ವೈದ್ಯಕೀಯ ಬಂಧುಗಳಿಗೆ ಕೋಟಿ ನಮನ :ಬಿ.ಸಿ.ಪಾಟೀಲ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಹಾವೇರಿ
: ಕೊರೋನಾ ವೈರಸ್ ಹರಡದಂತೆ ಹಗಲಿರುಳು ಶ್ರಮಿಸುತ್ತಿಿರುವ ವೈದ್ಯರಿಗೆ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳಿಗೆ ಕೈಮುಗಿದ ಕೃಷಿ ಸಚಿವರು ಕೃತಜ್ಞತೆ ಸಲ್ಲಿಸಿದ ಅಪರೂಪದ ಪ್ರಸಂಗ ನಗರದ ಜಿಲ್ಲಾಾ ಆಸ್ಪತ್ರೆೆಯ ಆವರಣದಲ್ಲಿ ಜರುಗಿತು.

ಹಾವೇರಿ ಜಿಲ್ಲಾಾ ಆಸ್ಪತ್ರೆೆಗೆ ಭೇಟಿ ನೀಡಿದ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಕೊರೋನಾ ವೈರಸ್ ಶಂಕಿತರ ಚಿಕಿತ್ಸೆೆಗಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆೆಯ ಮೂರನೇ ಮಹಡಿಯಲ್ಲಿ ಸಿದ್ಧವಾಗಿರುವ 10 ಹಾಸಿಗೆಯ ವಿಶೇಷ ಐಸೋಲೇಷನ್ ಕೊಠಡಿಗಳಿಗೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.
ಆಸ್ಪತ್ರೆೆಯಿಂದ ತೆರಳುವ ಮುನ್ನ ಆಸ್ಪತ್ರೆೆ ಮುಂಬಾಗಿಲಿನಲ್ಲಿ ವೈದ್ಯಕೀಯ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಸೇವೆ ಅನುಪಮವಾದದ್ದು. ಹಗಲಿರುಳು ಕೊರೋನಾ ದಂತಹ ಮಾರಕ ವೈರಸ್ಸಿಿನ ವಿರುದ್ಧ ಜೀವದ ಹಂಗುತೊರೆದು ಕೆಲಸಮಾಡುತ್ತಿಿರುವ ನಿಮಗೆ ನನ್ನೊೊಂದು ನಮಸ್ಕಾಾರ ಎಂದು ಕೈಮುಗಿದರು. ನಿಮ್ಮೊೊಂದಿಗೆ ನಾನಿದ್ದೇನೆ, ಸರ್ಕಾರವಿದೆ ಧೈರ್ಯವಾಗಿ ಕೆಲಸಮಾಡಿ. ನಿಮ್ಮ ಎಲ್ಲ ಕೆಲಸಗಳಿಗೆ ನಾವು ಬೆಂಬಲವಾಗಿರುತ್ತೇವೆ. ಸಮಾಜ ಬೆಂಬಲವಾಗಿರುತ್ತದೆ ಎಂದು ವೈದ್ಯ ವೃಂದಕ್ಕೆೆ ಆತ್ಮವಿಶ್ವಾಾಸ ತುಂಬಿದರು. ಈ ಸಂದರ್ಭದಲ್ಲಿ ವೈದ್ಯವೃಂದ ಭಾವುಕವಾಗಿ ನೈತಿಕ ಬೆಂಬಲ ತುಂಬಿದ ಕೃಷಿ ಸಚಿವರಿಗೆ ಪ್ರತಿನಮಸ್ಕಾಾರ ಸಲ್ಲಿಸಿದ ಸನ್ನಿಿವೇಶದಲ್ಲಿ ಭಾಗೀಯಾದ ಎಲ್ಲರ ಮನದಲ್ಲೂ ಅಭಿಮಾನದ ಭಾವ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಚಿವನಾಗಿರುವ ನಾನು ಹಾವೇರಿ ಜಿಲ್ಲಾಾ ಆಸ್ಪತ್ರೆೆಯಲ್ಲಿ ಕೊರೋನಾ ಟಾಸ್ಕಫೋರ್ಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿಗಳ ಸೇವಾ ನಿರ್ವಹಣೆ ಕುರಿತು ಹಾವೇರಿ ಜಿಲ್ಲಾಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೆೆ. ಅದರಂತೆ ಹಾವೇರಿ ಜಿಲ್ಲಾ ಆಸ್ಪತ್ರೆೆಗೆ ಇಂದು ಭೇಟಿ ನೀಡಿ, ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರು, ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದೆ. ವೈದ್ಯರು, ದಾದಿಯರು ಹಾಗೂ ಸ್ವಚ್ಛತಾ ಸಿಬ್ಬಂದಿ ಬಹಳ ಉತ್ಸುಕತೆಯಿಂದ ಕೆಲಸಮಾಡುತ್ತಿಿರುವುದು ಕಂಡು ತಮಗೆ ಸಂತವಾಗಿದೆ. ಕೊರೋನಾ ಸೋಂಕು ಪಸರಿಸದಂತೆ ತಡೆಯುವಲ್ಲಿ ಹಾಗೂ ಆಸ್ಪತ್ರೆೆಯಲ್ಲಿ ಶಂಕಿತರನ್ನು ನೋಡಿಕೊಳ್ಳುತ್ತಿಿರುವುದಕ್ಕೆೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.

ಕೊರೋನಾದಂತಹ ಮಹಾಮಾರಿ ರಾಜ್ಯ ಸೇರಿದಂತೆ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶವನ್ನು ಲಾಕ್‌ಡೌನ್ ಗೊಳಿಸಿರುವುದು ಒಳ್ಳೆೆಯ ಸಂಗತಿ. ಲಾಕ್‌ಡೌನ್ ಇನ್ನಷ್ಟು ಪರಿಣಾಮಕಾರಿಯಾಗಿಬೇಕು. ಈ ನಿಟ್ಟಿಿನಲ್ಲಿ ಕ್ಷೇತ್ರ ಹಾಗೂ ಜಿಲ್ಲಾಾಧಿಕಾರಿಗಳೊಂದಿಗೆ ಸಭೆ ನಡೆಸಲಾಗವುದು. ಸರ್ಕಾರ ಮತ್ತು ಜಿಲ್ಲಾಾಡಳಿತದೊಂದಿಗೆ ಜನರು ಸಹಕರಿಸಬೇಕು. ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು. ಇದು ಕೇವಲ ಪೊಲೀಸ್ ಹಾಗೂ ಅಧಿಕಾರಿಗಳ ಕೆಲಸ ಎಂದು ಭಾವಿಸಬಾರದು. ಕೊರೋನಾ ನಿರ್ಭಂದಕ್ಕೆೆ ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಭಂದಿಸಬೇಕು. ಯಾರೂ ಎದೆಗುಂದದೆ ಪ್ರಧಾನಮಂತ್ರಿಿಗಳಾದ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಎಪ್ರಿಲ್ 15ರವರೆಗೆ ಲಾಕ್‌ಡೌನ್‌ಗೆ ಸಹಕರಿಸಬೇಕು ಎಂದು ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿಕೊಂಡರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter