ಹಾಸ್ಯ ಮನರಂಜನೆಯ ಸಿನಿಮಾ ಗೋವಿಂದ ಗೋವಿಂದ

ಹಾಸ್ಯ ಮನರಂಜನೆಯ ಸಿನಿಮಾ ಗೋವಿಂದ ಗೋವಿಂದ

ಹಾಸ್ಯ ಚಿತ್ರ ‘ಗೋವಿಂದ ಗೋವಿಂದ’ ಶೇಕಡ 75 ರಷ್ಟು ಚಿತ್ರೀಕರಣವನ್ನು ಬಿಜಾಪುರ, ಚಿಂತಾಮಣಿ, ಏಕಶಿಲಾ ಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ ಹಾಗೂ ಎರಡು ಹಾಡುಗಳನ್ನು ಸದ್ಯದಲ್ಲೇ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ. ಕಥೆಯೊಳಗೊಂದು ಕಥೆ ಇರಲಿದ್ದು, ನಿರ್ದೇಶಕನಾಗುವ ಹಂಬಲದೊಂದಿಗೆ ನಿರ್ಮಾಪಕನಿಗೆ ಕಥೆ ಹೇಳುತ್ತಾ ತಾನು ಮಾಡಿದ ಕಿರುಚಿತ್ರ ತೋರಿಸಿ ಇಂಪ್ರೆಸ್ ಮಾಡುವುದರಿಂದ ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಗೋಲುಗಳೇ ಇಲ್ಲದ ಹುಡುಗರು ನಾಯಕಿಯನ್ನು ಡ್ಯಾನ್ಸರ್ ಮಾಡುವ ಕನಸಿನೊಂದಿಗೆ ಅಪಹರಿಸಿ, ಆಕೆಯ ತಂದೆಯೊಂದಿಗೆ ಹಣ ವಸೂಲು ಮಾಡಿ ಸಿಟಿಗೆ ಕಳುಹಿಸಿ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಅಪಹರಣವಾಗಿ ಬಂದಿತಳಾಗುತ್ತಾಳೆ. ಅವಳನ್ನು ಬಿಡುಗಡೆ ಮಾಡಿಸುವ ಸಲುವಾಗಿ ಹಣ ಹೊಂದಿಸಲು ಪರದಾಟುವ ಸಂಕಟಗಳು ಒಂದೊಂದೇ ಪಾತ್ರಗಳ ಮೂಲಕ ಸಂದಿಸುತ್ತಾ ಸಾಗುತ್ತದೆ. ಎಲ್ಲಾ ಪಾತ್ರಧಾರಿಗಳು ಗೋವಿಂದನ ನಾನಾ ಹೆಸರಿನಲ್ಲಿ ಇರುವುದರ ಕಾರಣ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಕಿರು ತೆರೆಗೆ ಸಾಕಷ್ಟು ಯಶಸ್ವಿ ಧಾರವಾಹಿಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ತಿಲಕ್ ಹೊಸ ಅನುಭವ ಎನ್ನುವಂತೆ ಹಿರಿತೆರೆಗೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ಹಿತನ್ ಹಾಸನ್ ಸಂಗೀತವಿದೆ.

ಪಿಯುಸಿ ವಿದ್ಯಾರ್ಥಿಯಾಗಿ ಸುಮಂತ್ ಶೈಲೇಂದ್ರ ನಾಯಕನಾಗಿ ಏಳನೇ ಚಿತ್ರ. ಕಡಿಮೆ ಮಾತುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಕವಿತಾ ಗೌಡ ನಾಯಕಿ. ಉಡಾಳ ಗೆಳೆಯರುಗಳಾಗಿ ವಿಜಯ್ ಚಂಡೂರ್, ಪವನ್ ಕುಮಾರ್, ಮತ್ತೋಂದು ಮುಖ್ಯ ಪಾತ್ರದಲ್ಲಿ ಭಾವನಾ ಮೆನನ್ ನಟಿಸಿದ್ದಾರೆ. ತಾರಗಣದಲ್ಲಿ ರೂಪೇಶ್ ಶೆಟ್ಟಿ, ಅಚ್ಯುತ್ ಕುಮಾರ್, ಶೋಭರಾಜ್, ಪದ್ಮ ವಾಸಂತಿ, ಗೋವಿಂದೇ ಗೌಡ, ಶ್ರೀನಿವಾಸ ಪ್ರಭು, ಸುನೇತ್ರ ಪಂಡಿತ್ ಬಣ್ಣ ಹಚ್ಚಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸವಿದೆ. ಈ ಚಿತ್ರವನ್ನು ಎಸ್.ಶೈಲೇಂದ್ರ ಬಾಬು, ರವಿ.ಆರ್.ಗರಣಿ ಮತ್ತು ಕಿಶೋರ್.ಎಂ.ಕೆ. ಮಧುಗಿರಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.