ಉಮಾಪತಿ ಫಿಲಂಸ್‍ನಿಂದ ರಾಬರ್ಟ್ ಚಿತ್ರದ ವಿತರಣೆ

Share on facebook
Share on twitter
Share on linkedin
Share on whatsapp
Share on email

ಭಾರತೀಯ ಚಿತ್ರರಂಗದಲ್ಲಿ ಯಶ್ ರಾಜ್ ಫಿಲಂಸ್, ಬಾಲಾಜಿ ಟೆಲಿ ಫಿಲಂಸ್, ಅರ್ಕಾ ಮಿಡಿಯಾ ವಕ್ರ್ಸ್, ವೈಯಕಮ್ 18 ಮಿಡಿಯಾ, ಡಿ.ವಿ.ವಿ ಎಂಟರ್‍ಟೈನ್‍ಮೆಂಟ್ಸ್,ಗಳ ಮಾದರಿಯಲ್ಲಿ ಕನ್ನಡದ ಹೊಂಬಾಳೆ ಫಿಲಂಸ್ ಹೆಸರು ಮಾಡಿದೆ. ಇದೀಗ ಆ ಸಾಲಿಗೆ ಸೇರಲು ಹೊರಟಿರುವುದು ಕನ್ನಡದ ಮತ್ತೊಂದು ಪ್ರೋಡಕ್ಷನ್ ಹೌಸ್ ಉಮಾಪತಿ ಫಿಲಂಸ್. ಹೌದು ಈಗಾಗಲೇ ಸುದೀಪ್ ಅವರ ‘ಹೆಬ್ಬುಲಿ’ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಂಸ್ಥೆಯ ಮುಖ್ಯಸ್ಥ ಉಮಾಪತಿ ಶ್ರೀನಿವಾಸ್ ಗೌಡ ಮುಂದೆಯೂ ಬಿಗ್ ಬಜೇಟ್‍ನ ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅದರಂತೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೈ ಒಲ್ಟೇಜ್‍ನ ‘ರಾಬರ್ಟ್’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಬಹು ನಿರೀಕ್ಷೆಯ ಈ ಚಿತ್ರವನ್ನು ಸಿಂಗಲ್ ಆಗಿ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಅವರು ರಾಬರ್ಟ್ ಮುಖೇನ ವಿತರಕರೂ ಆಗುತ್ತಿದ್ದಾರೆ. ಹೌದು ದೊಡ್ಡ ಮಟ್ಟದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಾಬರ್ಟ್‍ನ್ನು ರಿಲೀಸ್ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ ಶ್ರೀನಿವಾಸ್ ಅವರು. ಉಮಾಪತಿ ಫಿಲ್ಮಸ್ ಬ್ಯಾನರ್‍ನಿಂದ ಈಗಾಗಲೇ ಶ್ರೀಮುರಳಿ ಅವರ ನಾಯಕತ್ವದಲ್ಲಿ ‘ಮದಗಜ’ ಕೂಡ ಸೆಟ್ಟೇರಿದೆ.

