ರಾಬರ್ಟ್ ನಿರ್ಮಾಪಕರಿಂದ ಸಿದ್ದವಾಗುತ್ತಿದೆ ಮಿನಿ ಫಿಲ್ಮ ಸಿಟಿ

Share on facebook
Share on twitter
Share on linkedin
Share on whatsapp
Share on email

ಕನ್ನಡ ಚಿತ್ರರಂಗಕ್ಕೊಂದು ಸುಸಜ್ಜಿತ ಫಿಲಂಸಿಟಿ ಬೇಕು ಎಂಬ ಬೇಡಿಕೆ ದಶಕಗಳ ಹಿಂದಿನದ್ದು. ಫಿಲಂಸಿಟಿ ಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದರೂ, ಸರ್ಕಾರಗಳು ಬದಲಾಗುತ್ತಿದ್ದಂತೆ ಮೈಸೂರು, ರಾಮನಗರ, ಬೆಂಗಳೂರು ಹೀಗೆ ಅದರ ಸ್ಥಳಗಳು ಕೂಡ ಬದಲಾಗುತ್ತಿದೆ. ಇವೆಲ್ಲದರ ನಡುವೆ ಸದ್ದಿಲ್ಲದೆ ಬೆಂಗಳೂರಿನಲ್ಲಿ ಖಾಸಗಿಯಾಗಿ ಮಿನಿ ಫಿಲ್ಮ್ ಸಿಟಿ ನಿರ್ಮಿಸುವ ಯೋಜನೆ ತೆರೆಮರೆಯಲ್ಲಿ ಶುರುವಾಗಿದೆ.

“ಹೆಬ್ಬುಲಿ’, “ರಾಬರ್ಟ್’, “ಮದಗಜ’ ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ ಕೂಡ ಇಂದ್ದೊಂದು ಮಿನಿ ಫಿಲಂ ಸಿಟಿ ನಿರ್ಮಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರ ತಯಾರಕರ ಎಲ್ಲಾ ಅಗತ್ಯಗಳನ್ನು ಒಂದೆಡೆಯಲ್ಲಿಯೇ ಪೂರೈಸುವಂತೆ ಈ ಫಿಲಂ ಸಿಟಿಯನ್ನು ನಿರ್ಮಿಸಲು ಯೋಜಿಸಲಾಗಿದ್ದು, ಈ ಮಿನಿ ಫಿಲ್ಮ… ಸಿಟಿಯಲ್ಲಿ ಸಿನಿಮಾಗಳ ಜೊತೆಯಲ್ಲಿ ರಿಯಾಲಿಟಿ ಶೋಗಳು, ಧಾರಾವಾಹಿಗಳ ಚಿತ್ರೀಕರಣಕ್ಕೂ ಅನುಕೂಲವಾಗುವಂತೆ ನಿರ್ಮಿಸುವ ಯೋಜನೆಯಲ್ಲಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ‘ಆರ್ಟ್ ಆಫ್ ಲೀವಿಂಗ್’ ಹತ್ತಿರ ಈ ಫಿಲ್ಮ್ ಸಿಟಿಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ಫಿಲಂ ಸಿಟಿ ನಿರ್ಮಾಣವಾಗಲಿದೆ.

ಈ ಬಗ್ಗೆ ಮಾತನಾಡವ ಉಮಾಪತಿ, ಸದ್ಯ ನಮ್ಮಲ್ಲಿ ಚಿತ್ರ ನಿರ್ಮಾಣಕ್ಕೆ ಯಾವುದೇ ಸೌಕರ್ಯಗಳಿಲ್ಲದಿರುವುದರಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋಗಬೇಕಾಗುತ್ತದೆ. ಅಲ್ಲಿಂದ ಶೇಕಡಾ 50ರಷ್ಟು ಸಿಬ್ಬಂದಿಯನ್ನು ಕರೆಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಚಿತ್ರಗಳಿಂದ ಬಂದ ಆದಾಯವನ್ನು ನಮ್ಮ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಹೈದರಾಬಾದ್‍ಗೆ ಶೂಟಿಂಗ್‍ಗೆ ಹೋಗಲು ಕಷ್ಟವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿಯೇ ಮಿನಿ ಫಿಲ್ಮ್ ಸಿಟಿ ನಿರ್ಮಿಸಬೇಕೆಂಬ ನಿರ್ಧಾರಕ್ಕೆ ಬಂದೆ. ಬೆಂಗಳೂರಿನ ಹೊರಗಡೆ ಇದ್ದ ನನ್ನದೇ ಸ್ವಂತ ಜಾಗದಲ್ಲಿ ಫಿಲಂಸಿಟಿ ಮಾಡಲು ಮುಂದಾಗಿದ್ದೇನೆ. ಈಗಾಗಲೇ ಇದರ ಕೆಲಸಗಳು ಶುರುವಾಗಿದ್ದು, ಇದೇ ವರ್ಷದ ಕೊನೆಗೆ ಈ ಫಿಲಂ ಸಿಟಿಯಲ್ಲಿ ಸಿನಿಮಾ ಕೆಲಸಗಳಿಗೆ ಲಭ್ಯವಾಗಲಿದೆ’ ಎಂದಿದ್ದಾರ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter