ಹಾಡುಗಳಿಂದ ಸುದ್ದಿಯಲ್ಲಿರುವ ಗೀತಾ ಸೆ. 27ಕ್ಕೆ ರಿಲೀಸ್

ಹಾಡುಗಳಿಂದ ಸುದ್ದಿಯಲ್ಲಿರುವ ಗೀತಾ ಸೆ. 27ಕ್ಕೆ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಸಿನಿಮಾ ಸದ್ಯ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಗಣೇಶ್ ಅವರ ಬಹು ನಿರೀಕ್ಷೆಯ ‘ಗೀತಾ’ ಚಿತ್ರ ಇದೀಗ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಸೆಪ್ಟಂಬರ್ 27ರಂದು ರಾಜ್ಯಾದ್ಯಂತ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಪವರ್‍ಫುಲ್ ಹಾಡೊಂದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ. ಹೌದು, “ಗೀತಾ’ ಚಿತ್ರಕ್ಕಾಗಿ ಸಂತೋಷ್ ಆನಂದರಾಮ್ ಅವರು ಬರೆದ “ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ, ಕನ್ನಡ ಕನ್ನಡ ಕನ್ನಡ ಕನ್ನಡವೇ ನಿತ್ಯ..’ ಎಂಬ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ. ಅನೂಪ್ ರೂಬಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿದೆ.


ಪುನೀತ್ ರಾಜಕುಮಾರ್ ಅವರು ಗಣೇಶ್ ಅವರಿಗೆ ಹಾಡಿರುವ ಮೂರನೇ ಹಾಡು ಇದು. ಈ ಹಿಂದೆ ಪುನೀತ್ “ಶೈಲೂ’ ಚಿತ್ರದಲ್ಲಿ ಹಾಡಿದ್ದರು. ಅದಾದ ಬಳಿಕ “ಜೂಮ್’ ಚಿತ್ರದಲ್ಲೂ “ರಾಜಾಧಿರಾಜ ರಾಜ ಮಾತಾರ್ಂಡ …’ ಎಂಬ ಹಾಡು ಹಾಡಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ “ಗೀತಾ’ ಚಿತ್ರಕ್ಕೆ “ಕನ್ನಡ ಕಂಪು’ ಸೂಸುವ ಹಾಡನ್ನು ಹಾಡಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲೂ ಗಣೇಶ್ ಅವರು ಅಪ್ಪಟ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಗೋಕಾಕ್ ಚಳವಳಿಯ ವಿಶೇಷತೆ ಕೂಡ ಇದರಲ್ಲಿದೆ. “ಪುನೀತ್ ರಾಜಕುಮಾರ್ ಹಾಡಿರುವ ಹೈ ವೋಲ್ಟೆಜ್ ಹಾಡು ಇದು ಎನ್ನುವ ಗಣೇಶ್, ನನ್ನ ಸಿನಿಮಾಗಳಲ್ಲಿ ಪುನೀತ್ ಹಾಡಿರುವ ಹಾಡುಗಳು ಹಿಟ್ ಆಗಿವೆ. ಈ ಹಾಡು ಕೂಡ ಅದೇ ಲಿಸ್ಟ್‍ಗೆ ಸೇರಲಿದೆ. ಕನ್ನಡಿಗರಿಗೆ ಈ ಹಾಡು ಖಂಡಿತವಾಗಿಯೂ ರುಚಿಸಲಿದೆ’ ಎನ್ನುವರು.


“ಗೀತಾ’ ಶಂಕರ್‍ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದಲ್ಲಿ ಗಣೇಶ್ ಅವರು ಶಂಕರ್‍ನಾಗ್ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಚಿತ್ರದ ಫಸ್ಟ್‍ಲುಕ್‍ನಲ್ಲಿ ಗಣೇಶ್ ಅವರು ಹಾಕಿಕೊಂಡಿರುವ ಕ್ಯಾಪ್, ಗಡ್ಡ ಎಲ್ಲವೂ ಶಂಕರ್‍ನಾಗ್ ಅವರನ್ನು ಹೋಲುವಂತಿದೆ. ಜೊತೆಗೆ ಶರ್ಟ್ ಮೇಲೆ ಕನ್ನಡದ ಬಾವುಟದ ಸಂಕೇತವಿದೆ. ಚಿತ್ರವನ್ನು ಸೈಯ್ಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ನಿರ್ಮಿಸುತ್ತಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನವಿದೆ. ಸೆಪ್ಟೆಂಬರ್‍ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.