ಮನರಂಜನೆಯ ಬಿಲ್‍ಗೇಟ್ಸ್ ಇಂದು ಬಿಡುಗಡೆ

ಮನರಂಜನೆಯ ಬಿಲ್‍ಗೇಟ್ಸ್ ಇಂದು ಬಿಡುಗಡೆ

ಚಿಕ್ಕಣ್ಣ ಹಾಗೂ ಯುವ ಪ್ರತಿಭೆ ಶಿಶಿರ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಬಿಲ್‍ಗೇಟ್ಸ್’ ಚಿತ್ರ ಇಂದು (ಫೆ. 7) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಲ್‍ಗೇಟ್ಸ್ ಪರಿಪೂರ್ಣ ಮನರಂಜನಾ ಚಿತ್ರ ಅನ್ನೋದು ಈಗಾಗಲೇ ರಿಲೀಸ್ ಆದ ಟ್ರೇಲರನಿಂದ ಗೊತ್ತಾಗುತ್ತಿದೆ. ಇದು ಕಾಮಿಡಿ, ಸೆಂಟಿಮೆಂಟ್, ಹಾರರ್ ಮತ್ತು ಫ್ಯಾಂಟಸಿ ಸೇರಿದಂತೆ ಹಲವಾರು ಪ್ರಕಾರಗಳನ್ನು ಒಳಗೊಂಡ ವಿಶೇಷವಾದ ಚಿತ್ರ. ಥಿಯೇಟರಿನಲ್ಲಿ ಕುಳಿತ ಜನ ಎದ್ದು ಬರೋತನಕ ನಗುತ್ತಲೇ ಇರಬೇಕು ಅನ್ನೋದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿವಾಸ್. ಬೃಹತ್ ಸೆಟ್ಟ್‍ಗಳು, ಅದ್ಭುತವಾದ ಗ್ರಾಫಿಕ್ಸ್, ಒಳಗೊಂಡಿರುವ ಬಿಲ್‍ಗೇಟ್ಸ್ ಚಿತ್ರದಲ್ಲಿ ಕಲಾತ್ಮಕ ಕೆಲಸ ಎದ್ದು ಕಾಣುತ್ತಿದೆ. ನಿರ್ದೇಶಕ ಸಿ. ಶ್ರೀನಿವಾಸ ಸಾಕಷ್ಟು ಕನಸಿಟ್ಟು ಈ ಚಿತ್ರವನ್ನು ರೂಪಿಸಿದ್ದಾರೆ. ಪ್ರತಿಯೊಂದೂ ಹೀಗೇ ಬರಬೇಕು ಅಂತಾ ಹಠ ಹಿಡಿದು, ತಾವಂದುಕೊಂಡಂತೆ ಬರುವ ತನಕ ಬಿಡದೆ ಸಿನಿಮಾವನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಕಟ್ಟಿ ಕೊಟ್ಟಿದ್ದಾರೆ.

‘ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದ್ದ ಬಿಲ್‍ಗೇಟ್ಸ್ 150 ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಿಲೀಸ್ ಆಗಲಿದೆ. ದಿಪಕ್ ಗಂಗಾಧರ ವಿತರಣೆ ಪೌರಾಣಿಕ ಕಥೆ 40 ನಿಮಿಷ ಬರುತ್ತದೆ. ಇಬ್ಬರ ಕಥೆ ಹಳ್ಳಿಯಲ್ಲಿ ಮಡೆವ ಕತೆ ಇದರಲ್ಲಿದ್ದು, ಉಡಾಳ ಹುಡುಗರು ಸಿಟಿಗೆ ಬಂದು ಹೇಗೆ ಬಿಲ್‍ಗೇಟ್ಸ್ ಆಗಿತ್ತಾರಾ ಎಂಬುದರ ಮೇಲೆ ಸಾಗುತ್ತೆ. ಸಿರಿಯಸ್ ಕಥೆಯನ್ನು ಮನರಂಜನೆ ಮೂಲಕ ಹೇಳಿರುವುದು ಚಿತ್ರದ ವಿಶೇಷ’ ಎನ್ನುವರು ನಿರ್ದೇಶಕರು. ಬಿಲ್ ಗೇಟ್ಸ್ ಸಿನಿಮಾದಲ್ಲಿ ಸರಿಸುಮಾರು ನಲವತ್ತು ನಿಮಿಷಗಳ ಕಾಲ ಫ್ಯಾಂಟಸಿ ಲೋಕ ತೆರೆದುಕೊಳ್ಳಲಿದೆ. ಯಮಲೋಕದ ಸೆಟ್ ರೂಪಿಸಿ ಅದರಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ. ಅತ್ಯಾಧುನಿಕವಾದ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಕೂಡಾ ಇಲ್ಲಿ ಬಳಸಲಾಗಿದೆ ಎಂದು ಸ್ವತಃ ನಿರ್ದೇಶಕ ಶ್ರೀನಿವಾಸ ಹೇಳಿದ್ದಾರೆ.

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಶ್ರೀನಿವಾಸ ಸಿ. ನಿರ್ದೇಶನ ಮಾಡಿದ್ದರೆ, ವಸಂತ್ ಕುಮಾರ್ ಬಿ.ಎಂ., ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್, ಸತ್ಯನಾರಾಯಣ ಎಸ್., ಗಿರೀಶ್ ಬಿ.ಎನ್, ಡಾ. ರಾಧೇಶ್ ಕೆ.ಆರ್., ರಂಗಸ್ವಾಮಿ ಎಂ.ಎ., ಸಿಮೆಂಟ್ ರಾಮಚಂದ್ರ, ಎಲ್ ಆದಿನಾರಾಯಣ ರಮೇಶ್, ಮುನಿಕೃಷ್ಣ, ಎಂ.ವಿ., ಹೆಚ್.ಸಿ.ಕುಮಾರಸ್ವಾಮಿ (ಹಂಚ್ಯಾ), ಕುಮಾರ್ ಬಿ.ಕೆ., ಎನ್.ಎಲ್. ಶಿವಶಂಕರ್, ಅನನ್ಯ, ವಿನಮ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿಕ್ಕಣ್ಣ ಮತ್ತು ಶಿಶಿರ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ರಶ್ಮಿತಾ ರೋಜಾ ಮತ್ತು ಅಕ್ಷರಾ ರೆಡ್ಡಿ ನಾಯಕಿಯರು. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತ, ಪಿ. ಮರಿಸ್ವಾಮಿ ಸಂಕಲನ ಈ ಚಿತ್ರಕ್ಕಿದೆ. ಪೋಷಕ ಪಾತ್ರಗಳಲ್ಲಿ ಬ್ಯಾಂಕ್ ಜನಾರ್ಧನ್, ಯತಿರಾಜ್, ವಿ ಮನೋಹರ್, ಕುರಿ ಪ್ರತಾಪ್, ರಾಜಶೇಖರ್, ಗಿರೀಶ್ ಶಿವಣ್ಣ ಮುಂತಾದವರಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.