ನಾವೆಲ್ರೂ ಹಾಫ್ ಬಾಯಿಲ್ಡ್ ಎನ್ನುತ್ತಿದ್ದಾರೆ ಹೊಸಬರು

ನಾವೆಲ್ರೂ ಹಾಫ್ ಬಾಯಿಲ್ಡ್ ಎನ್ನುತ್ತಿದ್ದಾರೆ ಹೊಸಬರು

ಕಳೆದ ವರ್ಷ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಸಾಕಷ್ಟು ರಿಲೀಸ್ ಆಗಿವೆ. ಆದರೆ, ಯಶಸ್ಸಿನಲ್ಲಿ ಬೆರಳೆನಿಕೆಯಷ್ಟು ಚಿತ್ರದ ಹೆಸರುಗಳು ಸಿಗುತ್ತವೆ. ಇದೀಗ ಈ ವರ್ಷದ ಮೊದಲ ತಿಂಗಳಲ್ಲಿ ಹೊಸಬರ ಸಿನಿಮಾವೊಂದು ರಿಲೀಸ್‍ಗೆ ಸಿದ್ದವಾಗಿದೆ. ಅದುವೆ ‘ನಾವೆಲ್ರೂ ಹಾಫ್ ಬಾಯಿಲ್ಡ್’. ಇದೇ ಜ. 24 ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ಈ ಚಿತ್ರ ತನ್ನ ಟೈಟಲ್‍ನಿಂದಲೇ ಕುತೂಹಲ ಹುಟ್ಟಿಸಿದೆ. ಈಗಾಗಲೇ ಚಿತ್ರದ ಹಾಡುಗಳಿಗೆ ಅಂತರ್ಜಾಲದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇತ್ತೀಚೆಗಷ್ಟೇ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಯುವ ಪ್ರತಿಭೆಗಳ ಹೊಸ ಮಾದರಿಯ ಸಿನಿಮಾ. ಇದಾಗಿದ್ದು, ಶೀರ್ಷಿಕೆಗೆ ಅರ್ಧ ಬೆಂದ ಮೊಟ್ಟೆ ಅರ್ಥ ಬರುತ್ತದೆ. ಹಾಗೆ ನೋಡಿದರೆ ಇಲ್ಲಿ ಯಾರು ಫರ್‍ಫೆಕ್ಟ್ ಅಲ್ಲ ಎಲ್ಲರೂ ಅರ್ಧಂಬರದ ತಿಳಿದವರೆ. ಈ ಅಂಶದ ಮೇಲೆ ಸಿನಿಮಾ ಮಾಡಲಾಗಿದೆ.


‘ಇದೊಂದು ನಾಲ್ಕು ಬ್ಯಾಚ್ಯುಲರ್ ಹುಡುಗರ ಕಥೆ ಎಂದು ಹೇಳಬಹುದು. ಮೊದಲು ನಾವೆಲ್ಲಾ ಯುವಕರು ಸೇರಿಕೊಂಡು ಒಂದು ಶಾರ್ಟ್ ಫಿಲ್ಮ ಮಾಡಲು ಕಥೆ ಶುರು ಮಾಡಿದೆವು. ನಂತರ ಕಥೆ ಲೈನ್ ಚನ್ನಾಗಿ ಇದ್ದಿದ್ದರಿಂದ ಲೋ ಬಜೆಟ್‍ನಲ್ಲಿ ಸಿನಿಮಾವನ್ನೆಕ್ಕೆ ಮಾಡಬಾರದು ಎಂದುಕೊಂಡು ನಟ ತಬಲಾನಾಣಿ ಅವರ ಕಡೆ ಹೋದೆವು. ಅವರು ಕಥೆ ಕೇಳಿ ಸಂಭಾಷಣೆ ಬರೆಯುವುದರ ಜೊತೆಗೆ ನಟಿಸಲು ಒಪ್ಪಿದರು. ನಂತರ ನಿರ್ಮಾಪಕರನ್ನು ಹುಡುಕುತ್ತ ತಾವೆ ಒಂದಿಷ್ಟು ಹಣ ಹಾಕಿಕೊಂಡು ಚಿತ್ರೀಕರಣ ಶುರು ಮಾಡಿದೆವು. ಹೀಗೆ ಒಂದು ದಿನ ದಾವಣಗೆರೆ ಗ್ಯಾರೆಜ್‍ವೊಂದರಲ್ಲಿ ಕಾರ್ ಡಿಸೈನ್ ಮಾಡಿಸಲು ಹೋದಾಗ ಅಚಾನಕ್ ಆಗಿ ನಿರ್ಮಾಪಕ ಅಮೀರ ಅಹಮದ್ ಅವರ ಪರಿಚಯವಾಯ್ತು.

ಅವರಿಗೂ ಕಥೆ ತುಂಬಾ ಇಷ್ಟವಾಗಿ ಸಿನಿಮಾಗೆ ಬಂಡವಾಳ ಹೊಡಿದರು. ಈ ಚಿತ್ರಕ್ಕೆ ಹೀರೋಗಳು ನಾಲ್ಕು ಜನ ಅಲ್ಲ ನಿರ್ಮಾಪಕರು ನಿಜವಾದ ಹೀರೋ. ಬ್ಯಾಚುಲರ್ ಕಥೆ ನಾಲ್ಕು ಜನರ ಮೇಲೆ ಸಾಗುತ್ತದೆ. ಸೆನ್ಸಾರ್‍ನಿಂದ ಎ ಪ್ರಮಾಣ ಪಾತ್ರ ಸಿಕ್ಕಿದ್ದು, ಎಲ್ಲರಿಗೂ ಎಲ್ಲಾ ಗೊತ್ತಿಲ್ಲ ಎಂಬುದು ಕಥೆ. ಒಂದರ್ಥದಲ್ಲಿ ಅರ್ಧ ಬೆಂದ ಮೊಟ್ಟೆ ಎನ್ನಬಹುದು’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕ ಶಿವರಾಜ್ ವೆಂಕಟಾಚ್ಚ. ತೆಲಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಿಗೆ ಕೆಲಸಮಾಡಿರುವ ಶಿವರಾಜ್‍ಗೆ ಇದು ನಿರ್ದೇಶನದ ಮೊದಲ ಸಿನಿಮಾ.

ಇದೇ ಸಂದರ್ಭದಲ್ಲಿ ನಿರ್ಮಾಪಕ ಅಮೀರ ಅಹಮದ್ ಮಾತನಾಡಿ, ‘ನಮ್ಮದು ದಾವಣಗೆರೆ. ಅನುಗ್ರಹ ಮ್ಯೂವಿಸ್ ಬ್ಯಾನರ್ ಮೂಲಕ ಮೊದಲಬಾರಿ ಈ ಸಿನಿಮಾ ಮಾಡಲಾಗಿದೆ. ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ನಾನು ರವಿಚಂದ್ರನ್ ಅಭಿಮಾನಿ. ಈ ತಂಡ ನಮ್ಮ ಮನೆಯನ್ನು ಶೂಟಿಂಗ್‍ಗೆಂದು ನೋಡಲು ಬಂದರು. ಅಲ್ಲಿಂದ ಈ ತಂಡದಲ್ಲಿ ಸೇರಿಕೊಂಡೆ. ಈಗ ಸಿನಿಮಾ ಮಾಡುವ ನನ್ನ ಕನಸು ನನಸಾಗಿದೆ’ ಎನ್ನುವರು. ಅಂದಂಗೆ ಈ ಚಿತ್ರಕ್ಕೆ ಬಾಹುಬಲಿ ತಂಡದ ನಂಟಿದೆ. ಹೇಗೆ ಅಂದರೆ, ಬಾಹುಬಲಿ ಚಿತ್ರಕ್ಕೆ ಕೆಲಸ ಮಾಡಿದ್ದ ಕುಶೇಂದರ್ ರೆಡ್ಡಿ ಛಾಯಾಗ್ರಹಣ ಮಾಡಿದ್ದಾರೆ. ಅಲ್ಲದೆ, ನೃತ್ಯ ನಿರ್ದೇಶಕರಾಗಿ ಮೂರು ಗೀತೆಗಳಿಗೆ ಕೆಲಸ ಮಾಡಿದ್ದಾರೆ ಪ್ರೇಮ್ ರಕ್ಷೀತ್. ಇವರೊಂದಿಗೆ ಸಂಗೀತ ನಿರ್ದೇಶಕರಾಗಿ ನಾಲ್ಕು ಗೀತೆಗಳಿಗೆ ಸಂಗೀತ ಸಂಯೋಜಿಸುವುದಲ್ಲದೆ ಒಂದು ಸಾಂಗ್ ಹಾಡಿದ್ದಾರೆ ವಿಜೇತ್ ಕೃಷ್ಣ. ಭರ್ಜರಿ ಚೇತನ್ ಕುಮಾರ್ ಬರೆದಿರು ಗೀತೆಗಳಿಗೆ ವಿಜಯ್ ಪ್ರಕಾಶ್, ಸಂಚಿತ ಹೆಗಡೆ ಧ್ವನಿ ನೀಡಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ ದಾವಣಗೆರೆ ಮೂಲದ ಸುನೀಲ್ ಕುಮಾರ್, ದೀಪಕ್ ಹಂಪಿ, ಮಂಜು ಬದ್ರಿ ಹಾಗೂ ಹಂಪೇಶ್ ಅರಸೂರ್. ನಾಯಕಿಯರಾಗಿ ‘ಕಹಿ’ ಖ್ಯಾತಿಯ ಮಾತಂಗಿ ಪ್ರಸನ್ ಹಾಗೂ ಹೊಸ ಪ್ರತಿಭೆ ವಿನ್ಯಾ ಶೆಟ್ಟಿ. ಇವರೊಂದಿಗೆ ಅನಂತ ಪದ್ಮನಾಭ ತಾರಾಗಣದಲ್ಲಿದ್ದಾರೆ. ‘ನಾಲ್ಕು ಜನರ ಜೊತೆ ನಾನು ಇರುತ್ತೇನೆ. ದೀಪುಗೆ ಚಿಕ್ಕಪ್ಪನ ಪಾತ್ರ ಮಾಡಿದ್ದೇನೆ. ಬೇಗ ಶ್ರೀಮಂತ ಆದ್ರೆ ಎನಾಗುತ್ತೆ ಎಂಬ ಅಂಶವನ್ನಿಟ್ಟುಕೊಂಡು ಯುವಕರಿಗೆ ಮೆಸೇಜ್ ನೀಡಲಾಗಿದೆ. ನಂದಿಲ್ಲಿ ಬಿಲ್ಡಪ್ ಕೊಡುವ ಪಾತ್ರ’ ಎಂದು ಹೇಳಿಕೊಂಡರು ತಬಲಾ ನಾಣಿ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.