ಅಂದಂಗೆ ರಾಬರ್ಟ್ ಸಿನಿಮಾ ಮತ್ತು ಉಮಾಪತಿ ಫಿಲ್ಮಸ್ ಬ್ಯಾನರ್ ಬಗ್ಗೆ ಮಾಹಿತಿ ನೀಡಿರುವ ಉಮಾಪತಿ ಶ್ರೀನಿವಾಸ್ ಗೌಡ ‘ಈಗಷ್ಟೇ ನಾವು ಶೂಟಿಂಗ್ ಮುಗಿಸಿಕೊಂಡು ತಾಂತ್ರಿಕ ಕೆಲಸಗಳಲ್ಲಿ ನಿರತರಾಗಿದ್ದೇವೆ. ಈ ಕೆಲಸ ಮುಗಿಯುತ್ತಿದ್ದಂತೆ ಸೆನ್ಸಾರ್ ಮನೆಗೆ ರಾಬರ್ಟ್ ಹೋಗಲಿದೆ. ಚಿತ್ರವನ್ನು ಏಪ್ರಿಲ್ 9 ರಂದು ಕನ್ನಡ, ತೆಲುಗು ವರ್ಷನ್‍ನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಒಂದು ಒಳ್ಳೆ ಸಿನಿಮಾವನ್ನು ನಮ್ಮ ಜನ ಯಾವತ್ತು ಕೈ ಬಿಡುವುದಿಲ್ಲ. ರಾಬರ್ಟ್ ಕಮರ್ಷಿಯಲ್ ಆಗಿ ತುಂಬಾ ಚೆನ್ನಾಗಿ ಬಂದಿದೆ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಯಾವ ಮೋಸ ಆಗದಂತೆ ಕರ್ನಾಟಕದ ಎಲ್ಲಾ ಸ್ಥಳಗಳಿಗೂ ಸಿನಿಮಾ ತಲುಪುವಂತೆ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುವುದು. ಈ ಸಿನಿಮಾ ಬಿಡುಗಡೆಗೂ ಮೊದಲು ಪ್ರತಿವಾರ ಒಂದೊಂದು ಗೀತೆಯನ್ನು ಅಂತರ್ಜಾಲದಲ್ಲಿ ರಿಲೀಸ್ ಮಾಡಲಿದ್ದೇವೆ. ಈ ನಡುವೆಯೇ ನಾವು ಗುಲ್ಬರ್ಗದಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದ್ದೇವು. ಆದರೆ ಸದ್ಯ ರಾಜ್ಯದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಇರೋದ್ರಿಂದ ಮಾ. 21 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಡಿಯೋ ರಿಲೀಸ್ ಎಲ್ಲಿ! ಯಾವಾಗ? ಎನ್ನುವುದನ್ನು ತಿಳಿಸಲಾಗುತ್ತದೆ. ಆಡಿಯೋ ಬಿಡುಗಡೆ ಮುಂದೆ ಹೋಗಿದ್ದರೂ, ಸಿನಿಮಾ ರಿಲೀಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲದೆ ನಮ್ಮ ಈ ಉಮಾಪತಿ ಫಿಲ್ಮಸ್ ಮುಖೇನ ಮುಂದೆಯೂ ಒಳ್ಳೊಳ್ಳೆ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತೇವೆ’ ಎನ್ನುವರು ಉಮಾಪತಿ ಶ್ರೀನಿವಾಸ್.

ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾದ ರಾಬರ್ಟ್ ಚಿತ್ರದ ಹಾಡೊಂದರ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆಗೊಸಿತ್ತು. ಈ ಗೀತೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ. ಬಹುತೇಕ ಮಾತಿನ ಭಾಗ ಚಿತ್ರೀಕರಿಸಿದ್ದ ಚಿತ್ರತಂಡ, ಚಿತ್ರದ ಬಾಕಿಯಿರುವ ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಜಗತ್ತಿನ ಎಲ್ಲೆಡೆ ಕೊರೊನಾ ವೈರಸ್ ಆತಂಕ ಮನೆ ಮಾಡಿದ್ದರಿಂದ, ವಿದೇಶ ಚಿತ್ರೀಕರಣ ರದ್ದು ಮಾಡಿ ಭಾರತದಲ್ಲೇ ಚಿತ್ರೀಕರಣ ಮಾಡಲು ತಯಾರಿ ಮಾಡಿಕೊಂಡರು. ಅದರಂತೆ ಈಗ ಚಿತ್ರತಂಡ, ಕೊರೊನಾ ಭಯದ ನಡುವೆಯೇ ಸದ್ದಿಲ್ಲದೆ ಭಾರತದಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಿದೆ. ಉಮಾಪತಿ ಶ್ರೀನಿವಾಸ್ ಬಿಗ್ ಬಜೆಟ್‍ನಲ್ಲಿ ನಿರ್ಮಿಸಿರುವ ಚಿತ್ರದಲ್ಲಿ ಸೋನಾಲಿ ಮಂಥೆರೊ, ಐಶ್ವರ್ಯಾ ಪ್ರಸಾದ್ ಹಾಗೂ ಆಶಾ ಭಟ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter