ಶತದಿನದ ಸಂಭ್ರಮದಲ್ಲಿ ಕಿಸ್ ತಂಡ

Share on facebook
Share on twitter
Share on linkedin
Share on whatsapp
Share on email

ನಿರ್ದೇಶಕ ಎ.ಪಿ ಅರ್ಜುನ್ ನಿರ್ಮಿಸಿ ಆ್ಯಕ್ಷನ್-ಕಟ್ ಹೇಳಿರುವ ‘ಕಿಸ್’ ಚಿತ್ರ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಶತಕ ಬಾರಿಸಿದೆ. ಹೌದು, ನವ ನಟ ವಿರಾಟ್, ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ರೊಮ್ಯಾಂಟಿಕ್ ಕಥಾಹಂದರದ “ಕಿಸ್’ ಚಿತ್ರ ಯಶಸ್ವಿಯಾಗಿ 100 ದಿನಗಳ ಪ್ರದರ್ಶನವನ್ನು ಕಂಡಿದೆ. ಈ ಸಂಭ್ರಮವನ್ನು ಇತ್ತೀಚೆಗೆ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರರಂಗದ ಜೊತೆಗೆ ಹಂಚಿಕೊಳ್ಳಲು ಇತ್ತೀಚೆಗೆ ‘ಕಿಸ್’ ಚಿತ್ರ ಅದ್ಧೂರಿಯಾಗಿ ‘ಕಿಸ್ ಶತದಿನೋತ್ಸವ’ ಸಮಾರಂಭವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರರಂಗದ ಹಲವು ತಾರೆಯರು, ನಿರ್ದೇಶಕರು, ನಿರ್ಮಾಪಕರು, ಗಣ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ಮಾಣ ಮಾಡಿರುವ ಎ.ಪಿ.ಅರ್ಜುನ್ ಸಿನಿಮಾಕ್ಕೆ ದುಡಿದವರಿಗೆ ನೆನಪಿನ ಕಾಣಿಕೆ ನೀಡಿದರು. ತಾತನಾಗಿ ಕಾಣಿಸಿಕೊಂಡಿರುವ ದತ್ತಣ್ಣ ಒಂದಷ್ಟು ಮಂದಿಗೆ ಫಲಕಗಳನ್ನು ವಿತರಣೆ ಮಾಡಿ, ನಂತರ ಮಾತನಾಡುತ್ತಾ ‘ಇಬ್ಬರು ಹೊಸಬರನ್ನು ಇಟ್ಟುಕೊಂಡು 100 ದಿವಸ ಆಟವಾಡಿಸಿದ್ದಾರೆ. ರಾಜಕುಮಾರ, ಯಜಮಾನ, ಈಗ ಕಿಸ್ ನೂರು ದಿನ ಕಂಡಿದೆ. ಮೂರರಲ್ಲೂ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಬಹುಶ: ನಾನಿರುವ ಚಿತ್ರಗಳು ಶತದಿನ ಕಾಣುತ್ತವೆ’ ಎಂದರು. ‘

ಪ್ರತಿಯೊಬ್ಬ ನಿರ್ಮಾಪಕರಿಗೂ ನೂರು ದಿವಸ ಪ್ರದರ್ಶನ ಕಾಣುವ ಚಿತ್ರ ಮಾಡಬೇಕೆಂಬ ಬಯಕೆ ಇರುತ್ತದೆ. ನಾವು ಕಷ್ಟಪಟ್ಟು ಪ್ರೀತಿಯಿಂದ ಮಾಡಿದ್ದನ್ನು ಜನರು ಮುತ್ತು ಕೊಟ್ಟು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ. ನಿರ್ದೇಶಕ ನಿರ್ಮಾಪಕ ಆದಾಗ ಅದರ ಕಷ್ಟ ಏನೆಂದು ತಿಳಿದುಕೊಂಡೆ. ಆ ಸ್ಥಾನಕ್ಕೆ ಬಂದ ಸಮಯದಲ್ಲಿ ಖಾತೆಯಲ್ಲಿ ಕೇವಲ ರೂ.268 ಇತ್ತು. ಹಾಗೂ ಹೀಗೂ ಗೆಳೆಯರು, ಹಿತೈಷಿಗಳು ನನಗೆ ಒಳ್ಳೆಯದಾಗಲೆಂದು ಸಹಾಯ ಮಾಡಿದ್ದರಿಂದಲೇ ಒಂದೂವರೆ ಕೋಟಿ ಸಂದಾಯವಾಯಿತು. ಇದರಲ್ಲಿ ಚಿಕ್ಕಣ್ಣನ ಪಾಲೂ ಇದೆ. ಪ್ರತಿಯೊಬ್ಬರು ನಿರ್ಮಾಪಕರಾಗಿದ್ದರೂ ಪೋಸ್ಟರ್‍ನಲ್ಲಿ ನನ್ನ ಹೆಸರು ಮಾತ್ರ ಇದೆ ಅಷ್ಟೇ. ಸೆಟ್ ಬಾಯ್‍ನಿಂದ ಹಿಡಿದು ಕಲಾವಿದರು, ಪ್ರಚಾರಕರ್ತರು, ಮಾದ್ಯಮಗಳ ಸಹಕಾರದಿಂದಲೇ ಯಶಸ್ಸು ಸಿಕ್ಕಿದೆ. ಹರಿಕೃಷ್ಣ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಇರುವುದು ಪ್ಲಸ್ ಪಾಯಿಂಟ್ ಆಗಿತ್ತು. ಇದರಲ್ಲಿ ಒಂದು ಹಾಡಿಗೆ ಅವರ ಮಗ ಆದಿ ಹರಿಕೃಷ್ಣ ಕೇವಲ ಹತ್ತು ನಿಮಿಷದಲ್ಲಿ ರಾಗ ಸಂಯೋಜಿಸಿದ್ದು, ಸೂಪರ್ ಹಿಟ್ ಆಗಿದೆ. ಅವನಿಗೆ ಉಜ್ವಲ ಭವಿಷ್ಯವಿದೆ’ ಎನ್ನುತ್ತಾ ಅರ್ಜುನ್.

ಇದೇ ಸಂದರ್ಭದಲ್ಲಿ ನಾಯಕ ವಿರಾಟ್, ನಾಯಕಿ ಶ್ರೀಲೀಲಾ, ಶಿವರಾಜ್.ಕೆ.ಅರ್.ಪೇಟೆ, ಸುಂದರ್, ಶಮಂತ್ ಶೆಟ್ಟಿ, ಗಿರಿ, ವಿ.ಹರಿಕೃಷ್ಣ, ತಂತ್ರಜ್ಞರು ಗೌರವ ಸ್ವೀಕರಿಸಿದರು. ಡಿ ಬೀಟ್ಸ್ ಒಡತಿ ಶೈಲಜಾ ನಾಗ್, ಅರ್ಜುನ್ ಪೋಷಕರು, ಕುಟುಂಬ ವರ್ಗದವರು ಹಾಜರಿದ್ದರು. ಇದರ ಮಧ್ಯೆ ‘ಕಿಸ್’ ಮೇಕಿಂಗ್, ನಡೆದು ಬಂದ ದಾರಿ ಕುರಿತಂತೆ ತುಣುಕುಗಳು, ‘ನೀನೆ ಮೊದಲು …’ ಹಾಡು ಪ್ರದರ್ಶನಗೊಂಡಿತು. ಕೊನೆಂiÀiಲ್ಲಿ ನಿರ್ದೇಶಕರು ‘ಅದ್ದೂರಿ ಲವರ್’ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿ, ಎಲ್ಲರಿಂದ ಪೋಸ್ಟರ್ ಅನಾವರಣಗೊಳಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter