ಮಾಧ್ಯಮಗಳು ವಿವಿಧ ಭಾಷಿಕರ ಸಂಪರ್ಕ ಸೇತುವಾಗಲಿ : ಪ್ರಧಾನಿ ಮೋದಿ ಕರೆ

ಮಾಧ್ಯಮಗಳು ವಿವಿಧ ಭಾಷಿಕರ ಸಂಪರ್ಕ ಸೇತುವಾಗಲಿ : ಪ್ರಧಾನಿ ಮೋದಿ ಕರೆ

ಕೊಚ್ಚಿ: ಮಾಧ್ಯಮಗಳು ವಿವಿಧ ಭಾಷೆಗಳನ್ನು ಮಾತನಾಡುವ ಜನರನ್ನು ಹತ್ತಿರಕ್ಕೆ ತರುವ ಸೇತುವೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾಧ್ಯಮಗಳಿಗೆ ಕರೆ ನೀಡಿದರು.

ವೀಡಿಯೊ ಕಾನ್ಫರೆನ್ಸ್ ಮೂಲಕ ಮಲಯಾಳ ಮನೋರಮಾ ನ್ಯೂಸ್ ಕನ್ ಕ್ಲೇವ್ -2019 ಉದ್ದೇಶಿಸಿ ಮಾತನಾಡಿದ ಮೋದಿ, “ದೇಶಾದ್ಯಂತ ಮಾತನಾಡುವ 10 ರಿಂದ 12 ವಿವಿಧ ಭಾಷೆಗಳಲ್ಲಿ ಒಂದು ಪದವನ್ನು ಪ್ರಕಟಿಸುವುದರೊಂದಿಗೆ ಮಾಧ್ಯಮವು ಸರಳವಾಗಿ ಭಾಷಾ ಪರಿಚಯ ಪ್ರಾರಂಭಿಸಬಹುದು. ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಯು ವಿವಿಧ ಭಾಷೆಗಳ 300 ಕ್ಕೂ ಹೆಚ್ಚು ಹೊಸ ಪದಗಳನ್ನು ಕಲಿಯಬಹುದು ‘ ಎಂದು ಹೇಳಿದರು. 

ಒಬ್ಬ ವ್ಯಕ್ತಿಯು ಮತ್ತೊಂದು ಭಾರತೀಯ ಭಾಷೆಯನ್ನು ಕಲಿತ ನಂತರ, ಅವನು ಸಾಮಾನ್ಯ ಎಳೆಗಳನ್ನು ತಿಳಿದುಕೊಂಡು ಭಾರತೀಯ ಸಂಸ್ಕೃತಿಯಲ್ಲಿನ ಏಕತೆಯನ್ನು ನಿಜವಾಗಿಯೂ ಪ್ರಶಂಸಿಸುತ್ತಾನೆ. ಇದು ವಿವಿಧ ಭಾಷೆಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಜನರ ಗುಂಪುಗಳಿಗೆ ಸಹ ಕಾರಣವಾಗಬಹುದು

ನರೇಂದ್ರ ಮೋದಿ

“ಹರಿಯಾಣದಲ್ಲಿ ಮಲಯಾಳಂ ಕಲಿಯುವ ಒಂದು ಗುಂಪು ಮತ್ತು ಕರ್ನಾಟಕದ ಒಂದು ಗುಂಪು ಬಂಗಾಳಿ ಕಲಿಯುವುದನ್ನು ಕಲ್ಪಿಸಿಕೊಳ್ಳಿ! ಮೊದಲ ಹೆಜ್ಜೆ ಇಟ್ಟ ನಂತರವೇ ಎಲ್ಲ ದೂರಗಳನ್ನೂ ಕ್ರಮಿಸಲು ಸಾಧ್ಯ, ಹೀಗಾಗಿ ನಾವು ಮೊದಲ ಹೆಜ್ಜೆ ಇಡಬಹುದೇ?” ಎಂದು ಪ್ರಶ್ನಿಸಿದ ಪ್ರಧಾನಿ, ಕೆಲ ಸ್ವಾರ್ಥಿಗಳು ದೇಶವನ್ನು ವಿಭಜಿಸಲು ಭಾಷೆಯನ್ನು ಕೃತಕ ಗೋಡೆಗಳಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭಾರತವು ಅತ್ಯಂತ ವೈವಿಧ್ಯಮಯ ಮತ್ತು ಬೆಳೆಯುತ್ತಿರುವ ಮಾಧ್ಯಮವನ್ನು ಹೊಂದಿದೆ. ಪತ್ರಿಕೆಗಳು, ನಿಯತಕಾಲಿಕೆಗಳು, ಟಿವಿ ಚಾನೆಲ್‌ಗಳು, ವೆಬ್‌ಸೈಟ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದ ಪ್ರಧಾನಿ, ಸ್ವಚ್ಛ ಭಾರತ ಸೇರಿದಂತೆ ವಿವಿಧ ಅಭಿಯಾನಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಸಕಾರಾತ್ಮಕ ಪಾತ್ರ ನಿರ್ವಹಿಸಿವೆ ಎಂದರು

ಏಕ ಬಳಕೆಯ ಪ್ಲಾಸ್ಟಿಕ್, ನೀರಿನ ಸಂರಕ್ಷಣೆ, ಫಿಟ್ ಇಂಡಿಯಾ ಅಭಿಯಾನಗಳನ್ನು ಮಾಧ್ಯಮಗಳು ತಮ್ಮದನ್ನಾಗಿಸಿಕೊಂಡಿದ್ದು, ಗಮನಾರ್ಹ ಸಾಧನೆಗಾಗಿ ಜನರನ್ನು ಸಜ್ಜುಗೊಳಿಸಿದೆ ಎಂದು ಹೇಳಿದರು.

“ಯುಗ ಯುಗಗಳಿಂದಲೂ, ಎಲ್ಲ ವಿಚಾರಗಳಿಗೂ ಭಾಷೆ ಯಾವಾಗಲೂ ಅತ್ಯಂತ ಶಕ್ತಿಯುತವಾದ ಅಭಿವ್ಯಕ್ತಿ ಮಾಧ್ಯಮವಾಗಿದೆ ಬಹುಶಃ ಇಷ್ಟು ಭಾಷೆಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಭಾರತ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.