ಭರತ ಬಾಹುಬಲಿಯಲ್ಲಿ ಮನರಂಜನಾ ಮಹಾಪೂರ

ಭರತ ಬಾಹುಬಲಿಯಲ್ಲಿ ಮನರಂಜನಾ ಮಹಾಪೂರ

ಈಗಾಗಲೇ ತನ್ನ ಟ್ರೇಲರ್ ಮತ್ತು ಹಾಡುಗಳಿಂದ ಚಂದನವನದಲ್ಲಿ ಕ್ರೇಜ್ ಹುಟ್ಟಿಸಿರುವ ‘ಶ್ರೀ ಭರತ ಬಾಹುಬಲಿ’ ಇಂದು (ಜ. 17) ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ‘ಮಾಸ್ಟರ್ ಪೀಸ್’ ಸಿನಿಮಾ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ‘… ಬಾಹುಬಲಿ’ ಚಿತ್ರಕ್ಕೆ ನಟನೆ ಜೊತೆ ನಿರ್ದೇಶನವನ್ನು ಮಾಡಿದ್ದಾರೆ. ಇವರ ಜೊತೆಗೆ ಹಿರಿಯ ನಟ ಚರಣ್ ರಾಜ್ ಅವರ ಪುತ್ರ ತೇಜ್ ಚರಣ್ ರಾಜ್ ಕೂಡ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ಹೈಲೈಟ್ ಆಗುವಂತ ಪಾತ್ರದಲ್ಲಿ ತೇಜ್ ನಟಿಸಿದ್ದಾರೆ.

ಹೌದು ಚಿತ್ರದಲ್ಲಿ ಪುರಾಣದ ಹಿನ್ನಲೆಯ ಕಥೆಯೊಂದು ಬರುತ್ತದೆ. ಅದರಲ್ಲಿ ಬಾಹುಬಲಿ ಪಾತ್ರವನ್ನು ಉಪೇಂದ್ರ ಮಾಡಬೇಕಿತ್ತು. ಅವರು ಚುನಾವಣೆಯಲ್ಲಿ ಬ್ಯುಸಿ ಇದ್ದ ಕಾರಣ ಆಗಲಿಲ್ಲ. ಕೊನೆಗೆ ಕಟ್ಟು ಮಸ್ತಾಗಿ ಇರುವ ಹುಡುಗನನ್ನು ತಲಾμï ಮಾಡುತ್ತಿರುವ ಸಂದರ್ಭದಲ್ಲಿ ಅಕಸ್ಮಾತ್ ಚರಣ್ ರಾಜ್ ನಿರ್ದೇಶಕರಿಗೆ ಸಿಕ್ಕಿದ್ದಾರೆ. ಹಾಗೆ ಮಂಜು ಮಾಂಡವ್ಯ ಬಳಿ ಉಭಯ ಕುಶಲೋಪರಿ ನಡೆಸುತ್ತಿರುವಾಗ ಮಗನ ಫೆÇೀಟೋ ತೋರಿಸಿದ್ದಾರೆ. ಇಂತಹ ಹುಡುಗನನೇ ಹುಡುಕುತಿದ್ದ ನಿರ್ದೇಶಕರಿಗೆ ಬಹಳ ಸಂತಸವಾಗಿದೆ. ನಂತರ ತೇಜ್ ಅವರನ್ನು ಒಪ್ಪಿಸಿ ಬಾಹುಬಲಿ ಪಾತ್ರವನ್ನು ಮಾಡಿಸಿದ್ದಾರೆ. ‘ಹತ್ತು ನಿಮಿಷದ ಪಾತ್ರವಾದರೂ ಕತೆಗೆ ಪ್ರಮುಖವಾಗಿ ಬರುತ್ತದೆ. ಅವರು ಬಾಹುಬಲಿಯಾಗಿ ಮಲ್ಲಯುದ್ದ ಮಾಡಿದ್ದಾರೆ. ಸದರಿ ಸನ್ನಿವೇಶಕ್ಕೆ ಸುಮಾರು 90 ಲಕ್ಷ ಖರ್ಚು ಮಾಡಲಾಗಿದೆ’ ಎಂದು ಮೊನ್ನೆತಾನೆ ಪುತ್ರನೊಂದಿಗೆ ಆಗಮಿಸಿದ್ದ ಚರಣ್ ರಾಜ್ ತನಗೆ ಸಿಕ್ಕ ಪೆÇ್ರೀತ್ಸಾಹ ಅವನಿಗೂ ಸಿಗಲು ಮಾದ್ಯಮದ ಸಹಕಾರಬೇಕೆಂದು ಕೋರಿದರು.

ಅಂದಂಗೆ ಐಶ್ವರ್ಯ ಫಿûಲಂ ಪೆÇ್ರಡಕ್ಷನ್ಸ್ ಲಂಛನದಲ್ಲಿ ಶಿವಪ್ರಕಾಶ್.ಟಿ ಅವರು ಇದೇ ಮೊದಲಬಾರಿ ಸಿನಿಮಾ ಕೃಷಿಗೆ ಬಂಡವಾಳ ಹುಡಿದ್ದಾರೆ. ಈ ಚಿತ್ರದ ಮೂಲಕ ಹೀರೋ ಆಗಿರುವ ಮಂಜು ಮಾಂಡವ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಪರ್ವೆಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಮುರಳಿ ನೃತ್ಯ ನಿರ್ದೇಶನ, ಮಲ್ಲ, ಶಿವಕುಮಾರ್, ಅರುಣ್ ಸಾಗರ್ ಕಲಾ ನಿರ್ದೇಶನ ಹಾಗೂ ಮಾಸ್ ಮಾದ, ಎ.ವಿಜಯ್, ವಿನೋದ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ತಾರಾಗಣದಲ್ಲಿ ಮಂಜು ಮಾಂಡವ್ಯ, ಚಿಕ್ಕಣ್ಣ, ತೇಜ್ ರಾಜ್ ಸೇರಿದಂತೆ ಶ್ರೇಯಾ ಶೆಟ್ಟಿ, ಸಾರಾ ಹರೀಶ್, ಶೃತಿ ಪ್ರಕಾಶ್, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತರಾವ್, ಹರೀಶ್ ರಾಯ್, ಜಾನ್ ಕೊಕೇನ್, ಅಯ್ಯಪ್ಪ ಪಿ.ಶರ್ಮ ಕರಿಸುಬ್ಬು, ಪುಷ್ಪಸ್ವಾಮಿ ಮುಂತಾದವರು ಇದ್ದಾರೆ.

ಸಿನಿಮಾ ನೋಡಿ ಕಾರು, ಬಂಗಾರ ಗೆಲ್ಲಿ
ವಿಭಿನ್ನವಾಗಿ ಪ್ರಚಾರ ಕೈಗೊಂಡಿರುವ ‘ಶ್ರೀ ಭರತ ಬಾಹುಬಲಿ’ ಚಿತ್ರತಂಡ ಪ್ರೇಕ್ಷಕರಿಗೆ ಕೋಟಿ ರೂಪಾಯಿ ಮೌಲ್ಯದ ಕಾರು ಬಂಗಾರವನ್ನು ಗೆಲ್ಲೊಉವ ಅವಕಾಶ ನೀಡಿದೆ. ಸಿನಿಮಾ ಪ್ರಚಾರಕ್ಕೆಂದೇ ನಿರ್ಮಾಪಕ ಶಿವ ಪ್ರಕಾಶ್ ಒಂದು ಕೋಟಿ ಮೀಸಲಿರಿಸಿದ್ದಾರೆ. ಸಿನಿಮಾ ಟಿಕೆಟ್ ಖರೀದಿಸುವವರಿಗೆ ಒಂದು ಕೂಪನ್ ನೀಡಲಿದೆ ಚಿತ್ರತಂಡ. ಅದನ್ನು ವೀಕ್ಷಕರು ಟಿಕೆಟ್ ಜೊತೆಗೆ ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು. ಲಕ್ಕಿ ಡ್ರಾದಲ್ಲಿ ಆಯ್ಕೆಯಾದವರಿಗೆ ಕಾರು, ಚಿನ್ನ ನೀಡಲಾಗುವುದು. ಈ ಆಫರ್ ಬಿಡುಗಡೆಯಾದ ಎರಡು ವಾರದವರೆಗೆ ಸೀಮಿತ. ಇದಕ್ಕಾಗಿ 25 ಲಕ್ಷ ಖರ್ಚು ಮಾಡಿ 80 ಲಕ್ಷ ಕೂಪನ್ ಮುದ್ರಣ ಮಾಡಿಸಿದ್ದಲ್ಲದೆ ಐದು ಲಕ್ಷ ಬಾಳುವ 10 ಚಿನ್ನದ ಒಡೆವೆಗಳು, 10 ಕಾರುಗಳನ್ನು ಖರೀದಿಸಲಾಗಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.