ಮಹಿಳಾ ಪ್ರಧಾನ ಓಜಸ್‍ನಲ್ಲಿ ಡಿಸಿಯಾದ ನೇಹ ಸಕ್ಸೇನ

Share on facebook
Share on twitter
Share on linkedin
Share on whatsapp
Share on email

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ತಮ್ಮದೆ ಛಾಪು ಮುಡಿಸಿವೆ. ಆ ಸಾಲಿಗೆ ಸದ್ಯ ‘ಓಜಸ್’ ಎಂಬ ಸಿನಿಮಾ ಸೇರಲಿದೆ. ‘ಓಜಸ್’ ಇದೊಂದು ಸಂಸ್ಕøತ ಪದವಾಗಿದ್ದು, ಕನ್ನಡದಲ್ಲಿ ‘ಬೆಳಕು’ ಎಂಬ ಅರ್ಥ ಬರುತ್ತದೆ. ಕತ್ತಲೆಯಿಂದ ಕೂಡಿದ ಸಮಾಜವನ್ನು ಒಬ್ಬ ಮಹಿಳೆ ಹೇಗೆ ಬೆಳಕಿನೆಡೆಗೆ ಕೊಂಡ್ಯೋಯುತ್ತಾಳೆ ಎಂಬುದೇ ಈ ಚಿತ್ರದ ಒನ್ ಲೈನ್ ಕಥೆ. ಇದು 2016 ರಲ್ಲಿ ಸಿದ್ದವಾದ ಸಿನಿಮಾ. ಈಗ ಮುಂದಿನ ತಿಂಗಳು (ಫೆ. 7 ರಂದು) ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಡಿಸಿ ಪಾತ್ರ ನಿರ್ವಯಿಸಿದ್ದಾರೆ ನೇಹಾ ಸಕ್ಸೇನಾ. ತಾಯಿಯಾಗಿ ಪ್ರಮುಖ ಪಾತ್ರದಲ್ಲಿದ್ದಾರೆ ಭವ್ಯ ಉಳಿದಂತೆ ಡಿಂಗ್ರಿ ನಾಗರಾಜ್, ರಮಾನಂದ ಮುಂತಾದವರು ಚಿತ್ರದಲ್ಲಿ ಇದ್ದಾರೆ. ಇನ್ನು ಖಳನಾಯಕನಾಗಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಯತಿರಾಜ್. ಇದು ಇವರ ಬದುಕಿನಲ್ಲಿ ಬೆಳಕು ತರುವಂತಹ ಸಿನಿಮಾ ಆಗಲಿದೆಯಂತೆ.

ಅಂದಂಗೆ ‘ಓಜಸ್’ಗೆ ಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ಯುವ ಪ್ರತಿಭೆ ಸಿಜೆ ವರ್ಧನ್. ಸಿನಿಮಾ ಬಗ್ಗೆ ಮಾಹಿತಿ ನೀಡುವ ಸಿಜೆ ‘ಮನೆಯಲ್ಲೊಂದು ಹೆಣ್ಣು ಮಗು ಹುಟ್ಟಿದರೆ, ಅದನ್ನು ಮನೆಯ ಬೆಳಕು ಎನ್ನುವರು. ಹಾಗೆಯೇ ಆ ಹೆಣ್ಣು ಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೆ, ಆ ಮನೆಗೆ ಲಕ್ಷ್ಮೀಯಾಗಿ ಬಳಕು ನೀಡುವಳು. ಹಾಗೆಯೇ ನಾಯಕಿ ಮನೆಯಲ್ಲಿ ನಡೆದ ಒಂದು ಘಟನೆಯಿಂದ ದಿಭ್ರಮೆ ಗೊಳ್ಳದೆ ಸ್ಪುರ್ತಿಯಿಂದ ತೆಗೆದುಕೊಂಡು, ನಮ್ಮ ಮನೆಯಲ್ಲಿ ನಡೆದ ಘಟನೆ ಬೇರೆ ಯಾವ ಮನೆಯಲ್ಲೂ ಎಂದೂ ನಡೆಯಬಾರದು ಎಂಬ ಪನ ತೋಡುವಳು. ನಂತರ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಇದ್ದ ರಾಮಣ್ಣ ಎಂಬ ವಿಲನ್ ಅನ್ನು ವೈಲೆನ್ಸ್ ಇಲ್ಲದೆ ರಾಮನನ್ನಾಗಿ ಬದಲಾವನೆ ಮಾಡುವಳು. ಆತನಲ್ಲಿದ್ದ ರಾವನ ಅಂಶವನ್ನು ಬೇರು ಸಮೆತ ಕಿತ್ತು ಹಾಕಿ, ಶಿಕ್ಷೆ ಕೊಡದೆ ಬದಲಾವನೆ ಮಾಡಿ, ಆತನಿಂದಲೇ ಸಮಾಜಕ್ಕೆ ಬೆಳಕು ಕೊಡುವಂತೆ ಮಾಡುವುದೇ ಈ ಚಿತ್ರದ ಹೈಲೈಟ್’ ಎನ್ನುವರು.

ಬಿ.ಎನ್.ಸ್ವಾಮಿ ಅರ್ಪಿಸುವ, ರಜತ್ ರಘುನಾಥ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ರಜತ್ ರಘುನಾಥ್ ಹಾಗೂ ಎಡ್ವರ್ಡ್ ಡಿಸೋಜಾ ಮೊದಲಬಾರಿ ನಿರ್ಮಿಸಿರುವ ಈ ಚಿತ್ರದ ಒಂದು ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ ಕಾರ್ತಿಕ್ ವೆಂಕಟೇಶ್. ಉಳಿದಂತೆ ಪಿ.ವಿ.ಆರ್ ಸ್ವಾಮಿ ಅವರ ಛಾಯಾಗ್ರಹಣ, ಕೆ.ಗುರುಪ್ರಸಾದ್ ಸಂಕಲನ, ಹಾಗೂ ಕಪಿಲ್ ಅವರ ನೃತ್ಯ ನಿರ್ದೇಶನವಿದೆ. ಚಿತ್ರಕ್ಕೆ ವಿನಯ್ ಸಂಭಾಷಣೆ ಬರೆದಿದ್ದಾರೆ. ಬೆಂಗಳೂರು, ತುಮಕೂರು, ಮದ್ದೂರಿನ ಸುತ್ತಮುತ್ತ ಚಿತ್ರೀಕರಣವಾಗಿರುವ ಓಜಸ್ ತಾರಾಗಣದಲ್ಲಿ ಖ್ಯಾತ ನಟಿ ಭವ್ಯ, ನೇಹ ಸಕ್ಸೇನ, ಯತಿರಾಜ್, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ದುಬೈ ರಫಿûೀಕ್, ಎಡ್ವರ್ಡ್ ಡಿಸೋಜ ಮುಂತಾದವರು ಇದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter