ಕೊರೊನಾ ಕೊಲ್ಲುತ್ತೇವೆ ಎಂದ ಗುರುಕಿರಣ್

Share on facebook
Share on twitter
Share on linkedin
Share on whatsapp
Share on email

ಸದ್ಯ ಎಲ್ಲಿ ನೋಡಿದ್ರೂ ಕೋವಿಡ್ -19 ಬಗ್ಗೆಯೇ ಮಾತು. ಇನ್ನು ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಚಿತ್ರರಂಗದ ಅನೇಕ ಕಲಾವಿದರು ತಂತ್ರಜ್ಞರು ಕೂಡ ಕೊರೊನಾ ವಿರುದ್ದ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾ.

ಹೌದು ಈಗಾಗಲೆ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್, ರಜನಿಕಾಂತ್ ಮೊದಲಾದ ಸ್ಟಾರ್‍ಗಳು ಸೇರಿಕೊಂಡು ಮಾಡಿದ್ದ ‘ಫ್ಯಾಮಿಲಿ’ ಕಿರುಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಅದಾದ ನಂತರ ಅದೇ ಕಿರುಚಿತ್ರದಿಂದ ಪ್ರೇರಣೆಗೊಂಡು ಪವನ್ ಒಡೆಯರ್ ಕೂಡ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಇದರ ನಡುವೆ ಎಸ್ ಪಿ.ಬಿ, ಚಂದನ್ ಶೆಟ್ಟಿ ಮೊದಲಾದವರು ತಮ್ಮ ಹಾಡುಗಳ ಮೂಲಕ ಕೋವಿಡ್ -19 ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

ಈಗ ಕನ್ನಡದ ಮತ್ತೂಬ್ಬ ಸಂಗೀತ ನಿರ್ದೇಶಕ ಕಂ ಗಾಯಕ ಗುರುಕಿರಣ್ ಅಂಥದ್ದೇ ಮತ್ತೂಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಗುರುಕಿರಣ್ ಕೋವಿಡ್ -19 ಬಗ್ಗೆ ವಿಶೇಷವಾದ ಹಾಡೊಂದಕ್ಕೆ ಸ್ವರ ಸಂಯೋಜಿಸಿದ್ದು, ಆ ಹಾಡಿಗೆ ತಾವೇ ಸಾಹಿತ್ಯ ಬರೆದು ಧ್ವನಿ ಕೂಡ ನೀಡಿದ್ದಾರೆ. ಕೋವಿಡ್ -19 ಲಾಕ್ ಡೌನ್ ವೇಳೆಯಲ್ಲಿ ಗುರುಕಿರಣ್ ಈ ಹಾಡನ್ನು ಸಂಯೋಜಿಸಿದ್ದು, ಸೋಮವಾರ ಈ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿದೆ. ಕೋವಿಡ್ -19 ವಿರುದ್ದ ನಡೆಯುತ್ತಿರುವ ಈ ಹೋರಾಟದಲ್ಲಿ ನಾವೆಲ್ಲ ಗೆದ್ದೇ ಗೆಲ್ಲುತ್ತೇವೆ.

ಕೊರೊನಾವನ್ನೇ ಕೊಲ್ಲುತ್ತೇವೆ ಎಂಬ ಭರವಸೆಯ ಈ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿಬಂದಿದೆ. ಅನಿರೀಕ್ಷಿತವಾಗಿ ಇಂದು ಎಲ್ಲರನ್ನೂ ಕೋವಿಡ್ -19 ಭಾದಿಸುತ್ತಿದೆ. ಇದೆಲ್ಲದರಿಂದ ಎಲ್ಲರೂ ಹೊರಬರಬೇಕಾಗಿದೆ. ಆದಷ್ಟು ಬೇಗ ಎಲ್ಲರೂ ಕೊರೊನಾ ಸಂಕಟದಿಂದ ಹೊರಬರೋಣ ಎನ್ನುವ ಆಶಯದಿಂದ ಈ ಗೀತೆ ಮಾಡಿದ್ದೇನೆ ಎಂದು ವಿವರಣೆ ಕೊಡುತ್ತಾರೆ ಗುರುಕಿರಣ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter