ಮತ್ತೆ ಕೋಡ್ಲು ರಾಮಕೃಷ್ಣ ಹೇಳುತ್ತಿದ್ದಾರೆ ಉಧ್ಭವ ಕಥೆ

Share on facebook
Share on twitter
Share on linkedin
Share on whatsapp
Share on email

ಕೋಡ್ಲು ರಾಮಕೃಷ್ಣ ಮತ್ತು ಅನಂತ್‍ನಾಗ್ ಕಾಂಭಿನೆಷನ್‍ನಲ್ಲಿ ಮೂವತ್ತು ವರ್ಷಗಳ ಹಿಂದೆ ‘ಉಧ್ಭವ’ ಸಿನಿಮಾ ತೆರೆಗೆ ಬಂದು ದೊಡ್ಡ ಯಶಸ್ಸನ್ನು ಗಿಟ್ಟಿಸಿಕೊಂಡಿತ್ತು. ನಿರ್ದೇಶಕ ಕೋಡ್ಲು ಅವರು ಎಲ್ಲೇ ಹೊದರು ಜನ ಉಧ್ಭವದ ಮಾದರಿಯಲ್ಲಿ ಇನ್ನೊಂದು ಸಿನಿಮಾ ಮಾಡಿ ಎಂದು ಕೇಳುತ್ತಿದ್ದರು. ಈ ಪ್ರೇರಣೆಯಿಂದಲೇ ಈಗ ಅವರು ‘ಮತ್ತೆ ಉಧ್ಭವ’ ಚಿತ್ರವನ್ನು ಸಿದ್ದಗೊಳಿಸಿದ್ದಾರೆ. ಹೌದು ಬಹು ನಿರೀಕ್ಷೆಯಿಂದ ಮತ್ತೆ ಉಧ್ಭವ ಸಿದ್ದವಾಗಿದ್ದು, ಇಂದು (ಫೆ. 7) ರಾಜ್ಯಾದ್ಯಂತ ಅದ್ದೂರಿಯಾಗಿ 160 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದ ಬಗ್ಗೆ ಮಾತನಾಡಿರು ಕೋಡ್ಲು ರಾಮಕೃಷ್ಣ ‘ಹಿಂದಿನ ಚಿತ್ರ ಹಿಟ್ ಆಗಿದ್ದು 30 ವರ್ಷ ಆದಮೇಲೆ ಮತ್ತೆ ಉಧ್ಭವ ಮಾಡಲಾಗಿದೆ. ಹಿಂದಿನ ಉಧ್ಭವ ಕ್ಲಾಸ್ ಚಿತ್ರವಾಗಿದ್ದು, ಮತ್ತೆ ಉಧ್ಭವ ಮನರಂಜನೆಯಾಗಿ ಮಾಸ್ ಚಿತ್ರವಾಗಿದೆ. ಇದರಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲಾ ಇದೆ. ಚಿತ್ರದ ಎರಡು ಹಾಡುಗಳು ಮತ್ತು ರೀ ರೆಕಾರ್ಡ್‍ಗೆ ವಿ. ಮನೋಹರ್ ಸಂಗೀತ ಒದಗಿಸಿದ್ದು, ಇದು ಚಿತ್ರದ ಹೈಲೈಟ್‍ಗಳಲ್ಲಿ ಒಂದು. ಜೊತೆಗೆ ನಾಯಕ ಪ್ರಮೋದ್ ನಾಯಕಿ ಮಿಲನಾ ನಾಗರಾಜ್ ಗಮನ ಸೇಳೆಯುತ್ತಾರೆ. ಇವರ ಜೊತೆ ರಂಗಾಯಣ ರಘು ಗಮನ ಸೇಳೆದಿದ್ದಾರೆ. ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದ್ದು, ಇದು ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಸಿನಿಮಾ ನೋಡುವಾಗ ಜನ ತುಂಬಾ ಎಂಜಾಯ್ ಮಾಡುತ್ತಾರೆ. ದೃಶ್ಯಗಳಲ್ಲಿ ಹೊಸತನ ಇದ್ದು, ಚಿತ್ರ ರಿಲೀಸ್ ಆದಮೇಲೆ ಬೆದರಿಕೆ ಕರೆಗಳು ಬರುತ್ತವೆ ಎಂದು ನಂಬಿದ್ದೆನೆ. ಹಿಂದಿನ ಚಿತ್ರ ರಿಲೀಸ್ ಆದಾಗಲೂ ಬೆದರಿಕೆ ಕರೆ ಬಂದಿದ್ದವು. ಈಗಾಗಲೇ ಚಿತ್ರವನ್ನು ಎರಡು ಭಾಷೆಗೆ ಡಬ್ಬಿಂಗ್ ಮಾತುಕತೆ ನಡೆದಿದೆ’ ಎನ್ನುವರು.

ಈಗಾಗಲೇ ‘ಗಿತಾ ಬ್ಯಾಂಗಲ್ ಸ್ಟೋರ್’ ಹಾಗೂ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಮೋದ್ ಈ ಚಿತ್ರದ ಹೀರೋ. ‘ನಂಗೆ ಚಿತ್ರದಲ್ಲಿ 5-6 ಶೇಡ್ ಪಾತ್ರವಿದೆ. ಇದರಲ್ಲಿ ನಿರ್ದೇಶಕರು ತುಂಬಾ ವಿಷಯಗಳನ್ನು ಟಚ್ ಮಾಡಿದ್ದಾರೆ. ಅನಂತ್ ನಾಗ್ ಅವರ ಅಪ್ ಡೇಟ್ ವರ್ಷನ್ ನಲ್ಲಿ ನಾನು ನಟಿಸಿದ್ದೇನೆ. ಈ ಮೊದಲಿನ ಎರಡು ಚಿತ್ರಗಳಲ್ಲಿ ನಾನು ಸಾಪ್ಟ್ ಪಾತ್ರ ಮಾಡಿದ್ದೆ ಇದರಲ್ಲಿ ಕಿರಾತಕ ಪಾತ್ರ. ದೆವರ ಮೆಲೆ ಬಕ್ತಿ ಇಡಿ ಅದನ್ನೇ ನಂಬಬೇಡಿ ಎಂದು ಹೇಳಲಾಗಿದೆ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ಮಿಲನಾ ನಾಗರಾಜ್ ಇದ್ದು, ಇವರಿಲ್ಲಿ ಹೀರೋಯಿನ್ ಹಾಗೂ ರಾಜಕಾರಣಿ ಆಗಿ ನಟಿಸಿದ್ದಾರೆ.

ಮಜಾ ಕೊಡುವ, ನೈಜತೆಗೆ ಹತ್ತಿರವಾದ ಈ ಚಿತ್ರವನ್ನು ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್ ಸಂಸ್ಥೆಯ ಮೂಲಕ ನಿತ್ಯಾನಂದ ಭಟ್ ಅವರು ನಿರ್ಮಾಣ ಮಾಡಿದ್ದಾರೆ. ಈ ಬ್ಯಾನರ್‍ನ 2ನೇ ಸಿನಿಮಾ ಇದಾಗಿದ್ದು, ಪ್ಲ್ಯಾನ್ ಮಾಡಿಕೊಂಡು ಮತ್ತೆ ಉಧ್ಭವ ಮಾಡಲಾಗಿದೆ. ‘ನಾವು ಅಂದುಕೊಂಡಕಿಂತ ಚನ್ನಾಗಿ ಬಂದಿದೆ ಸಿನಿಮಾ. ಈ ವಾರ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ಯುಎಸ್, ಆಸ್ಟ್ರೇಲಿಯಾ, ಯುಕೆ ಮುಂತಾದ ದೇಶದಲ್ಲಿ ರಿಲೀಸ್ ಆಗಲಿದೆ’ ಎನ್ನುವರು. ಇನ್ನು ಲಹರಿ ಆಡಿಯೋ ಕಂಪನಿಯಿಂದಲೇ ಹಳೆ ಉಧ್ಭವದ ಹಾಡುಗಳು ರಿಲೀಸ್ ಆಗಿದ್ದವು. ಈ ಚಿತ್ರದ ಗೀತೆಗಳು ಕೂಡ ಇದೇ ಕಂಪನಿಯಿಂದ ರಿಲೀಸ್ ಆಗಿವೆ.

ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಎಸ್.ಮೋಹನ್ ಸಂಭಾಷಣೆ ಬರೆದಿದ್ದಾರೆ. ವಸಂತ್ ರಾವ್ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷ ಪುರೋಹಿತ್ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್ ಮುದ್ರಾಡಿ. ತಾರಾಗಣದಲ್ಲಿ ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷ, ಮಂಡ್ಯ ರವಿ, ಪಿ.ಡಿ.ಸತೀಶ್ ಮುಂತಾದವರು ಇದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter