾ’. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಅಂಬರ್ ಅಭಿನಯಿಸುತ್ತಿರುವ ‘ಫಾರ್ ರಿಜಿಸ್ಟ್ರೇಶನ್’ ಚಿತ್ರ ಮೇ ತಿಂಗಳಿಂದ ಆರಂಭವಾಗುತ್ತಿದೆ. ಈ ಚಿತ್ರಕ್ಕೆ ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ ಕೂಡ ನಿರ್ದೇಶಕರದೆ. ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಅವರಿಗೆ ಸುಮಾರು 5, 6 ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ… ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್ ಸಂಗೀತ ನಿರ್ದೇಶನ ‘ಫಾರ್ ರಿಜಿಸ್ಟ್ರೇಶನ್’ ಚಿತ್ರಕ್ಕಿದೆ.

‘ದಿಯಾ’ ಸಿನಿಮಾದ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದಲ್ಲಿ ನಟ ಪೃಥ್ವಿ ಅಂಬರ್‍ಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರ ನಟನೆ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ಹೊಸ ಆಫರ್‍ಗಳೂ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ ಒಂದು ಸಿನಿಮಾದ ಶೂಟಿಂಗ್ ಶೀಘ್ರವೇ ಶುರು ಆಗಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter