ಅಕ್ಟೋಬರ್‍ನಲ್ಲಿ ವಿಶ್ವಾದ್ಯಂತ ಧೊಳೆಬ್ಬಿಸಲಿದೆ ಕೆಜಿಎಫ್-2

Share on facebook
Share on twitter
Share on linkedin
Share on whatsapp
Share on email

ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ ಯಶ್ ಅಭಿನಯದ “ಕೆಜಿಎಫ್-2′ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಹೌದು ‘ಕೆಜಿಎಫ್-2′ ಚಿತ್ರ 2020ರ ಅಕ್ಟೋಬರ್ 23ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾμÉಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು “ಕೆಜಿಎಫ್-2′ ಚಿತ್ರದ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್’ ತಿಳಿಸಿದೆ.

ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಚಿತ್ರತಂಡ, ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಯಶ್ ಗನ್ ಹಿಡಿದು ಸಾಗುತ್ತಿರುವಂತೆ ತೋರಿಸಲಾಗಿರುವ ಆಕರ್ಷಕ ಪೆÇೀಸ್ಟರ್‍ನೊಂದಿಗೆ, ಚಿತ್ರದ ದಿನಾಂಕವನ್ನು ಘೋಷಣೆ ಮಾಡಿದೆ. ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿಯ ಜತೆಗೆ “ಮೇ ಐ ಕಮ್ ಇನ್ ..’ ಎಂದು ಪ್ರೇಕ್ಷಕರನ್ನು ಕೇಳುತ್ತಿರುವಂತೆ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟರ್ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಿದೆ.

ಇನ್ನು ‘ಕೆಜಿಎಫ್-2′ ಚಿತ್ರ ಕಳೆದ ವರ್ಷ ಮಾರ್ಚ್ 13ರಂದು ಸೆಟ್ಟೇರಿತ್ತು. 2020ರ ಮಾರ್ಚ್ 13ರಂದು ಚಿತ್ರ ಸೆಟ್ಟೇರಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ವಿಜಯ್ ಕಿರಗಂದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಈ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈಗ ಅದೆಲ್ಲದಕ್ಕೂ ತೆರೆ ಬಿದ್ದಿದೆ. ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ಫರ್ಹಾನ್ ಅಖ್ತರ್ ಸೇರಿದಂತೆ ಬಹಳಷ್ಟು ಮಂದಿ ಕೆಜಿಎಫ್ 2 ಆಗಮನವನ್ನು ಸಾರಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter