ಗಮನಸೆಳೆದ ಮ್ಯಾರಾಥಾನ್ ಸ್ಪರ್ಧೆ: 100ಕ್ಕೂ ಹೆಚ್ಚು ಜನರು ಭಾಗಿ

ಮತದಾನ ಜಾಗೃತಿಗಾಗಿ   ಮ್ಯಾರಾಥಾನ್ ಸ್ಪರ್ಧೆ
ಬೆಳಗಾಯಿತು ವಾರ್ತೆ
ಬಳ್ಳಾರಿ : ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಒತ್ತು ನೀಡುವ ಹಾಗೂ

ಸಾರ್ವಜನಿಕರಿಗೆ ಮತದಾನದ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ

ಮ್ಯಾರಾಥಾನ್ ಸ್ಪರ್ಧೆ ಗಮನಸೆಳೆಯಿತು.

ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಮ್ಯಾರಾಥಾನ್ ಸ್ಪರ್ಧೆಗೆ ಐಎಎಸ್ ಪ್ರೋಬೆಷನರಿ

ಅಧಿಕಾರಿಗಳಾದ ನಂದಿನಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಬದ್ಧವಾಗಿ

ಕಲ್ಪಿಸಲಾಗಿರುವ ಅಮೂಲ್ಯ ಮತದಾನದ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೇ ಯೋಗ್ಯ ವ್ಯಕ್ತಿಗೆ

ಅತ್ಯಂತ ವಿವೇಚನೆಯಿಂದ ಮತಚಲಾಯಿಸಿ. ತಾವು ಚಲಾಯಿಸುವ ಮತ ದೇಶದ ಭವಿಷ್ಯ ನಿರ್ಧರಿಸುತ್ತದೆ ಎಚಿದರು.

ಜಿಲ್ಲೆಯ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು

ಹಮ್ಮಿಕೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಲಿದೆ ಎಂಬ ಆಶಾಭಾವನೆಯನ್ನು

ಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಪಂ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ತಾಪಂ ಇಒ ಜಾನಕಿರಾಮ್‍ಮ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರುದ್ರಮುನಿ ಮತ್ತಿತರರು ಇದ್ದರು.

100ಕ್ಕೂ ಹೆಚ್ಚು ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದೇವಸ್ಥಾನದಿಂದ ಆರಂಭವಾದ ಮ್ಯಾರಾಥಾನ್ ಒಟದ ಸ್ಪರ್ಧೆಯು ವಾಲ್ಮೀಕಿ ವೃತ್ತದ(ಎಸ್ಪಿ ಸರ್ಕಲ್) ಮೂಲಕ

ಎಚ್.ಆರ್.ಗವಿಯಪ್ಪ ವೃತ್ತ(ಮೋತಿ ಸರ್ಕಲ್)ದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಮೂಲಕ ಬಿಡಿಎಎ

ಫುಟ್ಬಾಲ್ ಸಭಾಂಗಣದವರೆಗೆ ನಡೆಯಿತು.

ಈ ಮ್ಯಾರಾಥನ್ ಸ್ಪರ್ಧೆಯಲ್ಲಿ ಶರಣಪ್ಪ (ಪ್ರಥಮ), ಎನ್.ಅವಿನಾಶ್ (ದ್ವಿತೀಯ), ಸಾಗರ್ ಕೋರಿ (ತೃತೀಯ) ಸ್ಥಾನ

ಪಡೆದರು. ಈ ವಿಜೇತರಿಗೆ ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್‍ಐಗಳಾದ ಎಸ್.ಕೆ.ಪ್ರಕಾಶ್, ನಿಸಾರ್ ಅಹ್ಮದ್

ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರುದ್ರಮನಿ ಅವರು

ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *