ಕೊರೋನಾ ವಿರುದ್ಧದ ಸಮರಕ್ಕೆ ಸಂಪೂರ್ಣ ಸಹಕಾರ: ಸೋನಿಯಾ ಗಾಂಧಿ

Share on facebook
Share on twitter
Share on linkedin
Share on whatsapp
Share on email

ನವದೆಹಲಿ:ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಾರಕ ಕೊರೋನಾ ವೈರಾಣು ನಿಯಂತ್ರಿಸಲು ಕೇಂದ್ರ ಸರ್ಕಾರ ಘೋಷಿಸಿರುವ 21 ದಿನಗಳ ನಿರ್ಬಂಧ ಸ್ವಾಗತಾರ್ಹ ಕ್ರಮ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಸೋನಿಯಾ, “ನಮ್ಮ ದೇಶಕ್ಕಾಗಿ, ಮಾನವತೆಗಾಗಿ ಪಕ್ಷದ ಹಿತಾಸಕ್ತಿಗಳನ್ನು ಮೀರಿದ ಕರ್ತವ್ಯಕ್ಕೆ ಗೌರವ ನೀಡಬೇಕಿದೆ” ಎಂದು ಹೇಳಿದ್ದು, ಕೊರೋನಾ ವೈರಾಣು ನಿಯಂತ್ರಿಸಲು ಅನುಸರಿಸಬಹುದಾದ ಕ್ರಮಗಳ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕೊರೋನಾ ಎದುರಿಸುವ ಸಲುವಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸುತ್ತ, ವೈಯಕ್ತಿಕ ಸಂರಕ್ಷಣೆಗೆ ಬೇಕಾದ ಮುಖಗವಸು ಮತ್ತಿತರ ಸಲಕರಣೆಗಳ ಲಭ್ಯತೆಯಲ್ಲಿ ಕೊರತೆಯಾಗದಿರಲಿ ಎಂದು ಆಶಿಸಿದ್ದಾರೆ.
ದೇಶವೇ ಲಾಕ್ ಡೌನ್ ಆಗಿದ್ದು, ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮೀನುಗಾರರು ಮೊದಲಾದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಗದ ಕಾರ್ಮಿಕರ ಖಾತೆಗಳಿಗೆ ಇಂತಿಷ್ಟು ಹಣವನ್ನು ಜಮಾ ಮಾಡುತ್ತೇವೆಂಬ ಕೇಂದ್ರ ಸರ್ಕಾರದ ಪ್ರಕಟಣೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿ ಎಂದೂ ಸಹ ಅವರು ಮನವಿ ಮಾಡಿದ್ದಾರೆ.
“ಕೃಷಿ ಬೆಳೆ ಮಾರ್ಚ್ ಅಂತ್ಯದ ವೇಳೆಗೆ ಹೆಚ್ಚಿನ ರಾಜ್ಯಗಳಲ್ಲಿ ಕೊಯ್ಲಿಗೆ ಸಿದ್ಧವಾಗಿದೆ. ಭಾರತದ ಜನಸಂಖ್ಯೆಯ ಸುಮಾರು 60 ಪ್ರತಿಶತದಷ್ಟು ಜನರು ಆರ್ಥಿಕವಾಗಿ ಕೃಷಿಯ ಮೇಲೆ ಅವಲಂಬಿತರಾಗಿರುವುದರಿಂದ, ಬೆಳೆಗಳ ಕೊಯ್ಲು ಮತ್ತು ಸಂಗ್ರಹಣೆಯನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ರೈತರಿಂದ ಎಲ್ಲಾ ವಸೂಲಿಗಳನ್ನು ಆರು ತಿಂಗಳ ಅವಧಿಗೆ ಸ್ಥಗಿತಗೊಳಿಸಲು ಇದು ಸರಿಯಾದ ಸಮಯ” ಎಂದು ಸೋನಿಯಾ ಗಾಂಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter