ಶಾಸಕ ಸೋಮಶೇಖರ್ ರೆಡ್ಡಿ ರವರಿಂದ ಬಿರುಸಿನ ಮತ ಪ್ರಚಾರ

ಬೆಳಗಾಯಿತು ವಾರ್ತೆ
ಬಳ್ಳಾರಿ: ಗುರುವಾರದಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ್ ರೆಡ್ಡಿ ರವರು ನಗರದ 18ನೇ ವಾರ್ಡಿನಲ್ಲಿ ಬಳ್ಳಾರಿ ಲೋಕಸಭಾ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ವೈ. ದೇವೇಂದ್ರಪ್ಪ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸಿದರು. ಬಿಜೆಪಿಗೆ ಮತ ನೀಡಿ ದೇವೇಂದ್ರಪ್ಪ ರವರನ್ನು ಜಯಶೀಲರನ್ನಾಗಿ ಮಾಡುವ ಮೂಲಕ ಮೋದಿಜಿ ಅವರ ಹೆಗಲಿಗೆ ಮತ್ತಷ್ಟು ಬಲ ತುಂಬಿ ಸಮೃದ್ಧಿ ಭಾರತ ಅಭಿವೃದ್ಧಿಗೆ ದೇಶದ ಪ್ರತಿಯೊಬ್ಬ ಪ್ರಜೆಯು ಮತ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪನವರ ಪುತ್ರಿ ಭಾಗ್ಯಮ್ಮ ಸೊಸೆಯಂದಿರಾದ, ಲಕ್ಷ್ಮಿ ಅಣ್ಣಪ್ಪ, ಸುಪ್ರಿಯ ರಂಗನಾಥ್ 18ನೇ ವಾರ್ಡಿ ಪ್ರಮುಖರಾದ ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಉಪ ಪೌರರಾದ ಕೆ.ಎಸ್. ದಿವಾಕರ್, ವೀರಶೇಖರ್ ರೆಡ್ಡಿ ಮಹಾನಗರ ಪಾಲಿಕೆ ಸದಸ್ಯರಾದ ಮತ್ಕರ್ ಶ್ರೀನಿವಾಸ್ ರೆಡ್ಡಿ ಹಾಗೂ 20ನೇ ವಾರ್ಡಿನ ಸದಸ್ಯರಾದ ಮಲ್ಲನ ಗೌಡ, ಅಶೋಕ್ ಕೆ.ಎಸ್.ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಶಿಕಲಾ , ರಾಜು ಮುತ್ತಿಗೆ, ಕಲ್ಲೂರ್ ರಾವ್, ಸಿಮೆಂಟ್ ಗಿರಿ, ಪದ್ಮಾವತಿ, ಜ್ಯೋತಿ ಪ್ರಕಾಶ್, ಅಂಕಲಮ್ಮ, ರಾಜೇಶ್ ಹೊಂಡಕರ್, ಅಮರ್, ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರು ಮತ್ತು 18 ನೇ ವಾರ್ಡಿನ ಪ್ರಮುಖರು ಮತ್ತು ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *