ಟ್ರೆಂಡಿಂಗ್‍ನಲ್ಲಿ ‘ಯುವರತ್ನ’ ಡೈಲಾಗ್ ಟೀಸರ್

Share on facebook
Share on twitter
Share on linkedin
Share on whatsapp
Share on email

ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ ಸಂಭ್ರಮವನ್ನು ‘ಯುವರತ್ನ’ ಸಿನಿಮಾ ತಂಡ ಇನ್ನಷ್ಟು ಹೆಚ್ಚಿಸಿದೆ. ಹೌದು ಇತ್ತೀಚೆಗೆ (ಮಾ. 17 ರಂದು) 45ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಅಂದು ಯುವರತ್ನ ಚಿತ್ರದ ಡೈಲಾಗ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಬಾರಿ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಮನೆ ಬಳಿ ಬರಬಾರದು ಎಂದು ಅಪ್ಪು ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಅಭಿಮಾನಿಗಳು ಸರಳವಾಗಿ ಅಪ್ಪು ಹುಟ್ಟದಬ್ಬ ಮಾಡಿದ್ದಾರೆ. ‘ಪ್ರತಿವರ್ಷ ಅಭಿಮಾನಿಗಳು ಮನೆಗೆ ಬಂದು ಶುಭ ಹಾರೈಸುತ್ತಿದ್ದೀರಿ. ಆದರೆ ಈ ಬಾರಿ ಕೊರೊನಾ ವೈರಸ್ ಹಾವಳಿ ಇದ್ದಿರುವುದರಿಂದ ನಾನು ಕೂಡಾ ಮನೆಯಲ್ಲಿ ಇರುವುದಿಲ್ಲ. ನೀವು ಕೂಡಾ ಸುರಕ್ಷಿತವಾಗಿರಬೇಕು. ಸರ್ಕಾರದ ಸೂಚನೆಯನ್ನು ಪಾಲಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಮ್ಮ ನಿವಾಸದ ಬಳಿ ಸೇರಬಾರದು. ನಿಮ್ಮ ಪ್ರೀತಿ, ಅಭಿಮಾನ ಸದಾ ಎಂದಿನಂತೆ ಇರಲಿ’ ಎಂದು ಅಪ್ಪು ಮನವಿ ಮಾಡಿಕೊಂಡಿದ್ದರು.

ಈ ಬಾರಿ ಪುನೀತ್ ಹುಟ್ಟುಹಬ್ಬಕ್ಕೆ ಅವರ ಅಭಿನಯದ ಬಹು ನಿರೀಕ್ಷೆಯ ‘ಯುವರತ್ನ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 1.40 ಸೆಕೆಂಡುಗಳ ಈ ಟೀಸರ್‍ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಟೀಸರ್ ನೋಡಿ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಪುನೀತ ಅವರ ಮುಂದಿನ ಚಿತ್ರ ‘ಜೇಮ್ಸ್’ನ ಮೋಷನ್ ಪೋಸ್ಟರ್ ಕೂಡ ಅಂದೇ ರಿಲೀಸ್ ಆಗಿರುವುದು ವಿಶೇಷ. ಸಂತೋಷ್ ಆನಂದ್‍ರಾಮ್ ನಿರ್ದೇಶನದ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ಹೊಂಬಾಳೆ ಫಿಲ್ಮಸ್‍ನ ವಿಜಯ್ ಕಿರಂಗಂದೋರು. ಸಂತೋಷ್, ಪುನೀತ್ ಮತ್ತು ನಿರ್ಮಾಪಕ ವಿಜಯ್ ಅವರ ಕಾಂಭಿನೇಷನ್‍ನಲ್ಲಿ ಬಂದಿದ್ದ ‘ರಾಜಕುಮಾರ್’ ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಕಮಾಲ್ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ಯಶಸ್ವಿ ಜೋಡಿ ಮತ್ತೆ ಒಂದಾಗಿರೋದು ಗಾಂಧಿನಗರದಲ್ಲಿ ‘ಯುವರತ್ನದ’ ಮೇಲೆ ತುಂಬಾ ಬರವಸೆ ಇಟ್ಟುಕೊಂಡಿದೆ. ಹಾಗೆ ಅಭಿಮಾನಿಗಳಲ್ಲೂ ಯುವರತ್ನನ ಮೇಲೆ ಎಲ್ಲಿಲ್ಲದ ಬರವಸೆ ಇದೆ. ಈ ಚಿತ್ರದಲ್ಲಿ ನಾಯಕಿಯಾಗಿ ಸಾಯೇಶಾ ಅಭಿನಯ ಮಾಡಿದ್ದಾರೆ. ಜೊತೆಗೆ ‘ಡಾಲಿ’ ಧನಂಜಯ್ ಕೂಡ ಚಿತ್ರದಲ್ಲಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter