ಪರಿಹಾರ ಹಂಚಿಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ

ಪರಿಹಾರ ಹಂಚಿಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ


ಬೆಳಗಾಯಿತು ವಾರ್ತೆ
ಹರಪನಹಳ್ಳಿ:
ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತು ಪರಿಹಾರದ ನೆಪದಲ್ಲಿ ಒಂದು ಕುಟುಂಬದ ನಿರ್ವಹಣೆಗೂ ಸಾಕಾಗಲಾರದ ಮೊತ್ತವನ್ನು ತಹಶೀಲ್ದಾರರ ಮುಖಾಂತರ ನೆರೆ ಸಂತ್ರಸ್ಥರಿಗೆ ಹಂಚಲಾಗುತ್ತಿದೆ. ನೆರೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರದ ಜೊತೆಗೆ ಪರಿಹಾರ ಹಂಚಿಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕೆ.ಪಿ.ಸಿ.ಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ಅವರಿಗೆ ಮನವಿ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧದ ಮುಂದೆ ನೆರೆ ಸಂತ್ರಸ್ಥರ ನೆರವಿಗೆ ನಿರ್ಲಕ್ಷ್ಯ ತೋರಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಜೀವನವನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುತ್ತಿವೆ.

ರಾಜ್ಯದ 22 ಜಿಲ್ಲೆಗಳಲ್ಲಿ ನೆರೆಹಾವಳಿಯ ಪರಿಣಾಮದಿಂದ ಜನರ ಜೀವ ಮತ್ತು ಅಪಾರ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿದ್ದರೆ ಉಳಿದ ಜಿಲ್ಲೆಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಅಪ್ರತ್ಯಕ್ಷವಾಗಿ ದುಷ್ಪರಿಣಾಮದ ಒತ್ತಡ ಬಿದ್ದಿರುತ್ತದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆಗಳು,ಶಾಲಾ ಕಟ್ಟಡಗಳು,ಮನೆಗಳು ಕುಸಿದು ಹೋಗಿವೆ. ಹೊಲ-ಗದ್ದೆಮನೆಗಳಿಗೆ ನೀರು ನುಗ್ಗಿ ಜನರ ನಿತ್ಯದ ಜೀವನಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಜನರ ಸಂಕಷ್ಟಗಳಿಗೆ ರಾಜ್ಯ-ಕೇಂದ್ರ ಸರ್ಕಾರಗಳು ಸರಿಯಾಗಿ ಸ್ಪಂದಿಸದೇ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ. ಈ ಹಂತದಲ್ಲಿ ನೀವುಗಳು ಮಧ್ಯ ಪ್ರವೇಶಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಿವಿ ಹಿಂಡಿ ಕರ್ನಾಟಕದ ನೆರೆ ಸಂತ್ರಸ್ತರ ಬದುಕನ್ನು ಪುನಃ ಕಟ್ಟಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡೆಬೇಕಿದೆ.

ಈ ಸಂದರ್ಭದಲ್ಲಿ ಸಾಸ್ವಿಹಳ್ಳಿ ಚನ್ನಬಸವನಗೌಡ, ಮಾಜಿ. ತಾ.ಪಂ.ಅಧ್ಯಕ್ಷ ಕುಬೇರಗೌಡ, ಪುಷ್ಪ ದಿವಾಕರ್, ತಾ.ಪಂ.ಸದಸ್ಯರಾದ ಒ.ರಾಮಪ್ಪ, ಹೆಚ್.ಚಂದ್ರಪ್ಪ, ಕೆ.ಎಂ.ಬಸವರಾಜಯ್ಯ, ಚಿಕ್ಕೇರಿ ಬಸಪ್ಪ, ಮುತ್ತಿಗಿ ಜಂಬಣ್ಣ, ಗ್ರಾ.ಪಂ.ಅಧ್ಯಕ್ಷೆ ರತ್ನವ್ವ ಸೋಮಪ್ಪ, ಗ್ರಾ.ಪಂ.ಸದಸ್ಯೆ ನೇತ್ರಾವತಿ ಗುಂಡಗತ್ತಿ, ಮತ್ತಿಹಳ್ಳಿ ರಾಮಣ್ಣ ಮೈದೂರು, ವಿಜಯಲಕ್ಷ್ಮೀಕಂಚಿಕೇರಿ, ಮಂಜುಳ, ರವಿಯುವಶಕ್ತಿ ಅಧ್ಯಕ್ಷ ಉದಯಶಂಕರ, ಇರ್ಫಾನ್ ಮುದುಗಲ್, ವಾಗೇಶ್ ವಕೀಲ ನೀಲಗುಂದ, ರಾಯದುರ್ಗದ ವಾಗೀಶ್, ಟಿ.ಉಮಾಕಾಂತ್‍ತೆಲಿಗಿ, ಟಿ.ಮಂಜುನಾಥತೆಲಿಗಿ, ಎಲ್.ಬಿ.ಹಾಲೇಶ್ ನಾಯ್ಕ್, ಎನ್.ಎಸ್.ಯು.ಐಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜೀಷಾನ್, ಕಾರ್ಯದರ್ಶಿ ಮತ್ತೂರ ಬಸವರಾಜ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಕೆ.ಸಮಿಯುಲ್ಲ, ಕವಿತಾ ಸುರೇಶ್, ಉಮಾ ಶಂಕರ ಹಾಗೂ ಮತ್ತಿತರ ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.