ಥಿಯೇಟರ್‍ಗೆ ಬಂದ ಜಂಟಲ್‍ಮನ್

ಥಿಯೇಟರ್‍ಗೆ ಬಂದ ಜಂಟಲ್‍ಮನ್

ನಾವೆಲ್ಲಾ ದಿನಕ್ಕೆ ಎಂಟರಿಂದ ಹತ್ತು ಗಂಟೆ ನಿದ್ದೆ ಮಾಡುತ್ತೇವೆ. ಆದರೆ, ಇಲ್ಲೊಬ್ಬ ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸಿ ಉಳಿದ ಆರು ಗಂಟೆ ಮಾತ್ರ ಎಚ್ಚರಿರುತ್ತಾನೆ. ಹೀಗೆ ಸ್ಪೆಷಲ್ ಕ್ಯಾರೆಕ್ಟರ್‍ನ ‘ಜಂಟಲ್‍ಮನ್’ ಸಿನಿಮಾ ಈ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಹದಿನೆಂಟು ಗಂಟೆಗಳ ಕಾಲ ನಿದ್ದೆ ಮಾಡುವ ಪಾತ್ರವನ್ನು ನಟ ಪ್ರಜ್ವಲ್ ದೇವರಾಜ್ ನಿರ್ವಹಿಸಿದ್ದಾರೆ. ಈಗಾಗಲೇ ತನ್ನ ಸುಂದರವಾದ ಹಾಡುಗಳು ಮತ್ತು ಟ್ರೇಲರ್‍ನಿಂದ ಜಂಟಲ್‍ಮನ್ ಗಮನ ಸೆಳೆಯುತ್ತಿದ್ದಾನೆ. ಈ ಚಿತ್ರ ರಿಮೇಕ್ ಅಂತ ಗಾಂಧಿನಗರದಲ್ಲಿ ಗುಸು ಗುಸು ಶುರುವಾಗಿತ್ತು. ಇದಕ್ಕೆ ಉತ್ತರಿಸಿರುವ ಚಿತ್ರತಂಡ ‘ನಮ್ಮದು ಪಕ್ಕಾ ಸ್ವಮೇಕ್ ಚಿತ್ರ. ಇದನ್ನು ತಮಿಳು, ತೆಲುಗು ಸೇರಿದಂತೆ ಬೇರೆ ಭಾಷೆಯವರು ರಿಮೇಕ್ ಹಾಗೂ ಡಬಿಂಗ್‍ಗೆ ಕೇಳುತ್ತಿದ್ದಾರೆ’ ಎಂದು ಸ್ಪಷ್ಟ ಪಡಿಸಿದೆ.

ಅಂದಂಗೆ ರಾಜಾಹುಲಿ, ಸಂಹಾರ, ಪಡ್ಡೆಹುಲಿಯಂಥಾ ಕಮರ್ಷಿಯಲ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಗುರು ದೇಶಪಾಂಡೆ. ಈ ಚಿತ್ರವನ್ನು ಮೊದಲಬಾರಿ ನಿರ್ಮಾಣ ಮಾಡಿದ್ದಾರೆ. ಇವರು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನಿಸಿಕೊಂಡರೂ, ತಮ್ಮ ಜೊತೆಗೆ ಕೆಲಸ ಮಾಡಿದ್ದ ಜಡೇಶ್ ಕುಮಾರ್ ಎಂಬ ಯುವ ಪ್ರತಿಭೆಗೆ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಗುರು ದೇಶಪಾಂಡೆ ಅವರ ಬಳಿ ಪ್ರಜ್ವಲ್ ದೇವರಾಜ್ ‘ಠಾಕ್ರೆ’ಗಾಗಿ ಕಾಲ್ ಶೀಟ್ ಇತ್ತು. ಅದನ್ನು ತಮ್ಮೊಂದಿಗೆ ದುಡಿದ ಜಡೇಶ್ ಅವರಿಗೆ ನೀಡಿ, ತಾವೇ ನಿರ್ಮಾಣವನ್ನೂ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ರಾಜಹಂಸ’ ಚಿತ್ರವನ್ನು ಜಡೇಶ್ ಡೈರೆಕ್ಟ್ ಮಾಡಿದ್ದರು. ಈ ಬಾರಿ ಜಡೇಶ್ ಯಾರೂ ಮುಟ್ಟಿರದ ಸಬ್ಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದು, ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸುವ ಕಾಯಿಲೆ ಇರುವ ಹುಡುಗನ ಸುತ್ತ ಕಥೆಯೊಂದನ್ನು ಹೆಣೆದಿದ್ದಾರೆ. ಪ್ರಜ್ವಲ್ ಕೂಡಾ ಈ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಜೊತೆಗೆ ಹ್ಯೂಮೆನ್ ಟ್ರಾಫಿಕ್ ನಂತಹ ಸೀರಿಯಸ್ ಅಂಶ ಕೂಡ ಈ ಚಿತ್ರದಲ್ಲಿರುವುದು ಹೈಲೈಟ್.

ಜಂಟಲ್ ಮನ್‍ಗಾಗಿ ಸುಮಾರು ಇಪ್ಪತ್ತೈದು ದಿನಗಳ ಕಾಲ ಡಬಲ್ ಕಾಲ್ ಶೀಟ್‍ನಲ್ಲಿ ಶೂಟ್ ಮಾಡಲಾಗಿದೆ. ಅಂದರೆ, ಇಂದು ಬೆಳಿಗ್ಗೆ ಆರು ಗಂಟೆಗೆ ಚಿತ್ರೀಕರಣ ಆರಂಭವಾದರೆ ಮಾರನೆಯ ದಿನದ ಬೆಳಗಿನ ತನಕ ಕೆಲಸ ಚಾಲನೆಯಲ್ಲಿರುತ್ತಿತ್ತಂತೆ. ದೃಶ್ಯವೊಂದಕ್ಕೆ ಡಂಪಿಂಗ್ ಯಾರ್ಡ್‍ನಲ್ಲಿ ಒಂದಿನ ಪೂರ್ತಿ ಶೂಟ್ ಮಾಡಲಾಗಿದೆ. ಬರೋಬ್ಬರಿ ಏಳು ವರ್ಷದಿಂದ ಶೇಖರಣೆಗೊಂಡಿದ್ದ ಕಸದ ರಾಶಿ ಮತ್ತದರಿಂದ ಉತ್ಪತ್ತಿಯಾದ ಕೆಟ್ಟ ವಾಸನೆಯ ನಡುವೆ ಪ್ರಜ್ವಲ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಕಥಾ ವಸ್ತು `ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್’ ವಿಷಯವನ್ನು ಹೊಂದಿದ್ದು, ಇಲ್ಲಿ ಸಾಹಸ, ಪ್ರೀತಿ, ಭಾವನೆಗಳು ಸಹ ಸಮ್ಮಿಳಿತಗೊಂಡಿದೆ. ನಾಯಕ ಪ್ರಜ್ವಲ್ ದೇವರಾಜ್ ಶೇಖಡ 60 ಭಾಗ ಪುಟ್ಟ ಹುಡುಗಿ ಬೇಬಿ ಆರಾಧ್ಯ ಜೊತೆ ಇರುವುದು ಚಿತ್ರದ ಇನ್ನೊಂದು ವಿಶೇಷ. ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟ ದೇವರಾಜ್ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದರ್ಶನ್ ‘ಚಿತ್ರಕ್ಕೆ ತಂಡದ ಶ್ರಮ ಇರುವುದು ಸಾಂಗ್, ಟ್ರೇಲರ್‍ನಲ್ಲಿ ಕಾಣುತ್ತದೆ. ಕನ್ನಡಿಗರು ಈಗ ಎದ್ದೇಳ ಬೇಕು. ಕನ್ನಡದಲ್ಲಿ ಒಳ್ಳೆ ಚಿತ್ರ ಬರಲ್ಲ ಅಂತಿರಾ! ಇಂತ ಚಿತ್ರ ಬಂದಾಗ ನೀವು ಥಿಯೇಟರ್‍ಗೆ ಬಂದು ಇಂತ ಚಿತ್ರಕ್ಕೆ ಜನ ಕೈ ಹಿಡಿಯ ಬೇಕಾಗಿದೆ. ತಂತ್ರಜ್ಞ ಚಿತ್ರ ಮಾಡೋದು ಕಷ್ಟ. ಕನ್ನಡಿಗರು ಒಳ್ಳೆ ಚಿತ್ರ ನೋಡಬೇಕು. ಬೇರೆ ಭಾμÉ ಚಿತ್ರಗಳಿಗಿಂತ ಇಂತ ಚಿತ್ರಕ್ಕೆ ಬೆಲೆ ಕೊಡಬೇಕು’ ಎಂದರು.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಡಿಫರೆಂಟ್ ಡ್ಯಾನಿ, ಮಾಸ್ ಮಾದ ಮತ್ತು ವಿನೋದ್ ಫೈಟ್‍ಗಳನ್ನು ಕಂಪೋಸ್ ಮಾಡಿದ್ದಾರೆ. ಮಾಸ್ತಿ ಹಾಗೂ ಸಂತೋಷ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ನಾಯಕಿಯಾಗಿದ್ದ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿ. ವಿಲನ್ ಪಾತ್ರದಲ್ಲಿ ಅರ್ಜುನ್ ನಟಿಸಿದ್ದು, ಸೀರಿಯಲ್ ಮಾಡಿಕೊಂಡಿದ್ದ ಇವರಿಗೆ ಸಿನಿಮಾ ಮೊದಲ ಅನುಭವ. ಇವರ ಜೊತೆ ಮತ್ತೋಬ್ಬ ವಿಲನ್ ವಿಲನ್ ಆಗಿ ಪ್ರಶಾಂತ್ ಸಿದ್ದಿ ಇದ್ದಾರೆ. ಪೊಲೀಸ್ ಆಫಿಸರ್ ಪಾತ್ರದಲ್ಲಿ ಸಂಚಾರಿ ವಿಜಯ್ ಇದ್ದಾರೆ. ಚಿತ್ರಕ್ಕೆ ಸುಧಾಕರ್ ಶೆಟ್ಟಿ ಛಾಯಾಗ್ರಹಣ ಇದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.