ಕರ್ನಾಟಕ, ತಮಿಳುನಾಡಿಗೆ ಹೊಂದಿಕೊಂಡಿರುವ ಕೇರಳ ಜಿಲ್ಲೆಗಳ ಗಡಿ ಬಂದ್

Share on facebook
Share on twitter
Share on linkedin
Share on whatsapp
Share on email

ಕೋಜಿಕೋಡ್: ತಮ್ಮ ವ್ಯಾಪ್ತಿಯಲ್ಲಿರುವ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೇರಳದ ಪಾಲಕ್ಕಾಡ್, ವಯನಾಡ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅದರಂತೆ ಪ್ರಯಾಣಿಕರ ಸಂಚಾರಕ್ಕಾಗಿ ವಲಯಾರ್, ಗೋವಿಂದಪುರಂ ಮತ್ತು ಪಾಲಕ್ಕಾಡ್‍ನ ಪ್ರವೇಶ ಕೇಂದ್ರಗಳಲ್ಲಿನ ಚೆಕ್ ಪೋಸ್ಟ್ ಗಳನ್ನು ಮುಚ್ಚಲಾಗಿದೆ. ಯಾವುದೇ ಸಂದರ್ಭದಲ್ಲೂ ತಮಿಳುನಾಡು ಗಡಿಯ ಚೆಕ್ ಪೋಸ್ಟ್‌ಗಳನ್ನು ಸಾರ್ವಜನಿಕರಿಗೆ ತೆರೆಯಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಬಾಲ ಮುರಳಿ ಹೇಳಿದ್ದಾರೆ.
ಮುತಂಗಾ ಮತ್ತು ಬವೇಲಿಯಿಂದ ಕರ್ನಾಟಕಕ್ಕೆ ಚೆಕ್ ಪೋಸ್ಟ್‌ಗಳನ್ನು ಮುಚ್ಚಲಾಗಿದೆ.ಕರ್ನಾಟಕದಿಂದ ಯಾರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಬುಧವಾರ ಗಡಿಯನ್ನು ತಲುಪಿದವರಿಗೆ ಅನುಮತಿ ನೀಡಲಾಗಿದ್ದರೂ ಅವರು ತಮ್ಮ ಸ್ಥಳಗಳಿಗೆ ಸಾಗದಂತೆ ಆರೈಕೆ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದು ವಯನಾಡ್ ಜಿಲ್ಲಾಧಿಕಾರಿ ಡಾ.ಅದೀಲಾ ಅಬ್ದುಲ್ಲಾ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಕರ್ನಾಟಕದ ಎಲ್ಲ ಗಡಿಗಳನ್ನು ಮುಚ್ಚಿಸಿದ್ದಾರೆ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ಸುತ್ತಾಡುವವರ ವಿರುದ್ಧ ಕಣ್ಗಾವಲು ತೀವ್ರಗೊಳಿಸಿದ್ದಾರೆ. ಈ ವಾರದ ಆರಂಭದಿಂದ ಜಿಲ್ಲೆಯಲ್ಲಿ ಕರೋನವೈರಸ್ ನ ದೃಢಪಟ್ಟ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter