ಜಗ್ಗಿ, ಜಾನು ಲವ್ ಸ್ಟೋರಿಗೆ ಶರಣ್ ಸಾರಥಿ

ಜಗ್ಗಿ, ಜಾನು ಲವ್ ಸ್ಟೋರಿಗೆ ಶರಣ್ ಸಾರಥಿ

ಜೊತೆ ಜಾನು ಹೊಸಬರ ‘ಜಗ್ಗಿ ಜೊತೆ ಜಾನು’ ಚಿತ್ರದ ಪೋಸ್ಟರ್‍ನ್ನು ಗಣೇಶ್ ಹಬ್ಬದಂದು ನಟ ಶರಣ್ ಅನಾವರಣಗೊಳಿಸಿ ಶುಭಹಾರೈಸಿದ್ದಾರೆ. ಈ ಚಿತ್ರದ ಮುಹೂರ್ತ ಇನ್ನಷ್ಟೇ ಆಗಬೇಕಿದ್ದು, ದಿಪಾವಳಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಪ್ರೀತಿ, ಭಾವನೆಗಳು, ಸಾಹಸ, ಹಾಸ್ಯದ ಜೊತೆಗೆ ಸಾಮಾಜಿಕ ಕಳಕಳಿಯ ಅಂಶಗಳನ್ನು ಒಳಗೊಂಡಿದೆ. ಪಯಣದಲ್ಲಿ ಕಥೆಯು ಸಾಗಲಿದ್ದು, ಮಡಿಕೇರಿ, ಕೋಲಾರ, ಮೈಸೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಿಶೇಷವಾಗಿ ಪೋಸ್ಟರ್‍ನಲ್ಲಿ ಎರಡು ಪಾರಿವಾಳಗಳು ಕಾಣಿಸಿಕೊಂಡಿದ್ದು, ಒಂದು ಪಾರಿವಾಳ ದೂರ ಹೋಗಿ, ನಂತರ ಸೇರಿಕೊಳ್ಳುತ್ತದೆ. ಅದರಂತೆ ಪ್ರೇಮಿಗಳು ಬೇರ್ಪಟ್ಟು, ಮತ್ತೆ ಲವ್‍ನಲ್ಲಿ ಬೀಳುತ್ತಾರೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.


ಅಂದಂಗೆ ಈ ಚಿತ್ರವನ್ನು ಮೊದಲಬಾರಿ ನಿರ್ದೇಶನ ಮಾಡುತ್ತಿದ್ದಾರೆ ಜಗನ್ನಾಥ (ಜಗ್ಗಿ). ಇವರು ಥಿಯೇಟರ್ ಕಲಾವಿದನಾಗಿ ಬಿಂಬದಿಂದ ಶಾರ್ಟ್ ಫಿಲ್ಮ್ ಮಾಡಿದ ಅನುಭವ ಹೊಂದಿದ್ದಾರೆ. ಈ ಕಥೆಯನ್ನು ಮೂಲತಃ ಶಾರ್ಟ್ ಫಿಲ್ಮ್ ಮಾಡಲು ಯೋಜನೆ ಹಾಕಿಕೊಂಡಿದ್ದರು. ನಿರ್ಮಾಪಕ ನಟರಿಗೆ ಕಥೆ ತುಂಬಾ ಇಷ್ಟ ಆದ್ದರಿಂದ ಪೂರ್ಣ ಪ್ರಮಾಣದ ಸಿನಿಮಾ ಮಾಡುತ್ತಿದ್ದಾರೆ. ವಿಧ್ಯಾ ವಿಜಯ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇವರು ಆರು ವರ್ಷದ ನಂಬರ ಮತ್ತೆ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ. ಇವರಿಗಿಲ್ಲಿ ಎರಡು ಶೇಡ್ ಪಾತ್ರವಿದ್ದು, ಕಾಲೇಜ್ ಹುಡುಗಿ ಬಬ್ಲಿ ಪಾತ್ರದ ಜೊತೆಗೆ ವಿಶೇಷ ಪಾತ್ರ ಕೂಡ ಇರಲಿದೆ.


ಇನ್ನು ನಾಯಕನಾಗಿ ಕುಂದಾಪುರ ಮೂಲದ ಜೈ ಶೆಟ್ಟಿ ಲವರ್ ಬಾಯ್ ಹಾಗೂ ಕಾಲೇಜ್ ಹುಡುಗನಾಗಿ ಎರಡು ಶೇಡ್‍ಗಳಲ್ಲಿ ನಟಿಸುತ್ತಿದ್ದಾರೆ. ಮೂಲತಃ ಆಡಿಟರ್ ಆಗಿರುವ ಜೈ ಶೆಟ್ಟಿ ಈ ಚಿತ್ರದ ಮೂಲಕ ಹೀರೋ ಆಗಿ ಗಾಂಧಿನಗರಕ್ಕೆ ಪರಿಚಯ ಆಗುತ್ತಿದ್ದಾರೆ. ಉಳಿದಂತೆ ಖಳನಾಯಕನಾಗಿ ನೀನಾಸಂ ಅಶ್ವಥ್, ಇವರೊಂದಿಗೆ ಸುದೀರ್ (ಕಾಕ್ರೋಚ್), ಹಾಸ್ಯ ಪಾತ್ರಕ್ಕೆ ಕೆಂಪೆಗೌಡ, ರಚಿಕಾ ಮುಂತಾದವರ ಅಭಿನಯವಿದೆ. ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ ರಾಜೀವ್ ಲೋಚನ್. ಅಲ್ಲದೆ ಈ ಮೊದಲು ಗೂಳಿಹಟ್ಟಿಗೆ ಸಂಗೀತ ಸಂಯೋಜಿಸಿರುವ ಮಂಜುನಾಥ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ ಉಳಿದಂತೆ ನಾಗೇಂದ್ರ ಅರಸ್ ಸಂಕಲನ, ಕೌರವ ವೆಂಕಟೇಶ್ ಸಾಹಸ, ಧನ್ ಕುಮಾರ್ ನೃತ್ಯವಿದೆ. ಅಂದಂಗೆ ಚಿತ್ರವನ್ನು ಬೆಳಗಾಂ ಮೂಲದ ಅನ್ನದಾತ ಉಮೇಶ್.ಎಂ. ಕತ್ತಿ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಜಗ್ಗಿ ಜೊತೆ ಜಾನು

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.