ಕರಾವಳಿ ಪ್ರತಿಭೆಗಳ ಟಾಮ್ & ಜೆರ್ರಿ

Share on facebook
Share on twitter
Share on linkedin
Share on whatsapp
Share on email

ಹೊಸಬರ ವಿಭಿನ್ನ ಪ್ರಯತ್ನದಲ್ಲಿ ತಯಾರಾಗುತ್ತಿದೆ ‘ಟಾಮ್ & ಜೆರ್ರಿ’ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗಷ್ಟೇ ಮಕರ ಸಂಕ್ರಾಂತಿಯಂದು ಮುಹೂರ್ತ ನಡೆದಿದೆ. ಚಿತ್ರವನ್ನು ಕೆಜಿಎಫ್ ಚಿತ್ರಕ್ಕೆ ಸಂಭಾಷಣೆ ಬರೆಯುವಲ್ಲಿ ನಿರ್ದಶಕರಿಗೆ ಸಾಥ್ ನೀಡಿದ್ದ ಯುವ ಪ್ರತಿಭೆ ರಾಘವ್ ವಿನಯ್ ಶಿವಗಂಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಒದಿಕೊಂಡಿರುವ ರಾಘವ್ ಐದು ವರ್ಷದಿಂದ ಸಿನಿಮಾ ರಂಗದಲ್ಲಿದ್ದಾರೆ. ಮೊದಲು ರಂಗಾಯಣದ ಥಿಯೇಟರ್‍ನಲ್ಲಿದ್ದವರು ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರಕ್ಕೆ ಕೆಲಸ ಮಾಡಿದರು. ನಂತರ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಜೊತೆ ಕೆಜಿಎಫ್‍ಗೆ ಕೆಲಸ ಮಾಡಿದ್ದಾರೆ. ಇದೀಗ ಟಾಮ್ & ಜೆರ್ರಿ’ ಮುಖೇನ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

‘ಭಿನ್ನಾಭಿಪ್ರಾಯ ಇರುವವರು ಒಂದಾದರೆ ಎನಾಗುತ್ತೆ ಎಂಬುದು ಕಥೆಯ ಎಳೆಯಾಗಿದ್ದು, ನಾಳಿನ ಬಿರಿಯಾನಿಗಾಗಿ ಇಂದಿನ ಚಿತ್ರನ್ನ ಮರಿಬೇಡಿ ಬಂಬುದು ಕಥೆಯ ಸಾರಾಂಶವಾಗಿದೆ. ಎರಡು ಪಾತ್ರಗಳು ಬದುಕನ್ನು ಬೇರೆಯದೇ ಅರ್ಥದಲ್ಲಿ ಬದುಕುತ್ತಿರುವವರ ಜರ್ನಿ ಇದ್ದು, ಮಾಸ ಮನರಂಜನೆ ಇರಲಿದೆ. ನಾಯಕ ನಾಯಕಿ ಪಾತ್ರ ಡಿಪರೆಂಟ್ ಆಗಿದ್ದು, ಲೈಫ್ ಸಂತೋಷ, ಪ್ರೀತಿ, ಸ್ನೇಹ ಎಲ್ಲದಕ್ಕೂ ಅವರದ್ದೇ ಅರ್ಥಗಳಿರುತ್ತವೆ. ಇಬ್ಬರು ಜಗಳ ಮಾಡುತ್ತಾ ಇದ್ದರು ಜೊತೆಗೆ ಇರುತ್ತಾರೆ. ಚಿತ್ರವನ್ನು ಸಂಪೂರ್ಣ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಿದ್ದು, ಐದು ಸಾಂಗ್ ಇರಲಿವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕರು.

ಅಂದಹಾಗೆ ಈ ಚಿತ್ರವನ್ನು ಗುಜರಾತ್ ಮೂಲದ, ಕುಂದಾಪುರನಲ್ಲಿರುವ ರಾಜು ಶೇರಿಗಾರ್ ಕನ್ನಡ ಮೇಲಿನ ಪ್ರೀತಿಯಿಂದ ಮೊದಲಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ, ಸಂಕೇಶ್ ಛಾಯಾಗ್ರಹಣ, ಸೂರಜ್ ಅಂಕೋಲೆಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಹಾಗೂ ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಣವಿದೆ. ಅಂದಂಗೆ ಈ ಚಿತ್ರದ ನಾಯಕನಾಗಿ ನಿಶ್ಚಿತ್ ಕೊರೋಡಿ ನಟನೆ ಮಾಡುತ್ತಿದ್ದಾರೆ. ಇವರು ಈ ಮೊದಲು ‘ಗಂಟುಮೂಟೆ’ ಚಿತ್ರಕ್ಕೆ ಬಣ್ಣ ಹಚ್ಚಿದ್ದು, ಇದು ಎರಡನೇ ಪ್ರಯತ್ನ. ಇವರಿಗೆ ನಾಯಕಿಯಾಗಿ ಚೈತ್ರಾ ರಾವ್ ಇದ್ದಾರೆ. ಉಳಿದ ಪೋಷಕ ಪಾತ್ರಗಳಲ್ಲಿ ಜೈ ಜಗದೀಶ್, ತಾರಾ, ರಂಗಾಯಣ ರಘು, ರಾಕಲೈನ್ ಸುಧಾಕರ್, ಪದ್ಮಜಾ ರಾವ್ ಮುಂತಾದವರಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter