ಚಿತ್ರೀಕರಣ ಮುಗಿಸಿಕೊಂಡ ರಾಜು ಜೇಮ್ಸ್ ಬಾಂಡ್

Share on facebook
Share on twitter
Share on linkedin
Share on whatsapp
Share on email

ನಟ ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ರಿಲೀಸ್‍ಗೆ ಸಿದ್ದವಾಗುತ್ತಿದೆ. ಶೇಕಡ 70% ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ ಹಾಗೂ ಇದೇ ಮೊದಲು ಎನ್ನುವಂತೆ ಲಂಡನ್ ಸೆಂಟ್ರಲ್ ರಸ್ತೆಯಲ್ಲಿ ನಡೆದಿದೆ. ಒಟ್ಟಾರೆ 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರತಂಡ ಪೆÇೀಸ್ಟ್ ಪೆÇ್ರಡಕ್ಷನ್‍ನಲ್ಲಿ ಬ್ಯುಸಿ ಇದೆ. ಸಿನಿಮಾ ಕುರಿತು ಹೇಳುವುದಾದರೆ, ಸುವರ್ಣಪುರ ಊರಿನಲ್ಲಿ ರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್‍ನಲ್ಲಿ ಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ಮತ್ತೋಂದು ಕಡೆ ಅಪ್ಪ ಮಾಡಿದ ಮನೆಯ ಸಾಲ ತೀರಿಸಲು ಪಣ ತೊಡುತ್ತಾನೆ. ಅದೇ ಊರಿನ ಶಿಕ್ಷಕಿ ಮೇಲೆ ಪ್ರೀತಿ ಹುಟ್ಟುತ್ತದೆ. ಮುಂದೆ ಶಾಸಕನಿಂದ ಈತ ನಜೀವನದಲ್ಲಿ ಏರುಪೇರು ಆಗುತ್ತದೆ. ಕೊನೆಗೆ ಹುದ್ದೆ ಗಿಟ್ಟಿಸುತ್ತಾನಾ? ಪ್ರೀತಿಸಿದ ಹುಡುಗಿ ಸಿಗುತ್ತಾಳಾ? ಶಾಸಕನೊಂದಿಗೆ ನ್ಯಾಯಕ್ಕಾಗಿ ಹೋರಾಡುತ್ತಾನಾ? ಹೀಗೆ ತನ್ನ ಮುಂದಿರುವ ಮೂರನ್ನು ತನ್ನಿಚ್ಚೆಯಂತೆ ಪಡೆಯುವನೇ ಅಥವಾ ಜೇಮ್ಸ್‍ಬಾಂಡ್ ಆಗುವನೇ ಎಂಬುದು ಒಂದು ಏಳೆಯ ಕಥೆಯಾಗಿದೆ.

ನಾಯಕಿಯಾಗಿ ಮೃದುಲಾ. ತಾರಗಣದಲ್ಲಿ ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್ ಉಳಿದಂತೆ ತಬಲನಾಣಿ, ಜೈಜಗದೀಶ್, ವಿಜಯ್ ಚೆಂಡೂರ್, ಮಂಜುನಾಥ ಹೆಗ್ಡೆ, ಜಯಸಿಂಹನ್ ನಟಿಸಿದ್ದಾರೆ. ಅನೂಪ್ ಸೀಳನ್ ಸಂಗೀತದ ನಾಲ್ಕು ಹಾಡುಗಳ ಪೈಕಿ ಎರಡರಲ್ಲಿ ಚಂದನ್ ಶೆಟ್ಟಿ, ಅಂತೋಣಿದಾಸ್ ಧ್ವನಿಯಾಗಿದ್ದಾರೆ. ಸಂಕಲನ ಅಮಿತ್ ಜವಾಲ್ಕರ್, ಸಾಹಸ ಮಾಸ್ ಮಾದ, ನೃತ್ಯ ಮುರಳಿ ಅವರದಾಗಿದೆ. ಅನಿವಾಸಿ ಭಾರತಿಯರಾದ ಲಂಡನ್ ನಿವಾಸಿ ಕನ್ನಡಿಗ ಮಂಜುನಾಥ್ ವಿಶ್ವಕರ್ಮ ಎರಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದು, ಅದರಂತೆ ಕೆನಡಾದಲ್ಲಿ ಕನ್ನಡ ಸಿನಿಮಾಗಳನ್ನು ವಿತರಣೆ ಮಾಡುತ್ತಿರುವ ಕಿರಣ್ ಬಾರ್ತೋಡ್ ಸೇರಿಕೊಂಡು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter